Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟಿಗ ಶಿಖರ್ ಧವನ್‌ಗೆ ತಂದೆಯಿಂದಲೇ ಹಿಗ್ಗಾ ಮುಗ್ಗಾ ಥಳಿತ: ವೀಡಿಯೋ ವೈರಲ್

Shikhar dhawan

ಐಪಿಎಲ್ ಸರಣಿಯಲ್ಲಿ ಪ್ಲೇ ಆಫ್ ಸುತ್ತಿಗೆ ತೆರಳದೆ ಮನೆಗೆ ವಾಪಸ್ಸಾದ ಪಂಜಾಬ್ ಕಿಂಗ್ಸ್ ತಂಡದ ಓಪನರ್‌ ಶಿಖರ್ ಧವನ್‌ಗೆ ತಂದೆಯೇ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಅಂತಿಮ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ಸನ್‌ರೈಸರ್ಸ್ ಹೈದ್ರಾಬಾದ್‌ ವಿರುದ್ಧ ಗೆದ್ದು ಟೂರ್ನಿಯಿಂದ ಬರಿಗೈನಲ್ಲಿ ನಿರ್ಗಮಿಸಿತು. ಈ ಸೀಸನ್‌ನಲ್ಲಿ ಪಂಜಾಬ್ ಪರ ಮಿಂಚಿದ ಶಿಖರ್ ಧವನ್ 14 ಪಂದ್ಯಗಳಲ್ಲಿ 460 ರನ್ ಗಳಿಸಿದ್ದಾರೆ.

ಇದಾದ ಬಳಿಕ ಮುಂಬರುವ ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಆಯ್ಕೆಯಾಗಬಹುದು ಎಂದು ನಿರೀಕ್ಷಿಸಿದ್ದ ಶಿಖರ್ ಧವನ್‌ಗೆ ಭಾರೀ ನಿರಾಸೆಯಾಯಿತು. ಕಾರಣ ಐದು ಪಂದ್ಯಗಳ ಟಿ20 ಸರಣಿ ಆಡುವ ಭಾರತದ ಸ್ಕ್ವಾಡ್‌ನಲ್ಲಿ ಧವನ್‌ಗೆ ಅವಕಾಶ ನೀಡಿಲ್ಲ.

ರೋಹಿತ್ ಅನುಪಸ್ಥಿತಿಯಲ್ಲಿ ಧವನ್‌ಗೆ ಅವಕಾಶ ಸಿಗುವ ನಿರೀಕ್ಷೆ ಇತ್ತು. ಆದರೆ, 460 ರನ್ ಗಳಿಸಿದ್ದ ಧವನ್ ಅವರನ್ನು ಆಯ್ಕೆಗಾರರು ​​ತಂಡದಲ್ಲಿ ಸೇರಿಸಿಕೊಳ್ಳಲಿಲ್ಲ. ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಿದ್ದರೂ, ಧವನ್‌ಗೆ ಏಕೆ ಅವಕಾಶ ನೀಡಲಿಲ್ಲ ಎಂದು ಸುರೇನ್ ರೈನಾ ಪ್ರತಿಕ್ರಿಯಿಸಿದ್ದಾರೆ.

ಈ ಪರಿಸ್ಥಿತಿಯಲ್ಲಿ, ಶಿಖರ್ ಧವನ್ ಐಪಿಎಲ್ ಲೀಗ್ ಸುತ್ತಿನ ನಂತರ ಮನೆಗೆ ಮರಳಿದರು. ಆಗ ಶಿಖರ್ ಧವನ್ ತಂದೆ ಏಕಾಏಕಿ ಧವನ್ ಗೆ ಹೊಡೆದು ಕೆಳಗೆ ಬೀಳಿಸಿರುವ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಲಾಗಿತ್ತು. ಐಪಿಎಲ್ ಸರಣಿಯಲ್ಲಿ ಪ್ಲೇ-ಆಫ್‌ಗೆ ಹೋಗದಿದ್ದಕ್ಕಾಗಿ ತನ್ನ ತಂದೆ ಹೊಡೆದಿದ್ದಾರೆ ಎಂದು ಧವನ್ ಶೀರ್ಷಿಕೆ ನೀಡಿದ್ದಾರೆ.

ಆದ್ರೆ ಇದು ಕೇವಲ ತಮಾಷೆಗಾಗಿ ಸೆಟಪ್ ಮಾಡಿ ತೆಗೆದಿರುವ ವೀಡಿಯೋ ಆಗಿದೆ. ಅಭಿಮಾನಿಗಳನ್ನ ರಂಜಿಸಲು ಶಿಖರ್ ಧವನ್ ಮನೆಯವರನ್ನೆಲ್ಲಾ ಸೇರಿಸಿ ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು, ನಕ್ಕು ಇತರರಿಗೆ ಶೇರ್ ಮಾಡಿದ್ದು, 6.5 ಲಕ್ಷದಷ್ಟು ಲೈಕ್ಸ್ ಬಂದಿವೆ.

ಇನ್ನು ಶಿಖರ್ ಧವನ್ ಮತ್ತು ಅವರ ತಂದೆ ಸೂಪರ್ ಆಗಿ ನಟಿಸಿರುವುದರಿಂದ ಬಾಲಿವುಡ್‌ನಲ್ಲಿ ಅವಕಾಶ ಸಿಗಬಹುದು ಎಂದು ಅಭಿಮಾನಿಗಳು ಸಹ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

Story first published: Friday, May 27, 2022, 9:48 [IST]
Other articles published on May 27, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+