Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಟಿಂಗ್ ಮೂಲಕ 'ಶೇರ್ ಅಬೀ ಝಿಂದಾ ಹೆ' ಎಂದ ಅಫ್ರಿದಿ: ವಿಡಿಯೋ

Shahid Afridi reminds fans of his prowess with blistering 81-run in Global T20 Canada

ಒಟ್ಟಾವಾ, ಜುಲೈ 29: ತನ್ನ ಆಟೋ ಬಯೋಗ್ರಾಫಿ ಮೂಲಕ ಪಾಕಿಸ್ತಾನ ಕ್ರಿಕೆಟರ್ ಶಾಹಿದ್ ಅಫ್ರಿದಿ ಹೆಚ್ಚು ಸುದ್ದಿಯಾಗಿದ್ದರು. ಅದೇ ಸ್ಫೋಟಕ ಬ್ಯಾಟ್ಸ್ಮನ್ ಅಫ್ರಿದಿ ಬ್ಯಾಟ್‌ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. 'ಗ್ಲೋಬಲ್ ಟಿ20 ಕೆನಡಾ' ಕ್ರಿಕೆಟ್ ಟೂರ್ನಿಯಲ್ಲಿ ಅಫ್ರಿದಿ ಭಾನುವಾರ (ಜುಲೈ 28) ಗತ ಕಾಲದ ದಿನಗಳನ್ನು ನೆನಪಿಸುವಂತ ಪ್ರದರ್ಶನ ನೀಡಿದರು.

ಒಂಟಾರಿಯೋದ ಬ್ರಾಂಪ್ಟನ್‌ನ ಸಿಎಎ ಸೆಂಟರ್‌ನಲ್ಲಿ ನಡೆದ ಎಡ್ಮಂಟನ್ ರಾಯಲ್ಸ್ ಮತ್ತು ಬ್ರಾಂಪ್ಟನ್ ವೂಲ್ವ್ಸ್ ಪಂದ್ಯದಲ್ಲಿ ಶಾಹಿದ್ ಅಫ್ರಿದಿ ಕೇವಲ 40 ಎಸೆತಗಳಿಗೆ ಅಜೇಯ 81 ರನ್ ಚಚ್ಚಿದರು. ಅಫ್ರಿದಿ ಬಿರುಸಿನ ಬ್ಯಾಟಿಂಗ್ ಫಲದಿಂದ ಬ್ರಾಂಪ್ಟನ್ ವೂಲ್ವ್ಸ್ ತಂಡ 27 ರನ್ ಗೆಲುವನ್ನಾಚರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬ್ರಾಂಪ್ಟನ್ ವೂಲ್ವ್ಸ್, ಆರಂಭಿಕ ಬ್ಯಾಟ್ಸ್ಮನ್ ಲೆಂಡ್ಲ್ ಸಿಮ್ಮನ್ಸ್ 59, ಜಾರ್ಜ್ ಮುನ್ಸೆ 20, ಅಫ್ರಿದಿ 81 ರನ್ ನೆರವಿನಿಂದ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 207 ರನ್ ಬಾರಿಸಿತ್ತು. ಎದುರಾಳಿ ತಂಡದ ಶದಾಬ್ ಖಾನ್ 3, ಬೆನ್ ಕಟ್ಟಿಂಗ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

ಗುರಿ ಬೆಂಬತ್ತಿದ ಎಡ್ಮಂಟನ್ ರಾಯಲ್ಸ್ ಪರ ಯಾರೂ ಗಮನಾರ್ಹ ಬ್ಯಾಟಿಂಗ್ ನಡೆಸಲಿಲ್ಲ. ರಿಚೀ ಬೆರಿಂಗ್ಟನ್ 28, ಫಾ ಡು ಪ್ಲೆಸಿಸ್ 21, ಜೇಮ್ಸ್ ನೀಶಮ್ 33, ಶದಾಬ್ ಖಾನ್ 27 ರನ್ ಸೇರಿಸಿದ್ದೇ ಹೆಚ್ಚೆನಿಸಿತು. 20 ಓವರ್‌ ಮುಕ್ತಾಯಕ್ಕೆ 9 ವಿಕೆಟ್ ಕಳೆದು 180 ರನ್ ಪೇಸರಿಸಲಷ್ಟೇ ರಾಯಲ್ಸ್ ಶಕ್ತವಾಯ್ತು.

ಎಡ್ಮಂಟನ್ ರಾಯಲ್ಸ್ ಇನ್ನಿಂಗ್ಸ್‌ನಲ್ಲಿ ಬ್ರಾಂಪ್ಟನ್ ಪರ ಝಹೂರ್ ಖಾನ್ ಮತ್ತು ಇಶ್ ಸೋಧಿ ತಲಾ 3, ವಹಾಬ್ ರಿಯಾಝ್ 2 ವಿಕೆಟ್ ಪಡೆದರು. ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ನೊಂದಿಗೆ ಒಂದು ವಿಕೆಟ್ ಕೂಡ ಕೆಡವಿದ ಅಫ್ರಿದಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.

Story first published: Monday, July 29, 2019, 16:35 [IST]
Other articles published on Jul 29, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+