ಇಮ್ರಾನ್ ಖಾನ್ ಪಾಕಿಸ್ತಾನವನ್ನು 'ಏಷ್ಯನ್ ಟೈಗರ್' ಮಾಡಬಲ್ಲರು: ಅಖ್ತರ್

ಇಸ್ಲಮಾಬಾದ್, ಜುಲೈ 28: ಜುಲೈ 25ರಂದು ನಡೆದ ಚುನಾವಣೆಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಆಲ್ ರೌಂಡರ್ ಇಮ್ರಾನ್ ಖಾನ್ ಅವರು ಪ್ರಧಾನ ಮಂತ್ರಿಯಾಗಿ ಚುನಾಯಿತರಾಗಿದ್ದು, ಹೊಸ ಪ್ರಧಾನಿ ಇಮ್ರಾನ್ ಅವರು ಪಾಕಿಸ್ತಾನವನ್ನು 'ಏಷ್ಯನ್ ಟೈಗರ್' ಆಗಿ ಬದಲಿಸಬಲ್ಲರು ಎಂದು ಮಾಜಿ ಕ್ರಿಕೆಟಿಗ, ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಡೆದಿದ್ದ ಚುನಾವಣೆಯಲ್ಲಿ ಇಮ್ರಾನ್ ಅವರ ತೆಹ್ರಿಕ್-ಇ-ಇನ್ಸಾಫ್ ಪಕ್ಷ ಗೆಲುವು ಸಾಧಿಸಿತ್ತು. ಹಾಗಾಗಿ ಈಗ ಪ್ರಧಾನ ಮಂತ್ರಿ ಸ್ಥಾನದಲ್ಲಿರುವ ತನ್ನ ಸಹ ಆಟಗಾರ ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲ ಎಂಬರ್ಥದಲ್ಲಿ ರಾವಲ್ಪಿಂಡಿ ಎಕ್ಸ್ ಪ್ರೆಸ್ ಖ್ಯಾತಿಯ ಅಖ್ತರ್ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ತಂಡದಲ್ಲಿ ಪ್ರಮುಖ ಆಟಗಾರರಾಗಿ ಗಮನ ಸೆಳೆದಿದ್ದ ಖಾನ್, ಇಂಗ್ಲೆಂಡ್ ನಲ್ಲಿ ನಡೆದಿದ್ದ ವಿಶ್ವಕಪ್ ಕ್ರಿಕೆಟ್ ನಲ್ಲಿ ಪಾಕಿಸ್ತಾನವನ್ನು ಗೆಲ್ಲಿಸಿಕೊಟ್ಟು ಆ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು. ಆದರೆ ಅನಂತರ ಇಮ್ರಾನ್, ರಾಜಕೀಯದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. 1996ರಲ್ಲಿ ತಮ್ಮದೇ ಪಕ್ಷವೊಂದನ್ನು ಕೂಡ ಸ್ಥಾಪಿಸಿದ್ದರು.
'ಕ್ರೀಡೆ ಸೇರಿದಂತೆ ಎಲ್ಲಾ ರಂಗದಲ್ಲಿ ಪಾಕಿಸ್ಥಾನ 'ಏಷ್ಯನ್ ಟೈಗರ್' ಆಗಿ ಗುರುತಿಸಿಕೊಳ್ಳುವಲ್ಲಿ ಇಮ್ರಾನ್ ಖಾನ್ ಸಹಾಯ ಮಾಡುತ್ತಾರೆಂದು ನಾನು ಭಾವಿಸಿದ್ದೇನೆ. ಆದರೆ ಯಶಸ್ವಿಗಾಗಿ ಇಡೀ ದೇಶವೇ ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಇಡೀ ದೇಶದ ಪರವಾಗಿ ನಾನು ಅವರನ್ನು ಪ್ರೀತಿಯಿಂದ ಅಭಿನಂದಿಸುತ್ತಿದ್ದೇನೆ' ಎಂದು ಅಖ್ತರ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications