For Quick Alerts
ALLOW NOTIFICATIONS  
For Daily Alerts
 

Sanju Samson: 2023ರ ಏಷ್ಯಾ ಕಪ್‌ನಿಂದ ಸಂಜು ಸ್ಯಾಮ್ಸನ್ ಔಟ್?; ವಿಶ್ವಕಪ್ ಆಡುವ ಕನಸು ಭಗ್ನ!

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನದ ನಂತರ, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರ ಭಾರತೀಯ ಕ್ರಿಕೆಟ್ ತಂಡದಲ್ಲಿನ ಸ್ಥಾನವು ಅಂತ್ಯಗೊಳ್ಳಲಿದೆ.

ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಬಿರುಸಿನ 51 ರನ್‌ಗಳೊಂದಿಗೆ ಏಕದಿನ ಸರಣಿಯನ್ನು ಕೊನೆಗೊಳಿಸಿದ ನಂತರ, ಸಂಜು ಸ್ಯಾಮ್ಸನ್ ಮೂರು ಟಿ20 ಪಂದ್ಯಗಳಲ್ಲಿ 12, 7 ಮತ್ತು 13 ರನ್ ಗಳಿಸಿದ್ದಾರೆ. ಇದರಿಂದಾಗಿ ಭಾರತ 2-3 ಅಂತರದಿಂದ ಸೋಲಲು ಕಾರಣವಾಯಿತು.

ಶುಕ್ರವಾರ, ಆಗಸ್ಟ್ 18ರಿಂದ ಡಬ್ಲಿನ್‌ನಲ್ಲಿ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿದ್ದರೂ, ಮುಂಬರುವ 2023ರ ಏಷ್ಯಾ ಕಪ್ ಪಂದ್ಯಾವಳಿಗೆ ವಿಕೆಟ್ ಕೀಪರ್-ಬ್ಯಾಟರ್ ಆಯ್ಕೆಯಾಗುವ ಸಾಧ್ಯತೆಯಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

sanju-samson-likely-to-be-ruled-out-from-team

2023ರ ಏಷ್ಯಾ ಕಪ್‌ ಪಂದ್ಯಾವಳಿಗೆ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟರೆ, ಅಕ್ಟೋಬರ್ 5ರಿಂದ ಭಾರತದಲ್ಲೇ ಆರಂಭವಾಗಲಿರುವ 2023ರ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಹಾದಿಯನ್ನು ಅಂತ್ಯಗೊಳಿಸಲಿದೆ ಎಂದು ಅರ್ಥೈಸಬಹುದು.

2023ರ ಏಷ್ಯಾ ಕಪ್ ಪಂದ್ಯಾವಳಿಯು ಆಗಸ್ಟ್ 30ರಂದು ಮುಲ್ತಾನ್‌ನಲ್ಲಿ ಆರಂಭವಾಗಲಿದೆ. ಆದರೆ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಸೆಪ್ಟೆಂಬರ್ 2ರಂದು ತನ್ನ ಅಭಿಯಾನ ಆರಂಭಿಸಲಿದೆ.

"ಶೀಘ್ರದಲ್ಲೇ ಭಾರತ ತಂಡದ ಆಯ್ಕೆ ಸಮಿತಿ ಏಷ್ಯಾ ಕಪ್‌ಗಾಗಿ ತಂಡವನ್ನು ಮಾತ್ರ ಆಯ್ಕೆ ಮಾಡುವ ಸಾಧ್ಯತೆಯಿದೆ. ವಿಶ್ವಕಪ್ ತಂಡವನ್ನು ನಂತರ ಆಯ್ಕೆ ಮಾಡಲಾಗುತ್ತದೆ," ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

sanju-samson-likely-to-be-ruled-out-from-team

ಮಧ್ಯಮ ಕ್ರಮಾಂಕದ ಬ್ಯಾಟರ್ ಸಂಜು ಸ್ಯಾಮ್ಸನ್ 13 ಪಂದ್ಯಗಳಲ್ಲಿ 55.71ರ ಏಕದಿನ ಸರಾಸರಿಯನ್ನು ಹೊಂದಿದ್ದಾರೆ. ಆದರೆ ಕೆಎಲ್ ರಾಹುಲ್ ತಂಡಕ್ಕೆ ಮರಳುವುದು ಮತ್ತು ಇಶಾನ್ ಕಿಶನ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಸರಣಿಶ್ರೇಷ್ಠ ಆಟಗಾರ ಪ್ರದರ್ಶನದಲ್ಲಿ ಸತತ ಮೂರು ಅರ್ಧಶತಕಗಳನ್ನು ಗಳಿಸುವುದರೊಂದಿಗೆ, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಜೊತೆಗೆ ಸಂಜು ಸ್ಯಾಮ್ಸನ್ ತಂಡದಿಂದ ಹೊರಗುಳಿಯಲಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ, ಮತ್ತೊಬ್ಬ ವೇಗಿ ಪ್ರಸಿದ್ಧ್ ಕೃಷ್ಣ ಅವರು 2023ರ ಏಷ್ಯಾ ಕಪ್‌ಗೆ ಪುನರಾಗಮನ ಮಾಡುವ ಸಾಧ್ಯತೆ ಇದೆ. 2022ರ ಆಗಸ್ಟ್ 20ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತದ ಪರ ಕೊನೆಯ ಬಾರಿಗೆ ಆಡಿದ ನಂತರ ಪ್ರಸಿದ್ಧ್ ಗಾಯದ ಕಾರಣದಿಂದ ಹೊರಗುಳಿದಿದ್ದರು.

"ಪ್ರಸಿದ್ಧ್ ಕೃಷ್ಣ ವೇಗ ಮತ್ತು ಬೌನ್ಸ್ ಸೃಷ್ಟಿಸಬಲ್ಲರು ಮತ್ತು ಭಾರತದ ವೇಗದ ದಾಳಿಗೆ ಹೊಸ ಆಯಾಮ ನೀಡುತ್ತಾರೆ. ಭಾರತದ ಆಯ್ಕೆ ಸಮಿತಿ ಏಷ್ಯಾ ಕಪ್‌ಗೆ ತಂಡವನ್ನು ಆಯ್ಕೆ ಮಾಡುವ ಮೊದಲು, ಆಗಸ್ಟ್ 18ರಂದು ಐರ್ಲೆಂಡ್ ವಿರುದ್ಧದ ಆರಂಭಿಕ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರು ಬೌಲಿಂಗ್ ನೋಡಲಿದ್ದಾರೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಏಷ್ಯಾ ಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಿದ ತಜ್ಞರ ಸಮಿತಿ; ರಾಹುಲ್, ಅಯ್ಯರ್ ಹೊರಗೆ

"ಕೆಎಲ್ ರಾಹುಲ್ ಸಾಕಷ್ಟು ಫಿಟ್ ಆಗಿದ್ದಾರೆ ಮತ್ತು ವಿಕೆಟ್ ಕೀಪಿಂಗ್ ಕೂಡ ಆರಂಭಿಸಿದ್ದಾರೆ. ಆದರೆ, ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಪಡೆದಿರುವ ಶ್ರೇಯಸ್ ಅಯ್ಯರ್ ಇನ್ನೂ ಶೇ.100ರಷ್ಟು ಸಿದ್ಧವಾಗಿಲ್ಲ. ಇಬ್ಬರೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಲ್ಲಿ ಅಭ್ಯಾಸ ಆಟಗಳಲ್ಲಿ ಭಾಗವಹಿಸಿದ್ದಾರೆ''.

ವೆಸ್ಟ್ ಇಂಡೀಸ್ ಪ್ರವಾಸದಿಂದ ಮರಳಿದ ಆಟಗಾರರ ಫಿಟ್‌ನೆಸ್ ಅನ್ನು ತಂಡದ ಮತ್ತು ಎನ್‌ಸಿಎ ಫಿಸಿಯೋಗಳು ಮೌಲ್ಯಮಾಪನ ಮಾಡಲಿದ್ದಾರೆ. ಹೀಗಾಗಿ ಏಷ್ಯಾ ಕಪ್‌ಗೆ ತಂಡವನ್ನು ಪ್ರಕಟಿಸುವಲ್ಲಿ ವಿಳಂಬವಾಗಿದೆ ಎಂದು ವರದಿಯಾಗಿದೆ.

Story first published: Thursday, August 17, 2023, 14:36 [IST]
Other articles published on Aug 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+