Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

68 ಕೋಟಿ ನೀಡಿ ಐಶಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಶಿಖರ್‌

ಶಿಖರ್‌ ಧವನ್‌ ನಿವೃತ್ತಿ ಘೋಷಿಸಿದ ಬಳಿಕ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಈ ಮೊದಲು ಶಿಖರ್‌ ಧವನ್‌ ಐರ್ಲೆಂಡ್‌ ಬೆಡಗಿಯ ಜೊತೆ ಕಾಣಿಸಿಕೊಂಡು ಸುದ್ದಿಯಲ್ಲಿದ್ದರು. ಈಗ ಹರಿಯಾಣದ ಗುರುಗ್ರಾಮ್‌ನಲ್ಲಿ ಆಸ್ತಿ ಖರೀದಿಸಿ ಸುದ್ದಿಯಲ್ಲಿದ್ದಾರೆ. ಇವರು ಗುರುಗ್ರಾಮ್‌ನಲ್ಲಿ ಐಶಾರಾಮಿ ಮನೆಯನ್ನು ಖರೀದಿಸಿದ್ದಾರೆ ಎಂಬ ಸುದ್ದಿಗಳು ಬಂದಿವೆ. ಈ ಅಪಾರ್ಟ್ಮೆಂಟ್‌ ಬೆಲೆ ಕೆಳೆದ್ರೆ ಶಾಕ್‌ ಆಗುತ್ತದೆ.

ಶಿಖರ್‌ ಧವನ್‌ ಗುರುಗ್ರಾಮ್‌ನ ಗಾಲ್ಫ್‌ ಕೋರ್ಸ್‌ ರಸ್ತೆತಲ್ಲಿ ಡಿಎಲ್‌ಎಫ್‌ನ ಸೂಪರ್‌ ಲಕ್ಸುರಿ "ದಿ ಡೇಲಿಯಾಸ್‌" ಯೋಜನೆಯ ಅಡಿಯಲ್ಲಿ ಶಿಖರ್ ಧವನ್‌ 69 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರೆ. ಇನ್ನು ರಿಯಲ್‌ ಎಸ್ಟೇಟ್‌ ವ್ಯಾಪಾರಿಗಳು ತಿಳಿಸುವಂತೆ 6,040 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಅಪಾರ್ಟ್‌ಮೆಂಟ್‌ ಬೆಲೆ 65.61 ಕೋಟಿ ರೂಪಾಯಿ. ಮುದ್ರಾಂಕ್‌ ಶುಲ್ಕ ಸೇರಿದಂತೆ ಈ ಅಪಾರ್ಟ್‌ಮೆಂಟ್‌ ಬೆಲೆ 68.89 ಕೋಟಿ ರೂ. ಆಗಿದೆ.

Shikhar Dhawan Buys 69 Crore Luxury Apartment in Gurugram Amid Rumors of New Relationship

ಏನೆಲ್ಲಾ ಇದೆ?

ಗುರುಗ್ರಾಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಐಶಾರಾಮಿ ಸೌಲಭ್ಯಗಳು ಇವೆ. ಇದರಲ್ಲಿ ಖಾಸಗಿ ರಂಗ ಮಂದಿರ, ಈಜುಕೊಳ, ಸನ್‌ ಡೆಕ್‌, ಸ್ಮಾರ್ಟ್‌ ಹೋಮ್‌ ಸೌಲಭ್ಯಗಳನ್ನು ಒಳಗೊಂಡಿದೆ. ಗಾಲ್ಫ್ ಕೋರ್ಸ್ ರಸ್ತೆಯ ಈ ಪ್ರದೇಶವೂ ಹಣವಂತರನ್ನು ಕೈ ಬೀಸಿ ಕರೆಯುತ್ತಿದೆ. 'ದ ಡೇಲಿಯಾಸ್' ಯೋಜನೆಯಲ್ಲಿ ಸುಮಾರು 420 ಅಲ್ಟ್ರಾ-ಐಷಾರಾಮಿ ಅಪಾರ್ಟ್‌ಮೆಂಟ್‌ಗಳು ಮತ್ತು ಪೆಂಟ್‌ಹೌಸ್‌ಗಳನ್ನು ಹೊಂದಿದೆ. ಅಲ್ಲದೆ ಈ ಪ್ರದೇಶದಲ್ಲಿ ವಾತಾವರಣ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇದು ಉನ್ನತ ಮಟ್ಟದ ಭದ್ರತೆಯನ್ನು ಸಹ ಹೊಂದಿದೆ. ಈ ಸ್ಥಳ ಸದ್ಯ ಸೆಲೆಬ್ರಿಟಿಗಳನ್ನು ಕೈ ಬೀಸಿ ಕರೆಯುತ್ತದೆ. ಈ ಅಪಾರ್ಟ್‌ಮೆಂಟ್‌ ಕೆಲಸಗಳು ನಡೆಯುತ್ತಿದ್ದು ಶಿಖರ್‌ ಈ ವರ್ಷದ ಕೊನೆಯಲ್ಲಿ ಶಿಫ್ಟ್‌ ಆಗಬಹುದು. ಅಂದಾಹಾಗೆ ಶಿಖರ್‌ ಫೆಬ್ರವರಿ 4, 2025 ರಂದು ಈ ಆಸ್ತಿಯ ಬುಕಿಂಗ್ ಮಾಡಿದ್ದರು ಎಂದು ತಿಳಿದು ಬಂದಿದೆ.

ಶಿಖರ್‌ ಧವನ್‌, ಆಯೇಷಾ ಮುಖರ್ಜಿ ಅವರೊಂದಿಗೆ ವಿವಾಹವನ್ನು ಮಾಡಿಕೊಂಡಿದ್ದರು. ಬಳಿಕ ಇವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ, ಶಿಖರ್‌ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಶಿಖರ್‌ ಧವನ್‌ ಅವರ ಮಗ ತಾಯಿ ಜೊತೆ ಇರುತ್ತಿದ್ದಾರೆ. ಈಗ ಶಿಖರ್‌ ಮತ್ತೊಬ್ಬ ಸುಂದರಿಯ ಜೊತೆ ಕಾಣಿಸಿಕೊಳ್ಳುತ್ತಿದ್ದು ಭಾರೀ ಸುದ್ದಿಯಲ್ಲಿದ್ದಾರೆ. ಈ ಜೋಡಿ ಚಾಂಪಿಯನ್ಸ್‌ ಟ್ರೋಫಿಯ ವೇಳೆಯೂ ಒಟ್ಟಾಗಿ ಕಾಣಿಸಿಕೊಂಡಿತ್ತು. ಅಲ್ಲದೆ ಶಿಖರ್ ಧವನ್‌ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದ ವೇಳೆಯೂ ಇವರು ಕಾಣಿಸಿಕೊಂಡಿದ್ದರು. ಈ ಅಪಾರ್ಟ್‌ಮೆಂಟ್‌ಗೆ ಧವನ್‌ ತನ್ನ ಐರ್ಲೆಂಡ್‌ ಗೆಳತಿಯ ಜೊತೆಗೆ ಶಿಫ್ಟ್‌ ಆಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

Shikhar Dhawan Buys 69 Crore Luxury Apartment in Gurugram Amid Rumors of New Relationship

ಶಿಖರ್ ಧವನ್‌ ಸಾಧನೆ

ಶಿಖರ್‌ ಧವನ್‌ ಟೀಮ್ ಇಂಡಿಯಾದ ಪರ ಅದೆಷ್ಟೋ ಕ್ಲಾಸ್‌ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಇವರು ಭಾರತದ ಪರ 34 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 7 ಶತಕ, 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್‌ ಸಿಡಿಸಿದ್ದಾರೆ. ಇದರಲ್ಲಿ 17 ಶತಕ, 39 ಅರ್ಧಶತಕ ಸೇರಿವೆ.

Story first published: Thursday, May 22, 2025, 18:05 [IST]
Other articles published on May 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+