Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿವಿಎಸ್‌ ಲಕ್ಷ್ಮಣ್, ಎವರ್ಟನ್ ವೀಕ್ಸ್‌ ದಾಖಲೆ ಸರಿಗಟ್ಟಿದ ಸರ್ಫರಾಜ್‌ ಖಾನ್‌!

Sarfaraz Khan surpasses VVS Laxman, Everton Weekes in first-class elite list

ರಾಜ್‌ಕೋಟ್‌, ಫೆಬ್ರವರಿ 4: ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ ಅರ್ಫರಾಜ್‌ ಖಾನ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಈಗಿನ್ನೂ 22ರ ಹರೆಯದವರಾದ ಸರ್ಫರಾಜ್‌ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಭಾರತದ ದಂತಕತೆ ವಿವಿಎಸ್‌ ಲಕ್ಷ್ಮಣ್ ಸೇರಿದಂತೆ ವಿಶ್ವದ ಕ್ರಿಕೆಟಿಗರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌರಾಷ್ಟ್ರ-ಮುಂಬೈ ನಡುವಣ ಎಲೈಟ್ ಗ್ರೂಪ್ 'ಎ' ಮತ್ತು 'ಬಿ'ಯ 8ನೇ ಸುತ್ತಿನ ಪಂದ್ಯದಲ್ಲಿ ಸರ್ಫರಾಜ್‌ ಈ ಅಪರೂಪದ ದಾಖಲೆಗಾಗಿ ಗುರುತಿಸಿಕೊಂಡಿದ್ದಾರೆ.

ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ತಾನು ಔಟ್ ಎನಿಸಿಕೊಳ್ಳುವುದಕ್ಕೂ ಮುನ್ನ ಅತ್ಯಧಿಕ ರನ್ ಬಾರಿಸಿದ ವಿಶ್ವದ 7ನೇ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಸರ್ಫರಾಜ್‌ ಕಾರಣರಾಗಿದ್ದಾರೆ.

ದಾಖಲೆಯಾಗಿದ್ದು ಹೇಗೆ?

ದಾಖಲೆಯಾಗಿದ್ದು ಹೇಗೆ?

ಸರ್ಫರಾಜ್‌ ಖಾನ್ ಹಿಂದಿನ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಂದರೆ ಹಿಮಾಚಲ್ ಪ್ರದೇಶ್ ಮತ್ತು ಉತ್ತರ ಪ್ರದೇಶ ವಿರುದ್ಧದ ಪಂದ್ಯಗಳಲ್ಲಿ ವಿಕೆಟ್‌ ನೀಡದೆ 226, 301 ರನ್ ಬಾರಿಸಿದ್ದರು. ಅದಾಗಿ ಈಗ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 78 ರನ್ ಬಾರಿಸಿ ಕಮಲೇಶ್ ಮಕ್ವಾನಗೆ ವಿಕೆಟ್‌ ಒಪ್ಪಿಸಿದ್ದರು. ಹೀಗಾಗಿ ಔಟ್ ಅನ್ನಿಸುವುದಕ್ಕೂ ಮುನ್ನ ಸರ್ಫರಾಜ್ 605 ರನ್ ಬಾರಿಸಿದಂತಾಗಿದೆ. ಇದು ದಾಖಲೆಗೆ ಕಾರಣವಾಗಿದೆ.

ದಾಖಲೆ ಸಾಲಿನಲ್ಲಿ 11 ಮಂದಿ

ದಾಖಲೆ ಸಾಲಿನಲ್ಲಿ 11 ಮಂದಿ

ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಔಟ್ ಎನಿಸಿಕೊಳ್ಳುವುದಕ್ಕೂ ಮುನ್ನ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಸಾಲಿನಲ್ಲಿ (500+ ರನ್‌ ಬಾರಿಸಿದವರಲ್ಲಿ) ಒಟ್ಟು 12 ಮಂದಿಯಿದ್ದಾರೆ. ಈ ಪಟ್ಟಿಯಲ್ಲಿರುವ ವೆರಿವೆರಿ ಸ್ಪೆಷಲ್ ಖ್ಯಾತಿಯ ಲಕ್ಷ್ಮಣ್ ಎರಡು ಬಾರಿ ಇದೇ ಸಾಧನೆಗಾಗಿ ಗಮನ ಸೆಳೆದಿದ್ದರು (ಚಿತ್ರದಲ್ಲಿ ಎವರ್ಟನ್ ವೀಕ್ಸ್).

ವಿವಿಎಸ್‌ ಲಕ್ಷ್ಮಣ್ ದಾಖಲೆ ಬದಿಗೆ

ವಿವಿಎಸ್‌ ಲಕ್ಷ್ಮಣ್ ದಾಖಲೆ ಬದಿಗೆ

ದಾಖಲೆ ಯಾದಿಯಲ್ಲಿ 11 ಮತ್ತು 12ನೇ ಸ್ಥಾನದಲ್ಲಿರುವ ವಿವಿಎಸ್ ಲಕ್ಷ್ಮಣ್ 1997/98ರಲ್ಲಿ 538 ರನ್, 1999/00ರಲ್ಲಿ 530 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಈಗ ದಾಖಲೆ ಪಟ್ಟಿಯಲ್ಲಿ ಸರ್ಫರಾಜ್‌ 7ನೇ ಸ್ಥಾನದಲ್ಲಿರುವುದರಿಂದ ಲಕ್ಷ್ಮಣ್ ಸೇರಿದಂತೆ ಇನ್ನೂ ಕೆಲವರ ದಾಖಲೆ ಬದಿಗೆ ಸರಿದಿದೆ.

ದಾಖಲೆ ಸಾಲಿನ ವಿಶ್ವದ ಸಾಧಕರು

ದಾಖಲೆ ಸಾಲಿನ ವಿಶ್ವದ ಸಾಧಕರು

ಕೆಸಿ ಇಬ್ರಾಹಿಂ 709 (ಭಾರತ, 1947/48), ಗ್ರೇಮ್ ಹಿಕ್ 645 (ಇಂಗ್ಲೆಂಡ್, 1990), ವಿಜಯ್ ಮರ್ಚೆಂಟ್ 634 (ಭಾರತ 1941/42), ಪ್ಯಾಟ್ಸಿ ಹೆಂಡ್ರೆನ್ 630 (ಇಂಗ್ಲೆಂಡ್, 1929/30), ಸುಬ್ರಮಣಿಯಮ್ ಬದರಿನಾಥ್ 625 (ಭಾರತ, 2007/08), ಪಂಕಜ್ ಧರ್ಮಾನಿ 608, (ಭಾರತ, 1999/00), ಸರ್ಫರಾಜ್ ಖಾನ್ 605 (ಭಾರತ, 2019/20), ಎವರ್ಟನ್ ವೀಕ್ಸ್‌ 575 (ವೆಸ್ಟ್ ಇಂಡೀಸ್, 1950), ಫ್ರೆಡ್ಡಿ ಜೇಕ್ಮನ್ 558 (ಜಮೈಕಾ, 1951), ಬಾಬ್ ಸಿಂಪ್ಸನ್ 545 (ಆಸ್ಟ್ರೇಲಿಯಾ, 1959/60), ವಿವಿಎಸ್ ಲಕ್ಷ್ಮಣ್ 538 (ಭಾರತ, 1997/98), ಲಕ್ಷ್ಮಣ್ 530 (1999/00) (ಚಿತ್ರದಲ್ಲಿ ಕೆಸಿ ಇಬ್ರಾಹಿಂ).

Story first published: Wednesday, February 5, 2020, 11:40 [IST]
Other articles published on Feb 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+