Shikhar dhawan: ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಶಿಖರ್ ಧವನ್ ಟ್ವೀಟ್ ವೈರಲ್
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಈ ವೇಳೆ ಉಭಯ ದೇಶಗಳ ನಡುವೆ ದಾಳಿಗಳು ನಡೆದವು. ಈ ವೇಳೆ ಭಾರತ ತಂಡದ ಕಾರ್ಯಚರಣೆಯ ವಿವರವನ್ನು ಕರ್ನಲ್ ಸೋಫಿಯಾ ಖುರೇಷಿ ಅವರು ನೀಡುತ್ತಿದ್ದರು. ಇವರ ಕಾರ್ಯ ವೈಖರಿ ಬಗ್ಗೆ ಹಲವು ಜನರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು. ಇದೇ ಸಾಲಿಗೆ ಟೀಮ್ ಇಂಡಿಯಾದ ಗಬ್ಬರ್ ಖ್ಯಾತಿಯ ಶಿಖರ್ ಧವನ್ ಸಹ ಸೇರಿಕೊಂಡಿದ್ದಾರೆ.
ಶಿಖರ್ ಧವನ್ ಉದ್ವಿಗ್ನ ಪರಿಸ್ಥಿತಿಯ ಮೇಲೆ ಕರ್ನಲ್ ಖುರೇಷಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಭಾರತ, ಪಾಕ್‌ಗೆ ತಕ್ಕ ಉತ್ತರವನ್ನು ನೀಡಿ ನಿಮ್ಮ ಜೊತೆಗೆ ನಾವಿದ್ದೀವಿ ಎಂದು ಹೇಳಿದ ಪ್ರತಿ ಭಾರತೀಯ ಮುಸ್ಲೀಮರಿಗೂ ಶಿಖರ್ ಧನ್ಯವಾದ ತಿಳಿಸಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಳಿಕ ಮುನ್ನಲೆಗೆ ಬಂದಿದ್ದಾರೆ.

ಶಿಖರ್ ಟ್ವೀಟ್‌ನಲ್ಲಿ ಏನಿದೆ?
ಭಾರತದ ದೇಶದ ಆತ್ಮ ಏಕತೆ. ಕರ್ನಲ್ ಸೋಫಿಯಾ ಖುರೇಷಿಯ ಅವರಂಹ ವೀರರಿಗೆ ಮತ್ತು ದೇಶಕ್ಕಾಗಿ ಹೋರಾಡಿ ನಿಮ್ಮ ಜೊತೆ ನಾವು ನಿಲ್ಲುತ್ತೇವೆ ಎಂದು ಹೇಳಿದ ಅಸಂಖ್ಯಾತ ಭಾರತದ ಮುಸ್ಲೀಮರ್‌ರಿಗೆ ನಮನಗಳು" ಜೈಹಿಂದ್ ಎಂದು ಶಿಖರ್ ಧವನ್ ಬರೆದುಕೊಂಡಿದ್ದಾರೆ.
ಭಾರತದ ಜಮ್ಮು ಪಾಂತ್ರದಲ್ಲಿ ಏಪ್ರಿಲ್ 22 ರಂದು ಪಹಲ್ಗಾಮ್‌ಗೆ ಪ್ರವಾಸಕ್ಕೆ ತೆರಳಿದ್ದ 26 ಅಮಯಾಕರ ಮೇಲೆ ಉಗ್ರರರು ದಾಳಿ ನಡೆಸಿ ಹತ್ಯೆ ನಡೆಸಿದರು. ಈ ಕೃತ್ಯ ದೇಶದಲ್ಲಿ ಕಿಚ್ಚು ಹಚ್ಚಿತು. ಪಹಲ್ಗಾಮ್‌ನಲ್ಲಿ ಜನರ ಹೆಸರನ್ನು ಕೇಳಿ ಉಗ್ರರರು ಕೊಂದಿದ್ದರು. ಹಿಂದೂಗಳನ್ನು ಗುರಿಯಾಗಿಸಿದ್ದರು. ಈ ಒಂದು ನರಮೇಧಕ್ಕೆ ಪ್ರತಿಯಾಗಿ

ಇದೇ ವೇಳೆಗೆ ಕರ್ನಲ್ ಸೋಫಿಯಾ ಹಾಗೂ ವ್ಯೋಮಿಕಾ ಸಿಂಗ್ ಅವರ ಪ್ರೆಸ್ ಮೀಟ್ ನಡೆಸಿ ನಡೆದ ಘನೆಯ ಬಗ್ಗೆ ಜನರು ಹೆಣ್ಣು ಮಕ್ಕಳ ಸಾಧನೆಯನ್ನು ಕೊಂಡಾಡೊದ್ದಾರೆ. ಭಾರತ ತಂಡದ ಆಟಗಾರರು ಸಹ ಭಾರತದ ಹೆಮ್ಮೆಯ ಸೈನಿಕರಿಗೆ ತಮ್ಮದೇ ರೀತಿಯಲ್ಲಿ ಕೃತ್ಞತೆ ತಿಳಿಸಿದ್ದಾರೆ. ಪಾಕ್ ಕಾಲು ಕರೆದು ದಾಳಿ ನಡೆಸಿದಾಗ ಧನವ್ ಟ್ವಿಟ್ ಮಾಡಿದ್ದರು. ಈ ಅಗ್ಗದ ದೇಶ ಮತ್ತೊಮ್ಮೆ ತನ್ನ ಅಗ್ಗದತೆಯನ್ನು ಇಡೀ ಜಗತ್ತಿಗೆ ತೋರಿಸಿದೆ" ಎಂದು ಧವನ್ ಬರೆದಿದ್ದರು. ಇನ್ನು ಪಾಕ್ ನಡೆಸಿದ್ದ ಡ್ರೋನ್ ದಾಳಿಯನ್ನು ಭಾರತ ತಡೆದಾಗಲೂ ಶಿಖರ್ ಟ್ವೀಟ್ ಮಾಡಿದ್ದರು. "ನಮ್ಮ ಗಡಿಗಳನ್ನು ಬಲವಾಗಿ ರಕ್ಷಿಸಿದ್ದಕ್ಕಾಗಿ ಮತ್ತು ಜಮ್ಮುವಿನ ಮೇಲೆ ಡ್ರೋನ್ ದಾಳಿಯನ್ನು ತಡೆಗಟ್ಟಿದ್ದಕ್ಕಾಗಿ ನಮ್ಮ ಧೈರ್ಯಶಾಲಿ ಸೈನಿಕರಿಗೆ ನಮಸ್ಕಾರ". ಭಾರತ ಬಲಿಷ್ಠವಾಗಿದೆ. ಜೈ ಹಿಂದ್! ಎಂದು ಬರೆದುಕೊಂಡಿದ್ದರು.
ಮೇ 8 ರಂದು ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ತೀವ್ರವಾಗಿದ್ದರಿಂದ ಧರ್ಮಶಾಲಾದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಪಂದ್ಯವನ್ನು ಐಪಿಎಲ್ ಪುನರಾರಂಭವಾದ ಬಳಿಕ ಮತ್ತೊಮ್ಮೆ ಆಡಿಸಲಾಗುತ್ತಿದೆ. ಐಪಿಎಲ್ ಮೇ 17ರಂದು ಪುನರಾರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications