ಪಾಕ್ ಕ್ರಿಕೆಟ್ ತಂಡಕ್ಕೆ ಗಾಯದ ಮೇಲೆ ಬರೆ, ಇನ್ನೂ 7 ಆಟಗಾರರಿಗೆ ಕೊರೊನಾ!

ಕರಾಚಿ, ಜೂನ್ 23: ಇಂಗ್ಲೆಂಡ್ ಪ್ರವಾಸ ಸರಣಿಯ ಹುಮ್ಮಸ್ಸಿನಲ್ಲಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪಾಕಿಸ್ತಾನದ ಮೂವರು ಆಟಗಾರರಿಗೆ ಕೊರೊನಾ ವೈರಸ್ ತಗುಲಿರುವುದು ಪತ್ತೆಯಾಗಿತ್ತು. ಮತ್ತೀಗ 7 ಮಂದಿಗೆ ಸೋಂಕು ತಗುಲಿದೆ. ಅಲ್ಲಿಗೆ ಸೋಂಕಿತ ಪಾಕ್ ಆಟಗಾರರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕ್ರಿಕೆಟ್ ಲೋಕದಲ್ಲಿ ಕೊರೊನಾ ಕಾಟ ಇತ್ತೀಚೆಗೆ ಆತಂಕ ಹೆಚ್ಚಿಸಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಂದಿ ಕ್ರಿಕೆಟರ್‌ಗಳು ಸೋಂಕಿಗೀಡಾಗಿದ್ದು ವರದಿಯಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಕ್ರಿಕೆಟರ್‌ಗಳು ಮಾರಕ ಸೋಂಕಿಗೆ ತುತ್ತಾಗಿದ್ದು, ಭಾರತದ ಕ್ರಿಕೆಟ್ ರಂಗಕ್ಕೂ ಆತಂಕ ಎದುರಾಗಿದೆ.
ಇಂಗ್ಲೆಂಡ್ vs ಪಾಕ್ ಪ್ರವಾಸ ಸರಣಿ, ಸೋಂಕಿಗೀಡಾಗಿರುವ ಆಟಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಟ್ಟು 10 ಮಂದಿಗೆ ಕೊರೊನಾ
ಸೋಮವಾರ ಪಾಕ್ ತಂಡದ ಆಲ್ ರೌಂಡರ್ ಶದಾಬ್ ಖಾನ್, ಅನ್ ಕ್ಯಾಪ್ಡ್ ಆಟಗಾರ ಹೈದರ್ ಅಲಿ, ವೇಗಿ ಹ್ಯಾರಿಸ್ ರೌಫ್‌ಗೆ ಮಾರಕ ಕೊರನಾವೈರಸ್ ಸೋಂಕು ಪಾಸಿಟಿವ್ ಬಂದಿತ್ತು. ಇದೀಗ ಕಾಶಿಫ್ ಭಟ್ಟಿ, ಮೊಹಮ್ಮದ್ ಹಸ್ನೈನ್, ಫಖರ್ ಜಮಾನ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹಫೀಜ್, ವಹಾಬ್ ರಿಯಾಜ್, ಮತ್ತು ಇಮ್ರಾನ್ ಖಾನ್‌ಗೂ ಸೋಂಕು ಆವರಿಸಿದೆ.

ಮಲಿಕ್, ಯೂನಿಸ್‌ಗೆ ಇನ್ನಷ್ಟೇ ಪರೀಕ್ಷೆ
ಈ ಹತ್ತು ಆಟಗಾರರಲ್ಲದೆ ಒಬ್ಬರು ಬೆಂಬಲ ಸಿಬ್ಬಂದಿಗೂ ಸೋಂಕು ತಾಗಿರುವುದಾಗಿ ಪಿಸಿಬಿ ಘೋಷಿಸಿದೆ. ಪಿಸಿಬಿ ಸಿಇಒ ವಾಸಿಮ್ ಖಾನ್ ಪ್ರಕಾರ ಕೊರೊನಾ ಪಾಸಿಟಿವ್ ಬಂದಿರುವ ಎಲ್ಲಾ 10 ಮಂದಿ ಆಟಗಾರರಲ್ಲೂ ಯಾವುದೇ ರೋಗಲಕ್ಷಣ ಕಂಡುಬಂದಿರಲಿಲ್ಲ. ಇನ್ನು ಶೊಯೆಬ್ ಮಲಿಕ್, ವಾಕರ್ ಯೂನಿಸ್ ಮತ್ತು ಕ್ಲಿಫ್ ಡಿಕಾನ್‌ಗೆ ಇನ್ನಷ್ಟೇ ಪರೀಕ್ಷೆ ನಡೆಯಬೇಕಿದೆ ಎಂದು ತಿಳಿದುಬಂದಿದೆ.

3 ಟೆಸ್ಟ್, 3 ಟಿ20ಐ ಪಂದ್ಯಗಳು
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಟಿ20ಐ ಸರಣಿಗಾಗಿ ಪಾಕ್ ತಂಡ 29 ಆಟಗಾರರಿರುವ ತಂಡ ಪ್ರಕಟಿಸಿತ್ತು. ಇಂಗ್ಲೆಂಡ್ vs ಪಾಕಿಸ್ತಾನ ಟೆಸ್ಟ್ ಸರಣಿ ಜುಲೈ 30ರಿಂದ ಆರಂಭಗೊಳ್ಳುವುದರಲ್ಲಿತ್ತು. ಮೊದಲ ಟೆಸ್ಟ್ ಲಂಡನ್‌ನಲ್ಲಿ ನಡೆಯಲಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಬದಲಾವಣೆಯಿಲ್ಲ
ಈಗ ಪಾಕಿಸ್ತಾನದ ಒಟ್ಟು 10 ಆಟಗಾರರಿಗೆ ಮಾರಕ ಸೋಂಕು ತಗುಲಿರುವುದು ಪಾಕ್‌ಗೆ ತಲೆಬಿಸಿ ತಂದಿದೆ. ಪಿಸಿಬಿ ಸಿಇಒ ವಾಸಿಮ್ ಖಾನ್ ಮಾತ್ರ 28ರ ವರೆಗೂ ಇಂಗ್ಲೆಂಡ್ ಪ್ರವಾಸ ಯೋಜನೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಟೆಸ್ಟ್ ತಂಡಕ್ಕೆ ಭೀತಿ ಇದ್ದಂತಿಲ್ಲ. ಇಂಗ್ಲೆಂಡ್ ತಲುಪಿ ಇನ್ನೊಮ್ಮೆ ಪರೀಕ್ಷಿಸಲ್ಪಟ್ಟ ಬಳಿಕ ಟೆಸ್ಟ್ ತಂಡ ಅಭ್ಯಾಸ ಆರಂಭಿಸಬಹುದಾಗಿದೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications