ಶಾಹೀನ್ ಅಫ್ರಿದಿಗೆ ವಿಶ್ರಾಂತಿ ಬೇಕಿಲ್ಲ: ಶೋಯೆಬ್ ಅಖ್ತರ್

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ವೇಗಿ ಶಾಹೀನ್ ಅಫ್ರಿದಿಗೆ ವಿಶ್ರಾಂತಿಯ ಅಗತ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ. ಇತ್ತೀಚೆಗೆ ಜಿಂಜಾಬ್ವೆ ವಿರುದ್ಧದ ಸರಣಿ ಮುಗಿಸಿರುವ ಪಾಕ್ ಆಟಗಾರರ ಕೆಲಸದ ಹೊರೆ ನಿರ್ವಹಣೆಯತ್ತ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಯೋಚಿಸುತ್ತಿರುವುದರಿಂದ ಅಖ್ತರ್ ಹೀಗೆ ಸಲಹೆ ನೀಡಿದ್ದಾರೆ.
ಜಿಂಬಾಬ್ವೆ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ 2-0ಯ ಜಯ ಗಳಿಸಿದ ಬಳಿಕ ಪಾಕ್ ಪ್ರಮುಖ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದೆ ಎಂಬಂತೆ ಪಾಕ್ ಕ್ರಿಕೆಟ್ ಪಂಡಿತರು ಮಾತನಾಡಿದ್ದರು. ಹೀಗಾಗಿ ಅಖ್ತರ್ ಕೂಡ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತನ್ನ ಯೂ ಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಖ್ತರ್, 'ತನ್ನ ಟಿ20 ವೃತ್ತಿ ಬದುಕಿನಲ್ಲಿ ಶಾಹೀನ್ ಅಫ್ರಿದಿ ಸುಮಾರು 90 ಓವರ್‌ಗಳನ್ನು ಎಸೆದಿದ್ದಾರೆ. ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಅಫ್ರಿದಿ ಸುಮಾರು 150 ಓವರ್‌ಗಳನ್ನು ಎಸೆದಿದ್ದಾನೆ. ಹಾಗಾದರೆ ಆತ ಈಗಾಗಲೇ ಬಳಲಿದ್ದಾನಾ? ಆತನಿಗೆ ರೆಸ್ಟ್ ಬೇಕಾ?,' ಎಂದು ಪ್ರಶ್ನಿಸಿದ್ದಾರೆ.
'ಶಾಹೀನ್ ಅಫ್ರಿದಿ ಮೇಲೆ ಮತ್ತೆ ಮತ್ತೆ ಕೆಲಸದ ಹೊರೆಯ ಕಾಳಜಿ ವಹಿಸುವುದನ್ನು ನಿಲ್ಲಿಸಿ. ಇಮ್ರಾನ್ ಖಾನ್ ಮತ್ತು ವಾಸಿಮ್ ಅಕ್ರಮ್ ಆತನಿಗಿಂತ ಹೆಚ್ಚು ಓವರ್‌ಗಳನ್ನು ನೆಟ್‌ನಲ್ಲಿ ಮಾಡಿದ್ದಾರೆ. ಹೀಗಾಗಿ ಶಾಹೀನ್‌ಗೆ ವಿಶ್ರಾಂತಿ ಬೇಕಿಲ್ಲ,' ಎಂದು ಅಖ್ತರ್ ಸಲಹೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications