ಇಂಗ್ಲೆಂಡ್ ವಿರುದ್ಧದ ಒಡಿಐ ಸರಣಿಗೆ ಪಾಕ್ ತಂಡದಿಂದ ಶದಾಬ್ ಔಟ್

ದುಬೈ, ಏಪ್ರಿಲ್ 21: ಅನಾರೋಗ್ಯದ ಕಾರಣ ಪಾಕಿಸ್ತಾನದ ಯುವ ಲೆಗ್‌ಸ್ಪಿನ್ನರ್ ಶದಾಬ್ ಖಾನ್, ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಿಂದ ಹೊರಗುಳಿಯುವಂತಾಗಿದೆ.
ವೈರಲ್ ಸೋಂಕಿಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ 20 ವರ್ಷದ ಶದಾಬ್ ಹೊರಗುಳಿಯುವಂತಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಂಗ್ಲೆಂಡ್‌ನಲ್ಲೇ ಅವರಿಗೆ ಚಿಕಿತ್ಸೆಯ ವ್ಯವಸ್ಥೆ ಒದಗಿಸಿದೆ. ಅಲ್ಲದೆ ಮೇ 31ರಂದು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯದ ಹೊತ್ತಿಗೆ ಶದಾಬ್ ಚೇತರಿಸಕೊಳ್ಳುವ ಆಶಯ ಹೊಂದಿದೆ.
"ವಿಶ್ವಕಪ್‌ನಲ್ಲಿ ಆಡುವ ನಮ್ಮ ತಂಡದಲ್ಲಿ ಬದಲಾವಣೆ ತಂದುಕೊಳ್ಳಲು ಇನ್ನು 5 ರಿಂದ 6 ವಾರಗಳ ಸಮಯವಿದೆ. ಆ ಹೊತ್ತಿಗೆ ಎಲ್ಲವೂ ಸರಿ ಇರುತ್ತದೆ ಎಂದು ಆಶಿಸುತ್ತೇವೆ,'' ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.
ಇದೇ ವೇಳೆ ಶದಾಬ್ ಖಾನ್ ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಪಾಕ್ ತಂಡವನ್ನು ಸೇರಿಕೊಳ್ಳಲಿರುವ ಆಟಗಾರ ಯಾರೆಂಬುದು ಬಹಿರಂಗವಾಗಿಲ್ಲ. ಪಾಕಿಸ್ತಾನ ತಂಡ ಇತ್ತೀಚೆಗೆ ಪ್ರಕಟಿಸಿದ ತನ್ನ ಪ್ರಾಥಮಿಕ 15 ಆಟಗಾರರ ತಂಡಕ್ಕೆ ಮೊಹಮ್ಮದ್ ಆಮಿರ್ ಮತ್ತು ಆಸಿಫ್ ಅಲಿ ಸ್ಟ್ಯಾಂಡ್ ಬೈ ಆಟಗಾರರಾಗಿದ್ದಾರೆ.
ಐಸಿಸಿ ನಿಯಮಗಳ ಅನುಸಾರ ವಿಶ್ವಕಪ್‌ಗೆ ಪ್ರಕಟಿಸಲಾದ ತಂಡಗಳಲ್ಲಿ ಮೇ 23ರ ಒಳಗೆ ಯಾವುದೇ ರೀತಿಯ ಬದಲಾವಣೆಗಳನ್ನು ತಂದುಕೊಳ್ಳಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications