ಭಾರತ -ಪಾಕ್ ಪಂದ್ಯ ಎಲ್ಲಿ ನೋಡ್ತೀರಿ ನನಗೆ ತಿಳಿಸಿ : ಸೆಹ್ವಾಗ್
ನವದೆಹಲಿ, ಜೂನ್ 01: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಸಾಕು ಕ್ರಿಕೆಟ್ ಬಗ್ಗೆ ಎಬಿಸಿಡಿ ತಿಳಿಯದವರಿಗೂ ಏನೋ ಕುತೂಹಲವಿರುತ್ತದೆ. ಇನ್ನೂ ಅಪ್ಪಟ ಕ್ರಿಕೆಟ್ ಪ್ರೇಮಿಗಳಿಗೆ ಜೂನ್ 04 ಅಕ್ಷರಶಃ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತದೆ.
ಪಂದ್ಯ ವೀಕ್ಷಣೆಗಾಗಿ ತಯಾರಿ ಜೋರಾಗೇ ನಡೆಯುತ್ತದೆ. ಈ ಸಂಭ್ರಮದ ಬಗ್ಗೆ ತಿಳಿದುಕೊಳ್ಳುವ ಆಸೆಯನ್ನು ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ವ್ಯಕ್ತಪಡಿಸಿದ್ದಾರೆ.[ಟೀಂ ಇಂಡಿಯಾ ಪಂದ್ಯಗಳಿಗೆ ಫುಲ್ ಗೈಡ್]

ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಯುವುದು ಸದ್ಯಕ್ಕಂತೂ ಅನುಮಾನ. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಆಯೋಜನೆಯ ಪಂದ್ಯ ಭಾರಿ ಕುತೂಹಲ ಕೆರಳಿಸುತ್ತದೆ. ಈ ಒಂದು ಟೂರ್ನಮೆಂಟ್ ನಲ್ಲಿ ಮಾತ್ರ ಭಾರತದ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸಿದೆ.
ಚಾಂಪಿಯನ್ಸ್ ಟ್ರೋಫಿ 2017 ಪಂದ್ಯಗಳು ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ನಡೆಯಲಿವೆ. ಟೀಂ ಇಂಡಿಯಾ ಹಾಲಿ ಚಾಂಪಿಯನ್ ಆಗಿದೆಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು/ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ.
ಜೂನ್ 04ರಂದು ಎಜ್ ಬಾಸ್ಟನ್ ನಲ್ಲಿ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭ. ಸ್ಟಾರ್ ಸ್ಫೋರ್ಟ್ಸ್ 1, ಎಚ್ ಡಿ 1, 2, ಎಚ್ ಡಿ 2, 3, ಸ್ಟಾರ್ ಸ್ಫೋರ್ಟ್ಸ್ ತಮಿಳ್, ಹಾಟ್ ಸ್ಟಾರ್ .ಕಾಂನಲ್ಲಿ ಪಂದ್ಯ ವೀಕ್ಷಿಸಬಹುದು.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: India Vs Pak: Sehwag asks fans' plans
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications