For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ತಂಡದಲ್ಲಿ ಬಾಬರ್ ಅಜಮ್‌ಗಿಂತ ಉತ್ತಮ ನಾಯಕನಿದ್ದಾನೆ ಎಂದ ಶಾಹೀನ್ ಅಫ್ರಿದಿ

Shaheen Afridi said Mohammad Rizwan is better skipper than Babar Azam

ಪಾಕಿಸ್ತಾನದ ಬಾಬರ್ ಅಜಂ ಮೂರು ಮಾದರಿಯಲ್ಲಿಯೂ ಪಾಕಿಸ್ತಾನ ತಂಡವನ್ನು ಮುನ್ನಡೆಸುತ್ತಿದ್ದು ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ತಂಡವನ್ನು ಮುನ್ನಡೆಸುವ ದೃಷ್ಟಿಯಿಂದ ಪಾಕಿಸ್ತಾನ ತಂಡದ ಹಾಲಿ ನಾಯಕ ಬಾಬರ್ ಅಜಂಗಿಂತ ಯುವ ಆಟಗಾರ ಮೊಹಮ್ಮದ ರಿಜ್ವಾನ್ ಉತ್ತಮವೆನಿಸಿಕೊಳ್ಳುತ್ತಾರೆ ಎಂದು ಪಾಕಿಸ್ತಾನ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಹೇಳಿದ್ದಾರೆ. ಈ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನ್ ಸೂಪರ್ ಲೀಗ್‌ನ 2022ರ ಆವೃತ್ತಿಗೆ ಲಾಹೋರ್ ಖಲಂದರ್ಸ್ ತಂಡದ ನಾಯಕನಾಗಿ ನೇಮಕವಾಗಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ತಂಡದ ನಾಯಕ ಬಾಬರ್ ಅಜಂ ನಾಯಕತ್ವವನ್ನು ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಜೊತೆಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶಾಹೀನ್ ಶಾ ಅಫ್ರಿದಿ ಮೊಹಮ್ಮದ್ ರಿಜ್ವಾನ್ ಅವರ ವ್ಯಕ್ತಿತ್ವವನ್ನು ತಾನು ಹೆಚ್ಚು ಇಷ್ಟಪಡುವುದಾಗಿ ಹೇಳಿದ್ದಾರೆ. ಅಲ್ಲದೆ ದೇಶೀಯ ಕ್ರಿಕೆಟ್‌ನಲ್ಲಿ ತಾನು ಆರಂಭದಲ್ಲಿ ರಿಜ್ವಾನ್ ಜೊತೆಗೆ ಆಡುತ್ತಿದ್ದೆ ಎಂಬುದನ್ನು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಾಹೀನ್ ಅಫ್ರಿದಿ ತಾನು ಆಡಿದ ನಾಯಕರ ಪೈಕಿ ಮೊಹಮ್ಮದ್ ರಿಜ್ವಾನ್ ಅತ್ಯುತ್ತಮ ನಾಯಕ ಎಂದಿದ್ದಾರೆ.

ಇನ್ನು ಮಾತು ಮುಂದುವರಿಸಿದ ಶಾಹೀನ್ ಅಫ್ರಿದಿ ಪಾಕಿಸ್ತಾನ ತಂಡದ ಹಾಲಿ ನಾಯಕ ಬಾಬರ್ ಅಜಂ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಪಾಕಿಸ್ತಾನ ತಂಡವನ್ನು ಬಾಬರ್ ಅಜಂ ಉತ್ತಮವಾದ ಬದ್ಧತೆಯೊಂದಿಗೆ ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ. ಆದರೆ ಬಾಬರ್ ಅಜಂ ಅವರಿಗೆ ಮೊಹಮ್ಮದ್ ರಿಜ್ವಾನ್ ಬಳಿಕದ ಸ್ಥಾನವನ್ನು ನೀಡುವುದಾಗಿ ಹೇಳಿದ್ದಾರೆ. "ನನಗೆ ಮೊಹಮ್ಮದ್ ರಿಜ್ವಾನ್ ಎಂದರೆ ಬಹಳ ಇಷ್ಟ. ನಾನು ಅವರ ವ್ಯಕ್ತಿತ್ವವನ್ನು ಇಷ್ಟಪಡುತ್ತೇನೆ. ನಾನು ದೇಶೀಯ ಕ್ರಿಕೆಟ್‌ಅನ್ನು ಅವರೊಂದಿಗೆ ಆರಂಭಿಸಿದ್ದೇನೆ. ನಾಯಕನಾಗಿ ಅವರನ್ನೇ ನಾನು ಅತ್ಯುತ್ತಮ ಎಂದು ಪರಿಗಣಿಸುತ್ತೇನೆ. ಬಾಬರ್ ಅಜಂ ಕೂಡ ದೇಶೀಯ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದು ಎರಡನೇ ಉತ್ತಮ ನಾಯಕ ಎಂದು ಹೇಳುತ್ತೇನೆ" ಎಂದಿದ್ದಾರೆ ಶಾಹೀನ್ ಶಾ ಅಫ್ರಿದಿ.

ಬಾಬರ್ ಅಜಂ ನೆಚ್ಚಿನ ಬ್ಯಾಟರ್: ಇನ್ನು ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರನ್ನು ಅತ್ಯುತ್ತಮ ಬ್ಯಾಟರ್ ಎಂದಿದ್ದಾರೆ. ಅಲ್ಲದೆ ತನ್ನ ನೆಚ್ಚಿನ ಬ್ಯಾಟರ್ ಕೂಡ ಬಾಬರ್ ಅಜಂ ಎಂದಿದ್ದಾರೆ. ಪಾಕಿಸ್ತಾನ ತಂಡದ ಪರವಾಗಿ ನಾಯಕನಾಗಿ ಉತ್ತಮವಾಗಿ ಬಾಬರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಪಾಕಿಸ್ತಾನ ತಂಡ ಬಾಬರ್ ಅಜಂ ನಾಯಕತ್ವದಲ್ಲಿ ಅತ್ಯುತ್ತಮ ಮಟ್ಟವನ್ನು ಮುಟ್ಟುತ್ತಿದೆ ಎಂದಿದ್ದಾರೆ.

ಶಾಹೀನ್ ಅಫ್ರಿದಿ ಪಾಕಿಸ್ತಾನದ ಪರವಾಗಿ ಈವರೆಗೆ 21 ಟೆಸ್ಟ್, 28 ಏಕದಿನ ಹಾಗೂ 39 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಪಾಕ್ ಪರವಾಗಿ 86 ವಿಕೆಟ್ ಪಡೆದು ಮಿಂಚಿದ್ದರೆ ಏಕದಿನ ಮಾದರಿಯಲ್ಲಿ 53 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ಎಡಗೈ ಸೀಮರ್ 45 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಪಾಕಿಸ್ತಾನ ತಂಡದ ಪ್ರಮುಖ ವೇಗದ ಬೌಲರ್ ಆಗಿ ಮಿಂಚುತ್ತಿದ್ದಾರೆ.

Story first published: Wednesday, December 22, 2021, 10:09 [IST]
Other articles published on Dec 22, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+