ಸಚಿನ್ ಚಿತ್ರದ ಪ್ರೀಮಿಯರ್ ಶೋಗೆ ಸೆಹ್ವಾಗ್ ಬಂದಿರಲಿಲ್ಲವೇಕೆ?
ನವದೆಹಲಿ, ಮೇ 27: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೀವನಾಧರಿತ 'ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಪ್ರೀಮಿಯರ್ ಶೋ, ಫಸ್ಟ್ ಡೇ ಫಸ್ಟ್ ಶೋ ಮಿಸ್ ಮಾಡಿಕೊಂಡ ಮಾಜಿ ಸ್ಟಾರ್ ಬಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ಹಾಸ್ಯಮಯವಾಗಿ ಟ್ವೀಟ್ ಮಾಡಿ ಶೋ ಮಿಸ್ ಆದ ಕಾರಣ ಹೇಳಿದ್ದಾರೆ. ದೇವರ ಕರೆ ಬಂದರೂ ಪತ್ನಿಯ ಕರೆಗೆ ಓಗೊಡಬೇಕಾಯಿತು ಎಂದಿದ್ದಾರೆ.
ಇದಕ್ಕೆ ಏನು ಕಾರಣ ಎಂದು ಎಲ್ಲರೂ ಕೇಳಲು ಆರಂಭಿಸಿದ್ದರಂತೆ, ಇದಕ್ಕೆ ಉತ್ತರವಾಗಿ ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. ಸಚಿನ್ ಸಿನಿಮಾ ಹಾಗೂ ಸೆಹ್ವಾಗ್ ಅವರ ವೈವಿಧ್ಯಮಯ ಟ್ವೀಟ್ ಗಳ ಬಗ್ಗೆ ಮುಂದೆ ಓದಿ..[ಸಚಿನ್ ಸಚಿನ್ ಎಂದು ಕೂಗುತ್ತಾ ಖುಷಿಯಿಂದ ಭಾವುಕರಾದ ಫ್ಯಾನ್ಸ್ !]
ನಾಯಿಯ ಬಗ್ಗೆ, ಮಿಥುನ್ ಮನಾಸ್ ಅವರು ಮಕ್ಕಳ ಆನಂದ ಬಗ್ಗೆ ಮಾಡಿದ ಟ್ವೀಟ್, 10 ಮಿಲಿಯನ್ ಹಿಂಬಾಲಕರನ್ನು ಹೊಂದಿದ ಖುಷಿಯ ಬಗ್ಗೆ ಸೆಹ್ವಾಗ್ ಟ್ವೀಟ್ ಗಳನ್ನು ಕಾಣಬಹುದು.

'ನಾನು ಸಿನಿಮಾ ನೋಡಲು ಹೊರಟ್ಟಿದ್ದೆ. ಅಷ್ಟರಲ್ಲಿ ನನ್ನ ಪತ್ನಿ ರಜೆಗೆಂದು ಬೇರೆ ಕಡೆ ಕರೆದುಕೊಂಡು ಹೊಂದರು. ಬೇರೆ ದಾರಿಯಿಲ್ಲದೆ ಸುಮ್ಮನಾದೆ' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.[ವಿಮರ್ಶೆ: 'ಕ್ರಿಕೆಟ್ ದೇವರ' ಅದ್ಭುತ ಆಟಕ್ಕೆ ಪ್ರೇಕ್ಷಕ ಮೂಕವಿಸ್ಮಿತ]
ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆ 'ಸಚಿನ್ ಎ ಬಿಲಿಯನ್ ಡ್ರೀಮ್ಸ್ ಬೆಳ್ಳಿತೆರೆಯ ಮೇಲೆ ನೋಡಿದ ಪ್ರೇಕ್ಷಕರು ಮನಸಾರೆ ಹೊಗಳಿದ್ದಾರೆ.
ಸಚಿನ್ ಅವರ ಜೀವನಗಾಥೆ ಯುವ ಜನಾಂಗಕ್ಕೆ ಸ್ಪೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಕೊಂಡಾಡಿದ್ದಾರೆ.
ಚಿತ್ರಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಸಂಗೀತ ನೀಡಿದ್ದಾರೆ. ರವಿ ಭಗಚಂದ್ರ ಎಂಬ ನಿರ್ಮಾಪಕರು 200 ನಾಟೌಟ್ ಎಂಬ ಬ್ಯಾನರ್ ನಡಿ ಈ ಚಿತ್ರವನ್ನು ಜೇಮ್ಸ್ ಎರ್ ಸ್ಕಿನ್ ನಿರ್ದೇಶಿಸಿದ್ದಾರೆ. ವಿಶ್ವದೆಲ್ಲೆಡೆ 2800 ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications