ಸುಲಭವಾಗಿ ಸಿಕ್ಸರ್ ಸಿಡಿಸುವ ಸಂಜು ಸ್ಯಾಮ್ಸನ್ ತಾಕತ್ತಿನ ಗುಟ್ಟು..!

ನೋಡಲು ಕಾಲೇಜು ಹುಡುಗನಂತೆ ಕಾಣಿಸುವ ಸಂಜು ಸ್ಯಾಮ್ಸನ್ ಮೈದಾನದಲ್ಲಿ ಸಿಕ್ಸರ್ ಹೊಡೆಯಲು ನಿಂತರೆ ಯಾವೊಬ್ಬ ಕೆರಿಬಿಯನ್ ದೈತ್ಯನಿಗೂ ಕಮ್ಮಿ ಏನಿಲ್ಲ. ಆಸ್ಟ್ರೇಲಿಯಾದ ಕ್ರಿಕೆಟಿಗರಂತೆ ದೊಡ್ಡ ಆಕಾರವನ್ನು ಹೊಂದಿಲ್ಲದಿದ್ದರೂ ಆಕರ್ಷಕವಾಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸಬಲ್ಲ. ಹರಿಣಗಳ ನಾಡಿನಿಂದ ಬಂದವನಲ್ಲದಿದ್ದರೂ, ಚಿರತೆಯಂತೆ ನೆಗೆದು ಚೆಂಡನ್ನ ಹಿಡಿಯಬಲ್ಲ ಈತ.
ಐಪಿಎಲ್ 13ನೇ ಆವೃತ್ತಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಎಂಬ ಸಿಂಹದ ಮರಿ ತೋಳ್ಬಲದ ಕುರಿತು ಈಗ ಸಾಕಷ್ಟು ಚರ್ಚೆಯಾಗ್ತಿದೆ. ಸ್ಲಿಮ್ ಆಗಿ ಕಾಣುವ ಈ ಹುಡುಗ ಸಿಕ್ಸರ್‌ಗಳನ್ನು ಲೀಲಾಜಾಲವಾಗಿ ಹೇಗೆ ಸಿಡಿಸ್ತಾನೆ ಅನ್ನೋದು ಕೂಡ ಕುತೂಹಲಕಾರಿ ವಿಷಯ.

ಶಾರ್ಜಾದಲ್ಲಿ ಪ್ರೀತಿ ಹುಡುಗರ ವಿರುದ್ಧ 7 ಸಿಕ್ಸರ್ ಸಿಡಿಸಿದ
ಹೌದು, ಶಾರ್ಜಾದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿ ಆಟವಾಡಿದ ಸಂಜು 42 ಎಸೆಗಳಲ್ಲಿ 89ರನ್ ಬಾರಿಸಿದ. ಈತನ ಇನ್ನಿಂಗ್ಸ್‌ನಲ್ಲಿ ಏಳು ಬಾರಿ ಚೆಂಡು ಬೌಂಡರಿ ಗೆರೆ ದಾಟಿತ್ತು. 202ರ ಸ್ಟ್ರೈಕ್‌ರೇಟ್‌ನಲ್ಲಿ ಸ್ಯಾಮ್ಸನ್ ಆಟಕ್ಕೆ ಮನಸೋಲದವರೇ ಇರಲಿಲ್ಲ.
ಸಂಜು ಸ್ಯಾಮ್ಸನ್ ಭಾರತದ ಭವಿಷ್ಯದ ಎಂ.ಎಸ್. ಧೋನಿ ಎಂದ ಶಶಿ ತರೂರ್, ಒಪ್ಪಲಿಲ್ಲ ಗೌತಮ್ ಗಂಭೀರ್!

ಧೋನಿ ಟೀಮ್‌ಗೆ ಸಿಕ್ಸರ್ ರುಚಿ ತೋರಿಸಿದ್ದ ಕೇರಳ ಕ್ರಿಕೆಟರ್
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಸ್ಯಾಮ್ಸನ್ ಆಟ ಬೊಂಬಾಟ್ ಆಗಿತ್ತು. ಕೇವಲ 32 ಎಸೆಗಳಲ್ಲಿ 72ರನ್ ಚಚ್ಚಿದ್ದ ಸಂಜು ತನ್ನ ತಾಕತ್ತನ್ನು ಪ್ರದರ್ಶಿಸಿದ್ರು. ಈತನ ಇನ್ನಿಂಗ್ಸ್‌ನಲ್ಲಿ 9 ಭರ್ಜರಿ ಸಿಕ್ಸರ್‌ಗಳಿದ್ದವು.
ಚೆನ್ನೈ ತಂಡವನ್ನು ತನ್ನ ಮೊದಲ ಪಂದ್ಯದಲ್ಲೇ ಸೋಲಿಸಲು ಪ್ರಮುಖ ಕಾರಣ ಈತನ ಸ್ಫೋಟಕ ಬ್ಯಾಟಿಂಗ್ ಕೂಡ ಒಂದು.

ಸುಲಭವಾಗಿ ಸಿಕ್ಸರ್ ಸಿಡಿಸುವ ಸಂಜು ಸ್ಯಾಮ್ಸನ್
ಕ್ರೀಸ್‌ನಲ್ಲಿ ಚಲಿಸದೆ ಬೃಹತ್ ಸಿಕ್ಸರ್‌ಗಳನ್ನು ಸಿಡಿಸುವ ತಾಕತ್ತನ್ನು ಹೊಂದಿದ್ದಾನೆ ಸಂಜು ಸ್ಯಾಮ್ಸನ್. ಕೇವಲ 25 ವರ್ಷ ವಯಸ್ಸಿನ ಸಂಜು ಈ ಮಟ್ಟಿಗೆ ಪವರ್‌ಫುಲ್ ಹಿಟ್ಟರ್ ಆಗಲು ಕಾರಣ ಏನು ಎಂಬುದು ಅನೇಕ ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರವನ್ನ ಸ್ವತಃ ಸಂಜು ಹೇಳಿದ್ದಾನೆ.
ಒಂದೇ ಓವರ್‌ನಲ್ಲಿ 5 ಸಿಕ್ಸರ್ ಚಚ್ಚಿದ ತೆವಾಟಿಯಗೆ ಥ್ಯಾಂಕ್ಸ್ ಹೇಳಿದ ಯುವಿ..!

ಸಂಜು ಸಿಕ್ಸರ್ ಸೀಕ್ರೆಟ್ ಆತನ ತಂದೆ
ನಾನು ವರ್ಷಪೂರ್ತಿ ಚೆಂಡನ್ನು ಅದ್ಭುತವಾಗಿ ಹೊಡೆಯುತ್ತಿದ್ದೇನೆ. ನಾನು ಯಾವಾಗಲೂ ಆತ್ಮವಿಶ್ವಾಸದಿಂದ ಆಡಿದ್ದೇನೆ. ಪಂದ್ಯಗಳನ್ನು ಅತ್ಯಂತ ಎಂಜಾಯ್ ಮಾಡ್ತಾ ಕಳೆದಿದ್ದೇನೆ. ಎಂದು ಹೇಳುವ ಸಂಜು ಸಿಕ್ಸರ್‌ಗಳ ಬಗ್ಗೆ ಹೇಳಬೇಕೆಂದರೆ ಅದು ಜೀನ್‌ಗಳ ಪರಿಣಾಮವಾಗಿದೆ. ಏಕೆಂದರೆ ನಮ್ಮ ತಂದೆ ತುಂಬಾ ಕಠಿಣ, ಶಕ್ತಿಶಾಲಿ ವ್ಯಕ್ತಿ ಎಂದಿದ್ದಾರೆ ಸ್ಯಾಮ್ಸನ್. ಅಂದರೆ ತನ್ನ ತಂದೆಯಿಂದಲೇ ನನಗೆ ಈ ತೋಳ್ಬಲ ಬಂದಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications