ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಸರಣಿಗೂ ಮುನ್ನ ಆಘಾತ: ಭಾರತದ ಪ್ರಮುಖ ಆಟಗಾರರಿಬ್ಬರು ಔಟ್

Team india

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಮುನ್ನವೇ ಪ್ರಮುಖ ವೇಗಿ ದೀಪಕ್ ಚಹಾರ್ ಗಾಯದಿಂದ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ಭಾರತಕ್ಕೆ ಅನಿರೀಕ್ಷಿತ ಹಿನ್ನಡೆಯಾಗಿದೆ. ಮಂಡಿರಜ್ಜು ಗಾಯದಿಂದಾಗಿ ಅವರು ಶ್ರೀಲಂಕಾ ವಿರುದ್ಧದ ಸರಣಿಯನ್ನು ಕಳೆದುಕೊಂಡಿದ್ದಾರೆ. ಚಹಾರ್ ಸರಣಿಯಲ್ಲಿ ಆಡುತ್ತಾರೆಯೇ ಎಂಬುದು ಈಗಾಗಲೇ ಅನುಮಾನವಾಗಿತ್ತು, ಆದ್ರೆ ಇದೀಗ ಅಧಿಕೃತವಾಗಿ ಲಂಕಾ ವಿರುದ್ಧ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಜೊತೆಗೆ ಸೂರ್ಯಕುಮಾರ್ ಯಾದವ್ ಕೂಡ ಟಿ20 ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.

ಕಳೆದ ಭಾನುವಾರ ಸಂಜೆ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದ ವೇಳೆ ಚಹಾರ್ ಗಾಯಗೊಂಡಿದ್ದರು.

ಅಮೋಘ ಬೌಲಿಂಗ್ ಮಾಡುತ್ತಿದ್ದ ಚಹಾರ್ ಮೊದಲೆರಡು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಏತನ್ಮಧ್ಯೆ, ಬೌಲಿಂಗ್ ರನ್ನಿಂಗ್ ಸಮಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದರು. ಆಗ ಕೂಡಲೇ ಚಹಾರ್ ನೋವಿನಿಂದ ನೆಲದ ಮೇಲೆ ಕುಳಿತಿದ್ದರು. ಫಿಸಿಯೋ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದರು. ಚಾಹರ್ ಆ ಓವರ್ ಪೂರ್ಣಗೊಳಿಸಲು ಸಾಧ್ಯವಾಗದೆ ಅಂದು ಮೈದಾನ ತೊರೆದರು. ವೆಂಕಟೇಶ್ ಅಯ್ಯರ್ ಉಳಿದ ಒಂದು ಎಸೆತವನ್ನು ಪೂರೈಸಿದ್ದು.

ದೀಪಕ್ ಚಹಾರ್‌ಗೆ ಗಂಭೀರ ಗಾಯ!

ದೀಪಕ್ ಚಹಾರ್‌ಗೆ ಗಂಭೀರ ಗಾಯ!

ಆ ಸಮಯದಲ್ಲಿ ದೀಪಕ್ ಚಹಾರ್ ಅವರ ಗಾಯವು ಗಂಭೀರವಾಗಿದೆ ಎಂದು ಶಂಕಿಸಲಾಗಿದೆ. ಅದು ಈಗ ನಿಜವಾಗಿ ಪರಿಣಮಿಸಿದೆ. ಬಿಸಿಸಿಐ ಅಧಿಕಾರಿಯೊಬ್ಬರು ಚಹಾರ್ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ ಎಂದ ಹೇಳಿದ್ದಾರೆ. ಪರಿಣಾಮ ದೀಪಕ್ ಚಹಾರ್ ಟಿ20 ಸರಣಿಯಿಂದ ಹಿಂದೆ ಸರಿದಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅವರು ತಮ್ಮ ಪ್ರಯತ್ನವನ್ನು ಪೂರ್ಣಗೊಳಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಪಿಎಲ್‌ಗೂ ಮುನ್ನ ಆಡುತ್ತಿರುವ ಕೊನೆಯ ಸರಣಿ

ಐಪಿಎಲ್‌ಗೂ ಮುನ್ನ ಆಡುತ್ತಿರುವ ಕೊನೆಯ ಸರಣಿ

ಐಪಿಎಲ್ 15ನೇ ಸೀಸನ್‌ಗೂ ಮುನ್ನ ಭಾರತ ತಂಡ ಶ್ರೀಲಂಕಾ ವಿರುದ್ಧ ಆಡುತ್ತಿರುವ ಕೊನೆಯ ಸರಣಿ ಇದಾಗಿದೆ. ಆದ್ದರಿಂದ, ದೀಪಕ್ ಚಹಾರ್ ಅವರನ್ನು ಐಪಿಎಲ್‌ನಲ್ಲೂ ಕಾಣಬಹುದು. ಅವರು ಹಾಲಿ ಚಾಂಪಿಯನ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿದ್ದಾರೆ. ಕಳೆದ ಋತುವಿನಿಂದ ಸಿಎಸ್‌ಕೆ ಚಹಾರ್ ಅವರನ್ನು ಉಳಿಸಿಕೊಂಡಿರಲಿಲ್ಲ. ಆದರೆ ಮೆಗಾ ಹರಾಜಿನಲ್ಲಿ ಸಿಎಸ್‌ಕೆ ಎರಡನೇ ಅತಿ ಹೆಚ್ಚು ಮೊತ್ತವಾದ 14 ಕೋಟಿ ರೂ.ಗೆ ಆಟಗಾರನನ್ನು ಮರಳಿ ತಂಡಕ್ಕೆ ಕರೆತಂದಿತು.

ದೀಪಕ್ ಚಹಾರ್ ಬದಲು ಬದಲಿ ಆಟಗಾರ ಘೋಷಣೆಯಾಗಿಲ್ಲ

ದೀಪಕ್ ಚಹಾರ್ ಬದಲು ಬದಲಿ ಆಟಗಾರ ಘೋಷಣೆಯಾಗಿಲ್ಲ

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹಿಂದೆ ಸರಿದಿರುವ ದೀಪಕ್ ಚಹಾರ್ ಅವರ ಬದಲಿ ಆಟಗಾರನನ್ನು ಘೋಷಿಸಲಾಗಿಲ್ಲ. ಇದಕ್ಕೂ ಮುನ್ನ 18 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿತ್ತು. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ ಕಾರಣ, ಚಹಾರ್ ಅನುಪಸ್ಥಿತಿಯು ಭಾರತದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಅವೇಶ್ ಖಾನ್ ಭಾರತ ತಂಡದ ಇತರ ವೇಗಿಗಳು.

ಸೂರ್ಯಕುಮಾರ್ ಯಾದವ್‌ಗೆ ಫ್ರಾಕ್ಚರ್

ಸೂರ್ಯಕುಮಾರ್ ಯಾದವ್‌ಗೆ ಫ್ರಾಕ್ಚರ್

ಮುಂಬರುವ ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಂದ ಸೂರ್ಯಕುಮಾರ್ ಯಾದವ್ ಹೊರಗುಳಿದಿದ್ದಾರೆ. ಮಂಗಳವಾರ ಲಕ್ನೋದಲ್ಲಿ ನಡೆದ ಭಾರತದ ಅಭ್ಯಾಸ ಸೆಷನ್‌ನಲ್ಲಿ 31 ವರ್ಷದ ಬ್ಯಾಟ್ಸ್‌ಮನ್ ಕೈಯಲ್ಲಿ ಕೂದಲೆಳೆಯ ಮಟ್ಟಿನ ಮುರಿತಕ್ಕೆ ಒಳಗಾಗಿದ್ದಾರೆ . ಹೀಗಾಗಿ ವೈಟ್ ಬಾಲ್ ಸರಣಿಗೆ ಅನರ್ಹ ಎಂದು ಘೋಷಿಸಲಾಗಿದೆ ಎಂದು ಕ್ರಿಕ್‌ಬಜ್ ಸುದ್ದಿ ಮಾಡಿದೆ.

ಆದರೆ ನಿಖರವಾಗಿ ಎಲ್ಲಿ ಮತ್ತು ಯಾವಾಗ ಸೂರ್ಯಕುಮಾರ್ ಗಾಯಗೊಂಡರು ಎಂಬುದು ಅಸ್ಪಷ್ಟವಾಗಿದೆ ಆದರೆ ಫೆಬ್ರವರಿ 20 ರಂದು ಈಡನ್‌ ಗಾರ್ಡನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ನಲ್ಲಿ ಫೀಲ್ಡಿಂಗ್ ಮಾಡುವಾಗ ಅವರು ಗಾಯಗೊಂಡಿರಬಹುದು ಎಂದು ತಿಳಿದುಬಂದಿದೆ.

BCCI ಕೇಳಿದ್ರೂ ಹೆಸರು ರಿವೀಲ್‌ ಮಾಡಲ್ಲ ಅಂತಾ ಸಾಹಾ ಹೇಳಿದ್ಯಾಕೆ? | Oneindia Kannada
ಟೀಂ ಇಂಡಿಯಾದ ಟಿ20 ಸ್ಕ್ವಾಡ್

ಟೀಂ ಇಂಡಿಯಾದ ಟಿ20 ಸ್ಕ್ವಾಡ್

ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ದೀಪಕ್ ಮೊಹಮ್ಮದ್ ಸಿರಾಜ್ , ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್.

Story first published: Wednesday, February 23, 2022, 13:12 [IST]
Other articles published on Feb 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X