ವಿಂಡೀಸ್ ಲೆಜೆಂಡ್ ಶಿವನಾರಾಯಣ್ ಚಂದ್ರಪಾಲ್ ಮಗನಿಗೆ ಟೆಸ್ಟ್ ಸ್ಕ್ವಾಡ್‌ನಲ್ಲಿ ಸ್ಥಾನ

ವೆಸ್ಟ್ ಕ್ರಿಕೆಟ್ ತಂಡದ ಸಾರ್ವಕಾಲಿಕ ಶ್ರೇಷ್ಟ ಬ್ಯಾಟರ್‌ಗಳಲ್ಲಿ ಒಬ್ಬರಾದ ಶಿವನಾರಾಯಣ್ ಚಂದ್ರಪಾಲ್ ಮಗನಿಗೆ ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ಸ್ಕ್ವಾಡ್‌ನಲ್ಲಿ ಸ್ಥಾನ ನೀಡಲಾಗಿದೆ.
ವೆಸ್ಟ್ ಇಂಡೀಸ್ ತಂಡವು ಸದ್ಯ ಕಷ್ಟದ ಸಂದರ್ಭಗಳನ್ನು ಎದುರಿಸಿದ್ದು ಟಿ20 ವಿಶ್ವಕಪ್‌ನಲ್ಲಿ ಅರ್ಹತಾ ಸುತ್ತಿನಲ್ಲೇ ಮುಗ್ಗರಿಸಿದ್ದಲ್ಲದೆ ಸೂಪರ್ 12 ಕೂಡ ತಲುಪಲಾಗದೆ ತವರನ್ನ ಸೇರಿದೆ. ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ಇಷ್ಟು ಕೆಟ್ಟದಾಗಿ ಸೋತು ವಿಶ್ವಕಪ್‌ನಿಂದ ನಿರ್ಗಮಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ಹೀಗಾಗಿಯೇ ವಿಂಡೀಸ್ ತಂಡದಲ್ಲಿ ಮುಂಬರುವ ದಿನಗಳಲ್ಲಿ ಸಾಕಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಕಂಡತಹ ಬೆಸ್ಟ್ ಬ್ಯಾಟರ್‌ಗಳಲ್ಲಿ ಶಿವನಾರಾಯಣ್ ಚಂದ್ರಪಾಲ್ ಕೂಡ ಒಬ್ಬರು. ಅದ್ರಲ್ಲೂ ವಿಶೇಷವಾಗಿ ಟೆಸ್ಟ್ ಹಾಗೂ ಏಕದಿನ ಫಾರ್ಮೆಟ್‌ನಲ್ಲಿ ವಿಂಡೀಸ್ ಬ್ಯಾಟಿಂಗ್ ಲೈನಪ್‌ಗೆ ಶಕ್ತಿ ತುಂಬಿದ್ದರು. ಮಧ್ಯಮ ಕ್ರಮಾಂಕದ ವೆಸ್ಟ್ ಇಂಡೀಸ್ ಬ್ಯಾಟರ್ ತನ್ನ 2016ರಲ್ಲಿ ತನ್ನ 41ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದರು.
ಆದ್ರೀಗ ಚಂದ್ರಪಾಲ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಆದ್ರೆ ಶಿವನಾರಾಯಣ್ ಚಂದ್ರಪಾಲ್ ಅಲ್ಲ, ಅವರ ಮಗ ಟಾಗೆನರೈನ್ ಚಂದ್ರಪಾಲ್ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಂಡೀಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಈ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಸಾಕಷ್ಟು ವಿಭಿನ್ನ ರೀತಿಯಲ್ಲಿ ತಮ್ಮ ಭಾವನೆಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹೊರಹಾಕಿದ್ದಾರೆ. ಅದ್ರಲ್ಲೂ ಶಿವನಾರಾಯಣ್ ಚಂದ್ರಪಾಲ್ ತನ್ನ ವಿಶಿಷ್ಟ ರೀತಿಯಲ್ಲಿ ಕ್ರೀಸ್‌ನಲ್ಲಿ ನಿಲ್ಲುವ ಅಭ್ಯಾಸ ಹೊಂದಿದ್ದರು. ಈ ಬ್ಯಾಟಿಂಗ್ ಶೈಲಿಯನ್ನ ಮಗನೂ ಮುಂದುವರಿಸುತ್ತಾನ ಎಂಬುದನ್ನ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications