ಕೆಕೆಆರ್ ಅಭಿಮಾನಿಗಳ ಕ್ಷಮೆಯಾಚಿದ ಶಾರೂಖ್ ಖಾನ್

ಕೋಲ್ಕತ್ತಾ, ಮೇ 10: ಮುಂಬೈ ಇಂಡಿಯನ್ಸ್-ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ಹೀನಾಯವಾಗಿ ಸೋತಿದ್ದಕ್ಕೆ ಕೆಕೆಆರ್ ಸಹ ಮಾಲೀಕ ಶಾರೂಖ್ ಖಾನ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.
'ಕೀಡೆಯೆಂದರೆ ಸ್ಫೂರ್ತಿ. ಕ್ರೀಡೆಯಲ್ಲಿ ಸೋಲಲಿ-ಗೆಲ್ಲಲಿ; ಆ ಸೋಲು-ಗೆಲುವು ಲೆಕ್ಕಕ್ಕೆ ಬರುವುದಿಲ್ಲ. ಬದಲಾಗಿ ಸ್ಫೋರ್ತಿಯೇ ಮುಖ್ಯವಾಗುತ್ತದೆ. ಆದರೆ ಕೆಕೆಆರ್ ಸ್ಫೂರ್ತಿ ರಹಿತ ಪಂದ್ಯವನ್ನಾಡಿದ್ದಕ್ಕಾಗಿ ಅದರ ಮಾಲೀಕನಾಗಿರುವ ನಾನಿಂದು ಕೆಕೆಆರ್ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸುತ್ತೇನೆ' ಎಂದು ಶಾರೂಖ್ ಹೇಳಿದ್ದಾರೆ.
ಬುಧವಾರ ರಾತ್ರಿ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದಿದ್ದ ಮುಂಬೈ-ಕೋಲ್ಕತ್ತಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 211 ರನ್ ಗುರಿ ತಲುಪಲಾಗದೆ ಕೋಲ್ಕತ್ತಾ ಹೀನಾಯವಾಗಿ ಸೋತಿತ್ತು.
ಅತೀ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಕೋಲ್ಕತ್ತಾ 18.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 108 ರನ್ ಪೇರಿಸಿ ಮುಂಬೈ ವಿರುದ್ಧ 102 ರನ್ ಗಳಿಂದ ತಲೆ ಬಾಗಿತ್ತು. ಈ ಸಂದರ್ಭ ಪೆವಿಲಿಯನ್ ನಲ್ಲಿದ್ದ ಕೋಲ್ಕತ್ತಾ ಸಹ ಮಾಲೀಕರಾದ ನಟಿ ಜೂಹಿ ಚಾವ್ಲಾ ಮತ್ತು ಶಾರೂಕ್ ನಿರಾಶೆ ಅನುಭವಿಸಿದ್ದರು.
ಭರ್ಜರಿ ಗೆಲುವಿನ ಸಂಭ್ರಮಾಚರಣೆ ಮಾಡಿದ ಮುಂಬೈ ಇಂಡಿಯನ್ಸ್ ತಂಡ.
ಕೋಲ್ಕತ್ತಾ ಪರ ಕ್ರಿಸ್ ಲಿನ್, ನಿತೀಶ್ ರಾಣಾ, ಟಾಮ್ ಕರ್ರನ್ ಬಿಟ್ಟರೆ ಮತ್ಯಾರೂ 15ರ ಮೇಲೆ ರನ್ ಗಳಿಸದೆ ಸೋಲನ್ನು ಬರ ಮಾಡಿಕೊಂಡಿದ್ದು ಶಾರೂಕ್ ಮನಸ್ಸಿಗೆ ಘಾಸಿ ಮಾಡಿತ್ತು. ಇದನ್ನೇ ಉದ್ದೇಶಿಸಿ ಶಾರೂಕ್ ಕೆಕೆಆರ್ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. 'ಇವತ್ತು ಕೆಕೆಆರ್ ಕ್ರೀಡಾಸ್ಫೂರ್ತಿ ಮೆರೆಯಲಿಲ್ಲ' ಎಂದು ಕಿಂಗ್ ಖಾನ್ ಬೇಸರದಿಂದ ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications