Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭೋಜನ ವಿರಾಮಕ್ಕೂ ಮುಂಚೆ ಶತಕ, ಧವನ್ ದಾಖಲೆ

Shikhar Dhawan first Indian to score a century before Lunch vs Afghanistan

ಬೆಂಗಳೂರು, ಜೂನ್ 14: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ ಆರಂಭವಾದ ಐತಿಹಾಸಿಕ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.

ಇದಕ್ಕೂ ಮುನ್ನ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಭಾರತ ತಂಡದ ಆರಂಭಿಕ ಆಟಗಾರರಿಬ್ಬರೂ ಉತ್ತಮ ಗತಿಯಲ್ಲಿ ರನ್ ಕಲೆ ಹಾಕಿದರು.

ಭಾರತ vs ಆಫ್ಘಾನಿಸ್ತಾನ ಸ್ಕೋರ್ ಕಾರ್ಡ್

ಭೋಜನ ವಿರಾಮದ ವೇಳೆಗೆ ಭಾರತ 27 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 158 ರನ್ ಬಾರಿಸಿತ್ತು.

ಕೇವಲ 88 ಎಸೆತಗಳಲ್ಲಿ ಶತಕ ದಾಖಲಿಸಿದ ಶಿಖರ್ ಧವನ್, ಭೋಜನ ವಿರಾಮದ ವೇಳೆಗೆ 104 (91) ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ನಂತರ 96 ಎಸೆತಗಳಲ್ಲಿ 107ರನ್ ಗಳಿಸಿ ಔಟಾದರು. ಧವ 19 ಬೌಂಡರ್ ಮತ್ತು 3 ಭರ್ಜರಿ ಸಿಕ್ಸರ್‌ ಸಿಡಿದರು.

ಭೋಜನ ವಿರಾಮಕ್ಕೂ ಮೊದಲು ಶತಕ
ಇಲ್ಲಿ ತನಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನದ ಮೊದಲ ಅವಧಿಯಲ್ಲಿ ಭೋಜನ ವಿರಾಮಕ್ಕೂ ಮುನ್ನ ಭಾರತದ ಯಾವೊಬ್ಬ ಬ್ಯಾಟ್ಸ್ ಮನ್ ಶತಕ ಬಾರಿಸಿರಲಿಲ್ಲ. ಈ ದಾಖಲೆಯನ್ನು ಇಂದು(ಜೂನ್ 14) ಧವನ್ ಬರೆದಿದ್ದಾರೆ.

* 104-ಶಿಖರ್ ಧವನ್ -vs ಅಫ್ಘಾನಿಸ್ತಾನ, 2018
* 99 -ಸೆಹ್ವಾಗ್ -vs ವೆಸ್ಟ್ ಇಂಡೀಸ್, 2006
* 94 -ಫರೂಕ್ ಇಂಜಿನಿಯರ್-vs ವೆಸ್ಟ್ ಇಂಡೀಸ್, 1967
* 91- ಸೆಹ್ವಾಗ್-vs ಶ್ರೀಲಂಕಾ, 2008
* ಸೆಹ್ವಾಗ್ -vs ನ್ಯೂಜಿಲೆಂಡ್, 2010
* ಶ್ರೀಕಾಂತ್ -vs ಆಸ್ಟ್ರೇಲಿಯಾ, 1986



ಆದರೆ, ವಿಶ್ವ ಕ್ರಿಕೆಟ್ ನಲ್ಲಿ ಶಿಖರ್ ಧವನ್ ಗೂ ಮುನ್ನ ಐವರು ಕ್ರಿಕೆಟರ್ ಗಳು ಈ ಸಾಧನೆ ಮಾಡಿದ್ದಾರೆ.
* ಟ್ರಂಪರ್, 1902
* ಮಕಾರ್ಟ್ನಿ, 1926
* ಬ್ರಾಡ್ಮನ್ , 1930
* ಮಜೀದ್ ಖಾನ್, 1976
* ವಾರ್ನರ್, 2017

ಟಿ 20 ಮತ್ತು ಏಕದಿನ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಆಫ್ಘಾನಿಸ್ತಾನಕ್ಕೆ ಐಸಿಸಿ ಟೆಸ್ಟ್ ಮಾನ್ಯತೆ ನೀಡಿದ್ದು, ಇದೇ ಮೊದಲ ಬಾರಿಗೆ ಅದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡುತ್ತಿದೆ.

Story first published: Thursday, June 14, 2018, 16:51 [IST]
Other articles published on Jun 14, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+