For Quick Alerts
ALLOW NOTIFICATIONS  
For Daily Alerts
 

ಮುಷ್ಫಿಕರ್ ರಹೀಮ್ ಕ್ರಿಕೆಟ್ ಬ್ಯಾಟ್‌ ಖರೀದಿಸಿದ ಶಾಹಿದ್ ಅಫ್ರಿದಿ

Shahid Afridi buys Mushfiqur Rahim’s bat for USD 20,000

ಲಾಹೋರ್, ಮೇ 16: ಬಾಂಗ್ಲಾದೇಶ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಹರಾಜಿಗಿಟ್ಟಿದ್ದ ಕ್ರಿಕೆಟ್ ಬ್ಯಾಟನ್ನು ಪಾಕಿಸ್ತಾನ ಆಲ್ ರೌಂಡರ್ ಶಾಹಿದ್ ಅಫ್ರಿದಿ 20,000 ಡಾಲರ್‌ಗೆ (15,17,540 ರೂ.) ಖರೀದಿಸಿದ್ದಾರೆ. ಕೊರೊನಾ ಪರಿಹಾರಕ್ಕಾಗಿ ಮುಷ್ಫಿಕರ್ ತನ್ನ ಫೇವರಿಟ್ ಕ್ರಿಕೆಟ್ ಬ್ಯಾಟನ್ನು ಹರಾಜಿಗಿಟ್ಟಿದ್ದರು.

2013ರಲ್ಲಿ ಶ್ರೀಲಂಕಾ ವಿರುದ್ಧ ದ್ವಿಶತಕ ಬಾರಿಸಿದ್ದಾಗ ಬಳಸಿದ್ದ ಬ್ಯಾಟನ್ನು ಮುಷ್ಫಿಕರ್ ರಹೀಮ್ ಕಳೆದ ತಿಂಗಳು ಹರಾಜಿಗಿಟ್ಟಿದ್ದರು. ಬ್ಯಾಟ್‌ ಮಾರಾಟವಾಗಿ ಬಂದ ಹಣವನ್ನು ಬಾಂಗ್ಲಾದಲ್ಲಿ ಕೊರೊನಾ ವಿರುದ್ಧದ ಪರಿಹಾರಕ್ಕೆ ಬಳಸಿಕೊಳ್ಳುವುದಾಗಿ ರಹೀಮ್ ಘೋಷಿಸಿದ್ದರು.

'ನಾನು ಹರಾಜಿಗಿಟ್ಟಿದ್ದ ಕ್ರಿಕೆಟ್ ಬಾಟನ್ನು ಶಾಹಿದ್ ಅಫ್ರಿದಿ ತನ್ನ ಸಂಸ್ಥೆಯ ಪರವಾಗಿ ಕೊಂಡುಕೊಂಡಿದ್ದಾರೆ. ಬ್ಯಾಟ್ ಖದಿಸುವ ಮೂಲಕ ಉತ್ತಮ ಕಾರ್ಯಕ್ಕೆ ನೆರವಾದವರಿಗೆ ನನ್ನ ಗೌರವ ಸೌಲ್ಲಿಸುತ್ತಿದ್ದೇನೆ,' ಎಂದು ರಹೀಮ್ ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಹೇಳಿದ್ದಾರೆ.

'ಕೆಲ ಮೋಸಗಾರ ಬಿಡ್ಡರ್‌ಗಳಿಂದ ಹರಾಜನ್ನು ರದ್ದುಗೊಳಿಸುವುದರಲ್ಲಿದ್ದೆವು. ಆದರೆ ಅನಿರೀಕ್ಷಿತವಾಗಿ ಶಾಹಿದ್ ಭಾಯ್ ನನಗೆ ವೈಯಕ್ತಿಕವಾಗಿ ಕರೆ ಮಾಡಿ ಬ್ಯಾಟ್‌ ಖರೀದಿಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು. ಮೇ 13ರಂದು 20,000 ಯುಎಸ್‌ಡಿಗೆ ಬ್ಯಾಟ್ ಖರೀದಿಸುವ ಬಗ್ಗೆ ಆಫರ್ ಲೆಟರ್ ಕಳುಹಿಸಿದ್ದರು,' ಎಂದು ಮುಷ್ಫಿಕರ್ ಮಾಹಿತಿ ನೀಡಿದ್ದಾರೆ.

Story first published: Saturday, May 16, 2020, 11:43 [IST]
Other articles published on May 16, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+