For Quick Alerts
ALLOW NOTIFICATIONS  
For Daily Alerts
 

ಸಚಿನ್ ಮಗಳು ಸಾರಾ ಮತ್ತು ಶುಭ್ಮನ್ ಗಿಲ್‌ ಡೇಟಿಂಗ್? ಫೋಟೊಗಳಿಂದ ನೆಟಿಜನ್‌ಗಳ ಕೈಗೆ ಸಿಕ್ಕಿಬಿದ್ದರು!

Sara Tendulkar

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಕ್ರಿಕೆಟಿಗನೊಬ್ಬನ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗುಸು ಗುಸು ಸುದ್ದಿ ಆಗಾಗ್ಗೆ ಕೇಳಿಬರುತ್ತಿರುತ್ತದೆ. ಈಗಾಗಲೇ ಆಕೆ ಆ ಕ್ರಿಕೆಟಿಗನ ಇನ್‌ಸ್ಟಾಗ್ರಾಂ ಕೂಡ ಫಾಲೋ ಮಾಡಿದ್ದಾರೆ.

ಸಾರಾಗಿಂತ ಒಂದು ವರ್ಷ ಚಿಕ್ಕವನಾಗಿರೋ ಟೀಂ ಇಂಡಿಯಾ ಕ್ರಿಕೆಟಿಗ ಶುಭ್ಮನ್ ಗಿಲ್, ಸದ್ಯ ಕ್ರಿಕೆಟ್ ದುನಿಯಾದಲ್ಲಿ ಮೋಸ್ಟ್ ಹ್ಯಾಂಡ್ಸಮ್ ಕ್ರಿಕೆಟಿಗ. 2018ರ ಅಂಡರ್ ನೈಂಟೀನ್ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಶುಭಮನ್, ಹೈಯೆಸ್ಟ್ ರನ್ ಗೆಟರ್ ಆಗಿ ಹೊರಹೊಮ್ಮಿದ್ದ. ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಅಂತಲೇ ಗುರುತಿಸಿಕೊಂಡಿದ್ದ ಶುಭ್ಮನ್ ಐಪಿಎಲ್‌ನಲ್ಲಿ ಕೆಕೆಆರ್ ಪರ ಮಿಂಚು ಹರಿಸಿ ಟೀಂ್ ಇಂಡಿಯಾ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಶುಭ್ಮನ್ ಮತ್ತು ಸಾರಾ ತೆಂಡೂಲ್ಕರ್ ಡೇಟಿಂಗ್ ನಡೆಸುತ್ತಿರಬಹುದೆಂಬ ಸುದ್ದಿಗಳಿಗೆ ಇದೀಗ ಮತ್ತಷ್ಟು ಪುರಾವೆ ಸಿಕ್ಕಿದೆ. ನೆಟ್ಟಿಗರು ಸಾರಾ ಮತ್ತು ಶುಭ್ಮನ್ ಗಿಲ್ ಫೋಟೋವನ್ನ ತಾಳೆ ಮಾಡಿ ನೋಡಿದ್ದಾರೆ. ಇಬ್ಬರು ಒಂದೇ ಜಾಗದಲ್ಲಿ ಫೋಟೋ ತೆಗೆದಿರಬಹುದು ಎನ್ನಲಾದ ಸಾಕ್ಷಿಗಳು ಲಭಿಸಿವೆ.

ಗೋವಾದಲ್ಲಿ ರಜಾ ದಿನಗಳನ್ನ ಕಳೆದ ಸಾರಾ ಮತ್ತು ಶುಭ್ಮನ್?

ಗೋವಾದಲ್ಲಿ ರಜಾ ದಿನಗಳನ್ನ ಕಳೆದ ಸಾರಾ ಮತ್ತು ಶುಭ್ಮನ್?

ಇತ್ತೀಚೆಗೆ, ಸಾರಾ ಅವರು ಗೋವಾ ಪ್ರವಾಸದ ಫೋಟೋಗಳನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲಿ ಅವರು ಸ್ನೇಹಿತರೊಂದಿಗೆ ಹೊಸ ವರ್ಷವನ್ನು ಆಚರಿಸಿದರು. ಆದಾಗ್ಯೂ, ಆಕೆಯ ಇತ್ತೀಚಿನ ಫೋಟೋಗಳು ಈ ಗಾಸಿಪ್ ಹುಟ್ಟುಹಾಕಿದೆ. ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಒಟ್ಟಿಗೆ ಗೋವಾದಲ್ಲಿ ವಿಹಾರ ಮಾಡಿದ್ದರೆ ಎಂದು ನೆಟಿಜನ್‌ಗಳು ನಂಬಿದ್ದಾರೆ.

ಶುಭ್ಮನ್ ಗಿಲ್ ಕಾರಿನಲ್ಲಿ ಕುಳಿತಿರುವ ಫೋಟೋ!

ಶುಭ್ಮನ್ ಗಿಲ್ ಕಾರಿನಲ್ಲಿ ಕುಳಿತಿರುವ ಫೋಟೋ!

ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಫೋಟೋದಲ್ಲಿ, ಸಾರಾ ಅವರು ಕಾರಿನಲ್ಲಿ ಕುಳಿತು ಬೀಚ್‌ನಲ್ಲಿ ಸೂರ್ಯಾಸ್ತವನ್ನು ಆನಂದಿಸುತ್ತಿರುವುದನ್ನು ಕಾಣಬಹುದು ಮತ್ತು ಇದು ಗೋವಾದ ಪ್ರದೇಶ ಎಂದು ತೋರುತ್ತದೆ. ಸಾರಾ ಅವರ ಇತ್ತೀಚಿನ ಕಾರ್ ಸೆಲ್ಫಿಯು ಶುಭ್ಮನ್ ಗಿಲ್‌ನ ಮಹೀಂದ್ರಾ ಥಾರ್‌ನೊಳಗೆ ತೆಗೆದ ಫೋಟೋದಂತೆ ಕಾಣುತ್ತಿದೆ. ಈ ಮಹೀಂದ್ರಾ ಥಾರ್ ಅನ್ನು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಆನಂದ್ ಮಹೀಂದ್ರ ಅವರು ಗಿಲ್‌ಗೆ ಉಡುಗೊರೆಯಾಗಿ ನೀಡಿದ್ದರು.

KL ರಾಹುಲ್ ಕುರಿತು ನನಗೆ ದ್ವೇಷವಿಲ್ಲ, ಆದ್ರೆ ರಹಾನೆಗೆ ನಾಯಕತ್ವ ಕೊಡಬೇಕಿತ್ತು: ವಾಸಿಂ ಜಾಫರ್

ಹೊಸ ವರ್ಷ ಒಟ್ಟಿಗೆ ಆಚರಿಸಿತ್ತೆ ಈ ಯುವ ಜೋಡಿ?

ಶುಬ್‌ಮನ್ ಇತ್ತೀಚೆಗೆ ಅವರು ಸಾರಾ ಇರುವಂತಹ ಸ್ಥಳಗಳಲ್ಲಿಯೇ ಹೊಸ ವರ್ಷವನ್ನು ಆಚರಿಸುತ್ತಿರುವ ಫೋಟೋಗಳನ್ನ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. "ನನ್ನ ಹೊಸ ಮನಸ್ಥಿತಿಯನ್ನು ಸಂಕ್ಷಿಪ್ತವಾಗಿ ತಿಳಿಯಲು ಬಲಕ್ಕೆ ಸ್ವೈಪ್ ಮಾಡಿ" ಎಂದು ಅವರ ಪೋಸ್ಟ್ ಬರೆದುಕೊಂಡಿದ್ದರು.

ಈ ಎಲ್ಲಾ ಕಾಕತಾಳೀಯತೆಗಳು, ಸಾರಾ ಮತ್ತು ಶುಭ್ಮನ್ ಅವರ ಫೋಟೋಗಳ ನಡುವಿನ ಸಾಮ್ಯತೆಗಳು ವದಂತಿಗಳಾಗಿ ರೂಪುಗೊಂಡವು. ಅದ್ರಲ್ಲೂ ನೆಟಿಜನ್‌ಗಳ ಕೈಗೆ ಸಿಕ್ಕಿದ್ರಂತೂ ಕೇಳಬೇಕೆ.

ಐಪಿಎಲ್ ವೇಳೆ ಮೊದಲು ಗಾಸಿಪ್ ಹುಟ್ಟಿಕೊಂಡಿತು

ಐಪಿಎಲ್ ವೇಳೆ ಮೊದಲು ಗಾಸಿಪ್ ಹುಟ್ಟಿಕೊಂಡಿತು

ಸಾರಾ ಮತ್ತು ಶುಭಮನ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಗಾಸಿಪ್ ಸುದ್ದಿ ಕಳೆದೊಂದು ವರ್ಷದಿಂದ ಕೇಳಿ ಬರ್ತಾನೆ ಇತ್ತು. ಸ್ವತಃ ಸಾರಾ, ಗಿಲ್ ಜೊತೆ ಡೇಟಿಂಗ್​ನಲ್ಲಿದ್ದೀನಿ ಅನ್ನೋ ಗಾಸಿಪ್​ಗೆ ಕಿಡಿ ಹಚ್ಚಿದ್ದಳು. ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ, ಸಾರಾ ಇನ್​ಸ್ಟಾಗ್ರಾಮ್​ನಲ್ಲಿ ಮಾಡಿದ ಪೋಸ್ಟ್, ಇಷ್ಟೆಲ್ಲಾ ಗಾಸಿಪ್ ಹುಟ್ಟಿಕೊಳ್ಳಲು ಮೊದಲ ಕಾರಣವಾಗಿದೆ.

ಕಳೆದ ವರ್ಷ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ ವೇಳೆ ಸೂರ್ಯಕುಮಾರ್ ಬಿರುಸಾಗಿ ಹೊಡೆದ ಚೆಂಡು, ಬೌಂಡರಿಲೈನ್ ದಾಟೋದ್ರಲ್ಲಿತ್ತು. ಆದ್ರೆ ಶುಬ್‌ಮನ್ ಆ ಚೆಂಡನ್ನು ಡೈವ್ ಹೊಡೆದು ತಡೆದಿದ್ರು. ಗಿಲ್ ಸಾಲಿಡ್ ಫಿಲ್ಡಿಂಗ್ ಮಾಡಿದ ಫೋಟೋವನ್ನ, ಸಾರಾ ಇನ್‌ಸ್ಟಾಗ್ರಾಮ್ ಸ್ಟೋರಿಗೆ ಹಾಕಿಕೊಂಡಿದ್ದಳು. ಅಷ್ಟೇ ಅಲ್ಲ. ಅದಕ್ಕೆ ಮೂರು ಹಾರ್ಟ್ ಸಿಂಬಲ್ ಕೂಡ ಹಾಕಿದ್ದರು. ಇಲ್ಲಿಂದಲೇ ಸಾರಾ ಹಾಗೂ ಶುಭ್ಮನ್ ಡೇಟಿಂಗ್ ನಡೆಸುತ್ತಿದ್ದಾರೆಂಬ ಗಾಸಿಪ್ ಹಬ್ಬಿತು.

ಇದುವರೆಗೂ ಸಾರಾ ಮತ್ತು ಶುಭ್ಮನ್ ಯಾವುದೇ ಕಮೆಂಟ್ ಮಾಡಿಲ್ಲ

ಇದುವರೆಗೂ ಸಾರಾ ಮತ್ತು ಶುಭ್ಮನ್ ಯಾವುದೇ ಕಮೆಂಟ್ ಮಾಡಿಲ್ಲ

ಸಾರಾ ತೆಂಡೂಲ್ಕರ್ ಆಗಲಿ ಶುಭ್ಮನ್ ಆಗಲಿ ಈವರೆರೆ ಇಬ್ಬರ ಸಂಬಂಧದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇನ್​ಸ್ಟಾದಲ್ಲಿ ಕೆಲವು ಪೋಸ್ಟ್​​ಗಳಿಗೆ ಕಾಮೆಂಟ್ ಬರೆಯುತ್ತಿರುತ್ತಾರೆ. ಇಬ್ಬರ ಫಾಲೋವರ್ಸ್​ಗಳು ಇವರ ಪೋಸ್ಟ್ ಅನ್ನು ಇಷ್ಟ ಪಡುತ್ತಿರುತ್ತಾರೆ.

Rishabh Pant ಬಾಯಲ್ಲಿ ಬ್ಯಾಟ್ ಬೀಸುವುದನ್ನು ಬಿಡ್ಬೇಕು!!! ಬೇಕಿತ್ತಾ ಪಂತ್... | Oneindia Kannada

ಮಾಡೆಲಿಂಗ್‌ಗೆ ಜಗತ್ತಿಗೆ ಎಂಟ್ರಿ ಕೊಟ್ಟಿರುವ ಸಾರಾ ತೆಂಡೂಲ್ಕರ್

ಇತ್ತೀಚೆಗಷ್ಟೇ ಸಾರಾ ತೆಂಡೂಲ್ಕರ್ ತಮ್ಮ ಮಾಡೆಲಿಂಗ್ ವೃತ್ತಿ ಜೀವನವನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಇಬ್ಬರು ಮಾಡೆಲ್ ಗಳ ಜೊತೆ ಪ್ರಖ್ಯಾತ ಕ್ಲಾತಿಂಗ್ ಬ್ರ್ಯಾಂಡ್ ನ ವೀಡಿಯೋದಲ್ಲಿ ಸಾರಾ ತೆಂಡುಲ್ಕರ್ ಕಾಣಿಸಿಕೊಂಡಿದ್ದಾರೆ.

Story first published: Monday, January 10, 2022, 10:31 [IST]
Other articles published on Jan 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+