Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ, ರೋಹಿತ್, ರೈನಾ ಹೆಸರಲ್ಲಿದ್ದ ಐಪಿಎಲ್‌ ದಾಖಲೆ ಮುರಿದ ಶಿಖರ್ ಧವನ್

Shikar Dhawan Breaks Kohli , Rohit And Rainas Record: Dhawan Slams his 39th IPL Fifty

ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಓಪನರ್ ಶಿಖರ್ ಧವನ್ ಐಪಿಎಲ್‌ನಲ್ಲಿ 39ನೇ ಅರ್ಧಶತಕ ದಾಖಲಿಸಿದರು. ಈ ಸಾಧನೆಯ ಜೊತೆಗೆ ಗಬ್ಬರ್ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ ದಾಖಲೆಯನ್ನು ಮುರಿದಿದ್ದಾರೆ.

ಆರ್‌ಆರ್ ವಿರುದ್ಧ ದುಬೈ ಸ್ಟೇಡಿಯಂನಲ್ಲಿ ಕೇವಲ 33 ಎಸೆತಗಳಲ್ಲಿ 57ರನ್ ಸಿಡಿಸಿದ ಶಿಖರ್ ಧವನ್ ಇನ್ನಿಂಗ್ಸ್‌ನಲ್ಲಿ ಆರು ಆಕರ್ಷಕ ಬೌಂಡರಿ ಹಾಗೂ ಎರಡು ಅಮೋಘ ಸಿಕ್ಸರ್‌ಗಳಿದ್ದವು. ಶಿಖರ್‌ ಧವನ್ ಅರ್ಧಶತಕ ಪೂರೈಸುತ್ತಿದ್ದಂತೆಯೇ ವೈಯಕ್ತಿಕ ದಾಖಲೆಯ ಜೊತೆಗೆ ಮೂವರು ಖ್ಯಾತ ನಾಮರ ರೆಕಾರ್ಡ್ ಅನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಬುಧವಾರ ಶಿಖರ್ ತಮ್ಮ 39ನೇ ಶತಕ ಸಿಡಿಸುತ್ತಿದ್ದಂತೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ದಾಖಲಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಸಾಧನೆ ಮಾಡಿದರು. ವಿರಾಟ್ ಕೊಹ್ಲಿ , ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ಐಪಿಎಲ್‌ನಲ್ಲಿ ತಲಾ 38 ಅರ್ಧಶತಕ ದಾಖಲಿಸಿದ್ದಾರೆ.

ಐಪಿಎಲ್ ಅತಿ ಹೆಚ್ಚು ಅರ್ಧಶತಕ ದಾಖಲಿಸಿರುವ ದಾಖಲೆಯನ್ನು ಸನ್‌ರೈಸರ್ಸ್ ಹೈದ್ರಾಬಾದ್ ನಾಯಕ ಡೇವಿಡ್ ವಾರ್ನರ್ (46) ಹೆಸರಿನಲ್ಲಿದೆ.

Story first published: Thursday, October 15, 2020, 0:03 [IST]
Other articles published on Oct 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+