Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ವಿಕೆಟ್ ಸಿಕ್ಕಾಗ ಸೆಲ್ಯೂಟ್ ಹೊಡೆಯೋದರ ಗುಟ್ಟು ಬಿಚ್ಚಿಟ್ಟ ಕಾಟ್ರೆಲ್

ICC World Cup 2019 : ಗೆದ್ದ ಮೇಲೆ ಸಂಭ್ರಮಿಸೋದು ಹೇಗೆ ಅನ್ನೋದನ್ನ ಇವರಿಂದ ಕಲೀಬೇಕು..? | Oneindia Kannada
Sheldon Cottrell celebration: Reason behind his salute explained

ನಾಟಿಂಗ್ಹ್ಯಾಮ್, ಜೂನ್ 5: ಮೈದಾನದಲ್ಲಿ ವಿಭಿನ್ನ ರೀತಿಯ ಸಂಭ್ರಮಾಚರಣೆಗೆ ವೆಸ್ಟ್ ಇಂಡೀಸ್ ಹೆಚ್ಚು ಫೇಮಸ್ಸು. ವಿಕೆಟ್ ಸಿಕ್ಕಾಗ, ಪಂದ್ಯ ಗೆದ್ದಾಗೆಲ್ಲ ಕೆರಿಬಿಯನ್ನರು ಸಂಭ್ರಮಿಸುವ ಪರಿ ಕ್ರಿಕೆಟ್ ಪ್ರಿಯರೆಲ್ಲರ ಗಮನ ಸೆಳೆಯುತ್ತವೆ. ಇಂಥದ್ದೇ ಭಿನ್ನ ಸಂಭ್ರಮಾಚರಣೆಗೆ ವಿಂಡೀಸ್ ವೇಗಿ ಶೆಲ್ಡನ್ ಕಾಟ್ರೆಲ್ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಳ್ಳುತ್ತಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಪಂದ್ಯದ ವೇಳೆ ವಿಕೆಟ್ ಲಭಿಸಿದಾಗ ಕಾಟ್ರೆಲ್ ಅವರು ಒಂದಿಷ್ಟು ದೂರ ಲೆಫ್ಟ್‌ರೈಟ್ ನಡೆದು ಸೆಲ್ಯೂಟ್ ಹೊಡೆದು ಸಂಭ್ರಮಾಚರಿಸುತ್ತಿದ್ದರು. ವಿಶ್ವಕಪ್‌ನಲ್ಲಿ ವಿಂಡೀಸ್ ಪಂದ್ಯವಿದ್ದಾಗ ಮೈದಾನದಲ್ಲಿ ಕಾಟ್ರೆಲ್ ಅವರ ಈ ಸಂಭ್ರಮಾಚರಣೆ ವಿಶೇಷವಾಗಿ ಸೆಳೆಯುತ್ತಿತ್ತು. ತಾನು ಹೀಗೆ ಸೆಲ್ಯೂಟ್ ಮಾಡೋದರ ಹಿಂದಿನ ಗುಟ್ಟನ್ನು ಕಾಟ್ರೆಲ್ ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್, ಜೂನ್ 6, Live ಸ್ಕೋರ್‌ಕಾರ್ಡ್

1
43653

'ಇದೊಂದು ಮಿಲಿಟರಿ ಶೈಲಿಯ ಸೆಲ್ಯೂಟ್, ನಾನು ವೃತ್ತಿಯಲ್ಲಿ ಸೈನಿಕ. ಜಮೈಕಾದ ಸೈನ್ಯಕ್ಕೆ ಗೌರವ ಸೂಚಿಸಲು ನಾನು ಹೀಗೆ ಸೆಲ್ಯೂಟ್ ಹೊಡೆಯುತ್ತಿದ್ದೇನೆ' ಎಂದು ಬಿಬಿಸಿ ಜೊತೆ ಶೆಲ್ಡನ್ ಕಾಟ್ರೆಲ್ ಈ ವರ್ಷಾರಂಭದಲ್ಲೇ ಹೇಳಿಕೊಂಡಿದ್ದರು. ಅದನ್ನೇ ಮತ್ತೀಗ ಪುನರುಚ್ಛರಿಸಿದ್ದಾರೆ.

ಗುರುವಾರ (ಜೂನ್ 6) ವಿಶ್ವಕಪ್ 10ನೇ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ಮೈದಾನಕ್ಕಿಳಿದಿತ್ತು. ಈ ವೇಳೆ ಆಸೀಸ್ ಅಪಾಯಕಾರಿ ಬ್ಯಾಟ್ಸ್ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್‌ಗಳು ಕಾಟ್ರೆಲ್‌ಗೆ ಲಭಿಸಿದ್ದವು. ಆಗಲೂ ಕಾಟ್ರೆಲ್ ಸೆಲ್ಯೂಟ್ ಹೊಡೆದು ಆಕರ್ಷಣೆ ಮೂಡಿಸಿದ್ದರು.

ವಿಭಿನ್ನ ಸೆಲೆಬ್ರೇಷನ್ ಬಗ್ಗೆ ಮಾತು ಮುಂದುವರೆಸಿದ ಕಾಟ್ರೆಲ್, 'ಪ್ರತೀಸಾರಿ ವಿಕೆಟ್ ದೊರೆತಾಗಲೂ ಹೀಗೆ ಸೆಲ್ಯೂಟ್ ಹೊಡೆಯೋದನ್ನು ಮಾಡುತ್ತೇನೆ. ಆರ್ಮಿ ಅಭ್ಯಾಸದಲ್ಲಿದ್ದಾಗ ನಾನಿದನ್ನು ಸುಮಾರು 6 ತಿಂಗಳವರೆಗೂ ಪ್ರ್ಯಾಕ್ಟಿಸ್ ಮಾಡಿದ್ದೇನೆ' ಎಂದು ವಿವರಿಸಿದರು. ಪಾಕಿಸ್ತಾನ ವಿರುದ್ಧ ವಿಶ್ವಕಪ್ ಆರಂಭಿಕ ಪಂದ್ಯದಲ್ಲೇ ವಿಂಡೀಸ್ ಶುಭಾರಂಭ ಕಂಡಿತ್ತು.

Story first published: Thursday, June 6, 2019, 17:55 [IST]
Other articles published on Jun 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+