For Quick Alerts
ALLOW NOTIFICATIONS  
For Daily Alerts
 

WI vs PAK: ಶಾಯ್ ಹೋಪ್ ಭರ್ಜರಿ ಶತಕ, ಎಬಿಡಿ ದಾಖಲೆ ಉಡೀಸ್‌: ಪಾಕ್‌ 92 ರನ್‌ಗೆ ಆಲೌಟ್‌

ಸದ್ಯ ವೆಸ್ಟ್‌ ಇಂಡೀಸ್ ಹಾಗೂ ಪಾಕಿಸ್ತಾನ ನಡುವಣ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ವೆಸ್ಟ್‌ ಇಂಡೀಸ್ ತಂಡದ ನಾಯಕ ಶಾಯ್ ಹೋಪ‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಉಭಯ ದೇಶಗಳ ನಡುವಣ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಮಂಗಳವಾರ ನಡೆಯಿತು. ಈ ಪಂದ್ಯದಲ್ಲಿ ವಿಂಡೀಸ್‌ ತಂಡ 202 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ ಸರಣಿಯನ್ನು 2-1 ರಿಂದ ಗೆದ್ದು ಕೊಂಡಿದೆ. ಈ ಪಂದ್ಯದಲ್ಲಿ ವಿಂಡೀಸ್ ತಂಡದ ಶಾಯ್ ಹೋಪ್ ಅಜೇಯ ಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಈ ಮೂಲಕ ಇವರು ಎಬಿಡಿ ವಿಲಿಯರ್ಸ್‌ ದಾಖಲೆಯನ್ನು ಅಳಿಸಿ ಹಾಕಿದರು.

ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ಬ್ರೆಂಡನ್‌ ಕಿಂಗ್‌ (5) ಜವಾಬ್ದಾರಿ ಮರೆತರು. ಎರಡನೇ ವಿಕೆಟ್‌ಗೆ ಇವಾನ್‌ ಲೂಯಿಸ್ (37) ಹಾಗೂ ಕೀಸಿ ಕಾರ್ಟಿ (17) ಜೋಡಿ 47 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಮಧ್ಯಮ ಕ್ರಮಾಂಕದಲ್ಲಿ ರೋಸ್ಟನ್‌ ಚೇಸ್‌ 29 ಎಸೆತಗಳಲ್ಲಿ 36 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು.

Shepherd s century helps West Indies beat Pakistan breaks ABD s record

31 ವರ್ಷದ ಶಾಯ್ ಹೋಪ್‌ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 94 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 120 ರನ್‌ ಬಾರಿಸಿ ಮಿಂಚಿದರು. ಇದು ಶಾಯ್ ಹೋಪ್ ಅವರ ಏಕದಿನ ವೃತ್ತಿ ಜೀವನದ 18ನೇ ಶತಕವಾಗಿದೆ. ಈ ಮೂಲಕ ಇವರು ಎಬಿಡಿ ವಿಲಿಯರ್ಸ್‌ ದಾಖಲೆಯನ್ನು ಅಳಿಸಿ ಹಾಕಿದರು. ಅಂತಿಮವಾಗಿ ವಿಂಡೀಸ್‌ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 294 ರನ್‌ ಸೇರಿಸಿತು.

ಹೀನಾಯ ಸೋಲು

ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡದ ಟಾಪ್‌ ನಾಲ್ವರು ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಭರವಸೆಯ ಆಟಗಾರರಾದ ಬಾಬರ್ ಅಜಮ್ (9), ವಿಕೆಟ್‌ ಕೀಪರ್ ಮೊಹಮ್ಮದ್ ರಿಜ್ವಾನ್ (0) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಸಲ್ಮಾನ್ ಅಘಾ (30), ಹಸನ್ ನವಾಜ್ (13), ಮೊಹಮ್ಮದ್ ನವಾಜ್ (23) ಕೊಂಚ ವಿಂಡೀಸ್‌ ಬೌಲರ್‌ಗಳನ್ನು ಕಾಡಿದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಅಂತಿಮವಾಗಿ ಪಾಕ್‌ 92 ರನ್‌ಗೆ ಆಲೌಟ್ ಆಯಿತು. ವಿಂಡೀಸ್ ತಂಡದ ಪರ ಜೇಡನ್ ಸೀಲ್ಸ್ 18 ರನ್‌ ನೀಡಿ 6 ವಿಕೆಟ್‌ ಕಬಳಿಸಿದರು.

ಎಬಿಡಿ ದಾಖಲೆ ಉಡೀಸ್‌

ವಿಂಡೀಸ್‌ ನಾಯಕ ಶಾಯ್ ಹೋಪ್ ಇದುವರೆಗೆ ವೆಸ್ಟ್ ಇಂಡೀಸ್ ಪರ 142 ಏಕದಿನ ಪಂದ್ಯಗಳಲ್ಲಿ 18 ಶತಕಗಳನ್ನು ಗಳಿಸಿದ್ದಾರೆ. ನಾಯಕನಾಗಿ ಶಾಯ್ ಹೋಪ್‌ 5 ಶತಕ ಬಾರಿಸಿದ್ದಾರೆ. ವಿಕೆಟ್‌ ಕೀಪರ್‌ ನಾಯಕನಾಗಿ ಅಧಿಕ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಇವರು ದಕ್ಷಿಣ ಆಫ್ರಿಕಾ ಎಬಿ ಡಿವಿಲಿಯರ್ಸ್‌ ದಾಖಲೆಯನ್ನು ಅಳಿಸಿ ಹಾಕಿದರು. ಎಬಿಡಿ ನಾಯಕರಾಗಿ 4 ಶತಕ ಸಿಡಿಸಿದ್ದರು.

ವಿಕೆಟ್‌ ಕೀಪರ್, ನಾಯಕನಾಗಿ ಅತಿ ಹೆಚ್ಚು ಶತಕ

ಎಂಎಸ್ ಧೋನಿ, 6 ಶತಕ
ಶೈ ಹೋಪ್‌, 5 ಶತಕ
ಎಬಿಡಿ ವಿಲಿಯರ್ಸ್‌, 4 ಶತಕ
ಟಾಮ್ ಲಾಥಮ್‌, 2 ಶತಕ
ಮೋನಾಂಕ್ ಪಟೇಲ್,2 ಶತಕ

Story first published: Wednesday, August 13, 2025, 16:12 [IST]
Other articles published on Aug 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+