Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾ ಕಪ್‌ 2022ರಿಂದ ಶಾಹೀನ್ ಅಫ್ರಿದಿ ಔಟ್; ಭಾರತ ನಿರಾಳವೆಂದ ವಕಾರ್ ಯೂನಿಸ್‌ಗೆ ತಿರುಗೇಟು

Shaheen Afridi Ruled Out Of Asia Cup 2022; Waqar Younis Takes Dig At Team India, Fans Give Fitting Reply

2022ರ ಏಷ್ಯಾ ಕಪ್‌ಗೂ ಮುನ್ನ ಪಾಕಿಸ್ತಾನ ತಂಡಕ್ಕೆ ಭಾರಿ ಪೆಟ್ಟು ನೀಡಿದ್ದು, ಸ್ಟಾರ್ ವೇಗಿ ಶಾಹೀನ್ ಶಾ ಅಫ್ರಿದಿ ಅವರು ಗಾಯದ ಸಮಸ್ಯೆಯಿಂದ ಮುಂಬರುವ ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವೈದ್ಯಕೀಯ ಸಲಹಾ ಸಮಿತಿಯು ಶಾಹೀನ್ ಅಫ್ರಿದಿಗೆ 4-6 ವಾರಗಳ ವಿಶ್ರಾಂತಿಗೆ ಸಲಹೆ ನೀಡಿದೆ ಎಂದು ಮಂಡಳಿ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ. ಶಾಹೀನ್ ಅಫ್ರಿದಿ ಪಾಕಿಸ್ತಾನದ ತವರಿನ ಇಂಗ್ಲೆಂಡ್ ವಿರುದ್ಧದ ಸರಣಿಯನ್ನೂ ಕಳೆದುಕೊಳ್ಳಲಿದ್ದಾರೆ.

ಶಾಹೀನ್ ಶಾ ಆಫ್ರಿದಿಗೆ ಮೊಣಕಾಲಿನ ಗಾಯ

ಶಾಹೀನ್ ಶಾ ಆಫ್ರಿದಿಗೆ ಮೊಣಕಾಲಿನ ಗಾಯ

ಪಾಕಿಸ್ತಾನದ ವೇಗಿ ಶಾಹೀನ್ ಶಾ ಆಫ್ರಿದಿ ಮೊಣಕಾಲಿನ ಗಾಯದಿಂದಾಗಿ ಏಷ್ಯಾ ಕಪ್ 2022ರಿಂದ ಹೊರಗುಳಿದಿದ್ದು, ಇದು ಬಾಬರ್ ಅಜಂ ತಂಡಕ್ಕೆ ದೊಡ್ಡ ಹೊಡೆತವಾಗಿದೆ. 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಬೃಹತ್ ಗೆಲುವಿನಲ್ಲಿ ಶಾಹೀನ್ ಅಫ್ರಿದಿ ದೊಡ್ಡ ಪಾತ್ರವನ್ನು ವಹಿಸಿದ್ದರು.

ಅಂದು ಟಿ20 ಮೆಗಾ ಇವೆಂಟ್‌ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ವಾಸ್ತವವಾಗಿ, ಪಾಕಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಸ್ಪರ್ಧೆಯ ಸೆಮಿಫೈನಲ್‌ಗೆ ತಲುಪುವಲ್ಲಿ ಶಾಹೀನ್ ಅಫ್ರಿದಿ ದೊಡ್ಡ ಪಾತ್ರವನ್ನು ವಹಿಸಿದ್ದರು. ಅವರ ಅನುಪಸ್ಥಿತಿಯು ಈಗ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಪಾಕಿಸ್ತಾನದ ಮೇಲೆ ಮೇಲುಗೈ ಸಾಧಿಸುತ್ತದೆ ಮತ್ತು ಪಾಕಿಸ್ತಾನದ ಆಡುವ ಹನ್ನೊಂದರ ಬಳಗವನ್ನು ದುರ್ಬಲಗೊಳಿಸುತ್ತದೆ ಎಂಬುದಂತು ನಿಜ.

