For Quick Alerts
ALLOW NOTIFICATIONS  
For Daily Alerts
 

ಶೇನ್‌ ವ್ಯಾಟ್ಸನ್ ಐಪಿಎಲ್‌ಗೆ ರಿಟರ್ನ್: ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತಷ್ಟು ಬಲ

Shane watson

ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಮರಳಲು ಸಜ್ಜಾಗಿದ್ದಾರೆ. ಆದರೆ, ಈ ಬಾರಿ ಐಪಿಎಲ್‌ನಲ್ಲಿ ವ್ಯಾಟ್ಸನ್ ಆಟಗಾರನಾಗಿ ಅಲ್ಲ ಬದಲಾಗಿ ಸಹಾಯಕ ಕೋಚ್ ಆಗಿ ಚುಟುಕು ಪ್ರೀಮಿಯರ್ ಲೀಗ್‌ಗೆ ಮತ್ತೆ ಪ್ರವೇಶಿಸಲಿದ್ದಾರೆ.

ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮ್ಯಾನೇಜ್‌ಮೆಂಟ್‌ ಶೀಘ್ರದಲ್ಲೇ ಅಧಿಕೃತ ಪ್ರಕಟಣೆಯನ್ನು ಮಾಡಲಿದೆ.

ರಿಕಿ ಪಾಂಟಿಂಗ್ ಸಲಹೆ

ರಿಕಿ ಪಾಂಟಿಂಗ್ ಸಲಹೆ

ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ತಮ್ಮ ದೇಶದ ಆಟಗಾರ ಶೇನ್ ವ್ಯಾಟ್ಸನ್ ಅವರನ್ನು ತಂಡದ ಸಹಾಯಕ ಕೋಚ್ ಆಗಿ ನೇಮಿಸುವಂತೆ ಮ್ಯಾನೇಜ್‌ಮೆಂಟ್‌ಗೆ ಶಿಫಾರಸು ಮಾಡಿದ್ದಾರೆ. ಪಾಂಟಿಂಗ್ ಶಿಫಾರಸಿಗೆ ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್ ಮೆಂಟ್ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ. ಸದ್ಯದಲ್ಲೇ ದೆಹಲಿ ಆಡಳಿತ ಮಂಡಳಿ ಸಂಪೂರ್ಣ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ಟೀಂ ಇಂಡಿಯಾದ ಮಾಜಿ ಬೌಲರ್ ಅಜಿತ್ ಅಗರ್ಕರ್ ಕೂಡ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಹಾಯಕ ಕೋಚ್ ಆಗಲಿದ್ದಾರೆ. ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್ ಮೆಂಟ್ ಈಗಾಗಲೇ ಅಗರ್ಕರ್ ಗೆ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.

ಐಪಿಎಲ್‌ನ ಯಶಸ್ವಿ ಆಲ್‌ರೌಂಡರ್ ವ್ಯಾಟ್ಸನ್

ಐಪಿಎಲ್‌ನ ಯಶಸ್ವಿ ಆಲ್‌ರೌಂಡರ್ ವ್ಯಾಟ್ಸನ್

ಶೇನ್ ವ್ಯಾಟ್ಸನ್ ಐಪಿಎಲ್‌ನ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರು. ಈ ಆಲ್‌ರೌಂಡರ್ ಐಪಿಎಲ್‌ನಲ್ಲಿ ಪ್ರತಿ ಸೀಸನ್‌ನಲ್ಲೂ ಆಡಿದ್ದಾರೆ. ಐಪಿಎಲ್‌ನ ಆರಂಭಿಕ ಋತುವಿನಿಂದ 2019 ರವರೆಗೆ ಸತತವಾಗಿ ಐಪಿಎಲ್‌ನಲ್ಲಿ ಭಾಗಿಯಾಗಿದ್ದಾರೆ. ಆದರೆ, 2020ರಲ್ಲಿ ಶೇನ್ ವ್ಯಾಟ್ಸ್‌ನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಐಪಿಎಲ್‌ನ ಆರಂಭಿಕ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ವ್ಯಾಟ್ಸನ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 2018 ರ ಐಪಿಎಲ್ ಫೈನಲ್‌ನಲ್ಲಿ ಅಜೇಯ ಶತಕದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಟ್ರೋಫಿಯನ್ನು ಗೆದ್ದು ಕೊಟ್ಟರು. ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಈತ ಹಲವಾರು ಋತುಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಭಾರತ vs ಶ್ರೀಲಂಕಾ ಪ್ರಥಮ ಟಿ20: ಪಂದ್ಯದ ಆರಂಭ, ನೇರಪ್ರಸಾರ ಹಾಗೂ ಸಂಭಾವ್ಯ ಪ್ಲೇಯಿಂಗ್ XI

145 ಪಂದ್ಯಗಳನ್ನು ಆಡಿರುವ ಶೇನ್ ವ್ಯಾಟ್ಸನ್

145 ಪಂದ್ಯಗಳನ್ನು ಆಡಿರುವ ಶೇನ್ ವ್ಯಾಟ್ಸನ್

ಐಪಿಎಲ್‌ನಲ್ಲಿ 145 ಪಂದ್ಯಗಳನ್ನು ಆಡಿರುವ ಶೇನ್ ವ್ಯಾಟ್ಸನ್ 31 ವಿಕೆಟ್‌ಗಳೊಂದಿಗೆ 3874 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳಿವೆ 21 ಅರ್ಧ ಶತಕಗಳಿವೆ. ಗರಿಷ್ಠ ಸ್ಕೋರ್ 117 ರನ್ ಆಗಿದೆ. ಅವರು ಸರಣಿಯಲ್ಲಿ 376 ಬೌಂಡರಿಗಳು ಮತ್ತು 190 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅಲ್ಲದೆ ಬೌಲರ್ ಆಗಿ 92 ವಿಕೆಟ್ ಪಡೆದಿದ್ದಾರೆ.

ಶ್ರೀಲಂಕಾ ಸರಣಿಗೂ ಮುನ್ನ ಆಘಾತ: ಭಾರತದ ಪ್ರಮುಖ ಆಟಗಾರರಿಬ್ಬರು ಔಟ್

ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2022 ಸ್ಕ್ವಾಡ್

ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2022 ಸ್ಕ್ವಾಡ್

ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ , ಶಾರ್ದೂಲ್ ಠಾಕೂರ್ , ಮುಸ್ತಾಫಿಜುರ್ ರೆಹಮಾನ್ , ಕುಲ್ದೀಪ್ ಯಾದವ್ , ಅಶ್ವಿನ್ ಹೆಬ್ಬಾರ್ , ಸರ್ಫರಾಜ್ ಖಾನ್ , ಕಮಲೇಶ್ ನಾಗರಕೋಟಿ , ಕೆ.ಎಸ್ ಭರತ್ , ಮನ್‌ದೀಪ್ ಸಿಂಗ್ , ಸೈಯದ್ ಖಲೀಲ್ ಅಹ್ಮದ್ , ಚೇತನ್ ಸಕರಿಯಾ , ಲಲಿತ್ ಯಾದವ್ , ರಿಪಾಲ್ ಪಟೇಲ್ , ಯಶ್ ಧುಲ್ , ರೋವ್ಮನ್ ಪೊವೆಲ್, ಪ್ರವೀಣ್ ದುಬೆ

ಸಹ ಆಟಗಾರನಿಗೆ ಕಪಾಳ ಮೋಕ್ಷ ಮಾಡಿದ ರೌಫ್ | Oneindia Kannada

Story first published: Thursday, February 24, 2022, 9:42 [IST]
Other articles published on Feb 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+