ಭಾರತೀಯ ಅಗ್ರ ಬ್ಯಾಟರ್‌ಗಳಿಗೆ ದೊಡ್ಡ ನಿರಾಳವೆಂದ ವಕಾರ್

ಭಾರತೀಯ ಅಗ್ರ ಬ್ಯಾಟರ್‌ಗಳಿಗೆ ದೊಡ್ಡ ನಿರಾಳವೆಂದ ವಕಾರ್

ಶಾಹೀನ್ ಅಫ್ರಿದಿ ಬದಲಿಗೆ ಯಾರು ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮಾತುಕತೆ ಶುರುವಾಗಿದೆ. ಪಾಕಿಸ್ತಾನದ ಮಾಜಿ ವೇಗಿ ಮತ್ತು ಕೋಚ್ ವಕಾರ್ ಯೂನಿಸ್ ಅವರು ಗಾಯಗೊಂಡಿರುವ ಶಾಹೀನ್ ಅಫ್ರಿದಿ ಅವರ ಅನುಪಸ್ಥಿತಿಯು ಭಾರತೀಯ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ದೊಡ್ಡ ನಿರಾಳ ನೀಡಿದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಭಾರತದ ಟಾಪ್ 3 ಆಗಿರಬೇಕು ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ, ಶಾಹೀನ್ ಅಫ್ರಿದಿ ತನ್ನ ಆರಂಭಿಕ ಸ್ಪೆಲ್‌ನಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್‌ರನ್ನು ಇದೇ ಮಾದರಿಯಲ್ಲಿ ಔಟ್ ಮಾಡಿದ್ದರು. ಅಗ್ರಸ್ಥಾನದಲ್ಲಿರುವ ಭಾರತದ ಬಲಗೈ ಬ್ಯಾಟರ್‌ಗಳು ಗುಣಮಟ್ಟದ ಎಡಗೈ ಸ್ವಿಂಗ್ ಬೌಲಿಂಗ್‌ನಲ್ಲಿ ವೈಫಲ್ಯ ಎದುರಿಸುತ್ತಿರುವ ಕಾರಣ ಅವರು ಈ ವರ್ಷವೂ ಅದೇ ರೀತಿ ಮಾಡಬಹುದೆಂದು ಪಾಕಿಸ್ತಾನದ ಅಭಿಮಾನಿಗಳು ಭಾವಿಸುತ್ತಾರೆ.

ಶಾಹೀನ್ ಅವರ ಗಾಯವು ದೊಡ್ಡ ನಿರಾಳವಾಗಿದೆ

ವಕಾರ್ ಯೂನಿಸ್ ತಮ್ಮ ಟ್ವಿಟ್ಟರ್‌ನಲ್ಲಿ, "ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಶಾಹೀನ್ ಅವರ ಗಾಯವು ದೊಡ್ಡ ನಿರಾಳವಾಗಿದೆ. ದುಃಖಕರವಾಗಿದೆ ನಾವು ಅವರನ್ನು ಏಷ್ಯಾ ಕಪ್ 2022ರಲ್ಲಿ ನೋಡಲಾಗುತ್ತಿಲ್ಲ ಎಂದು, ಶೀಘ್ರದಲ್ಲೇ ಫಿಟ್ ಆಗಿ ಚಾಂಪ್ ಶಾಹೀನ್ ಅಫ್ರಿದಿ ಎಂದು ನಾವು ಕೇಳಿಕೊಳ್ಳೋಣ," ಎಂದು ಬರೆದುಕೊಂಡಿದ್ದಾರೆ.

ಆದರೆ, ವಕಾರ್ ಯೂನಿಸ್ ಅವರ ಕಾಮೆಂಟ್‌ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸರಿಯಾಗಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಕಾರ್ ಯೂನಿಸ್‌ರ 'ಅಪ್ರಬುದ್ಧ' ಕಾಮೆಂಟ್ ಮಾಡಿದ್ದಕ್ಕಾಗಿ ಅವರನ್ನು ದೂಷಿಸಿದರು. ಭಾರತೀಯ ಆಟಗಾರರು ಈಗ ಶಾಹೀನ್‌ಗಾಗಿ ಯೋಜನೆಯನ್ನು ರೂಪಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಶಾಹೀನ್ ಅಫ್ರಿದಿಗೆ ಬಾರಿಸಿದ್ದ ಮ್ಯಾಥ್ಯೂ ವೇಡ್

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಅಫ್ರಿದಿ ಓವರ್‌ನಲ್ಲಿ ಆಸ್ಟ್ರೇಲಿಯದ ಮ್ಯಾಥ್ಯೂ ವೇಡ್ ಅಬ್ಬರಿಸಿದರ ಬಗ್ಗೆ ಕೆಲವು ಭಾರತ ಅಭಿಮಾನಿಗಳು ವಕಾರ್ ಯೂನಿಸ್‌ಗೆ ನೆನಪಿಸಿದರು. ಆಸೀಸ್ ಆಟಗಾರ ಅಫ್ರಿದಿಗೆ ಮೈದಾನದಾದ್ಯಂತ ಹೊಡೆದು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಮತ್ತು ಪಾಕಿಸ್ತಾನವನ್ನು ಟಿ20 ವಿಶ್ವಕಪ್‌‌ನಿಂದ ಹೊರಹಾಕಲು ನೆರವಾದರು ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಕೆಲ ಭಾರತೀಯ ಅಭಿಮಾನಿಗಳು 2022ರ ಏಷ್ಯಾ ಕಪ್ ಅನ್ನು ಮುಂದೂಡಲು ಸಲಹೆ ನೀಡಿದರು. ಆಗ ಶಾಹೀನ್ ಅಫ್ರಿದಿ ಫಿಟ್ ಆಗಬಹುದು ಮತ್ತು ಪಾಕಿಸ್ತಾನಕ್ಕಾಗಿ ಭಾರತ ವಿರುದ್ಧ ಆಡಬಹುದು ಎಂದು ಸಲಹೆ ನೀಡಿದ್ದಾರೆ. ಆಗಸ್ಟ್ 28ರಂದು 2022ರ ಏಷ್ಯಾ ಕಪ್‌ನ ಭಾಗವಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲಿವೆ.

Story first published: Sunday, August 21, 2022, 10:11 [IST]
Other articles published on Aug 21, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+