Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿ ಕುರಿತ ಪ್ರಶ್ನೆಗೆ ಮನ ತಾಕುವ ಉತ್ತರ ಕೊಟ್ಟ ಅಖ್ತರ್

Shoaib Akhtar comes up with heart-winning reply when asked to describe MS Dhoni

ಕರಾಚಿ: ಪಾಕಿಸ್ತಾನ ಕ್ರಿಕೆಟ್ ದಂತಕತೆ ಶೋಯೆಬ್ ಅಖ್ತರ್ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್‌ ವಿಚಾರಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಅಖ್ತರ್, ಕ್ರಿಕೆಟ್‌, ಕ್ರಿಕೆಟಿಗರ ಬಗೆಗಿನ ತನ್ನ ನೇರ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿರುತ್ತಾರೆ.

ತನ್ನದೇ ಯೂಟ್ಯೂಬ್‌ ಚಾನೆಲ್ ಮೂಲಕ ಕಾಣಿಸಿಕೊಂಡು ಅಭಿಮಾನಿಗಳ ಜೊತೆ ವಿಚಾರಗಳನ್ನು ಹಂಚಿಕೊಳ್ಳುವ ಮಾಜಿ ಮಾರಕ ವೇಗಿ ಶೋಯೆಬ್ ಅಖ್ತರ್, ಇತ್ತೀಚೆಗೆ ಟ್ವಿಟರ್‌ ಮೂಲಕ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿ ಗಮನ ಸೆಳೆದಿದ್ದರು. ಅದರಲ್ಲಿ ಧೋನಿ ಕುರಿತ ಪ್ರಶ್ನೆಗೆ ಅಖ್ತರ್ ಕೊಟ್ಟ ಉತ್ತರ ಮನಮುಟ್ಟುವಂತಿದೆ.

ಕ್ರಿಕೆಟ್‌ ಕುರಿತ ಪ್ರಶ್ನೆಗಳನ್ನು ಕೇಳಿ, ಉತ್ತರಿಸಲು ಯತ್ನಿಸುತ್ತೇನೆ ಎಂದು ಇತ್ತೀಚೆಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ಅಖ್ತರ್ ಅದಕ್ಕೆ #AskShoaibAkhtar ಹ್ಯಾಷ್‌ಟ್ಯಾಗ್‌ ಕೂಡ ಸೂಚಿಸಿದ್ದರು. ಈ ಹ್ಯಾಷ್‌ಟ್ಯಾಗ್ ಉಪಯೋಗಿಸಿ ಅಭಿಮಾನಿಯೊಬ್ಬರು 'ಧೋನಿಯ ಬಗ್ಗೆ ನೀವು ಏನು ಹೇಳಬಯಸುತ್ತೀರಿ?' ಎಂದು ಪ್ರಶ್ನಿಸಿದ್ದರು.

ಅಭಿಮಾನಿಯ ಪ್ರಶ್ನೆಗೆ ಅಖ್ತರ್ ಕೊಟ್ಟ ಉತ್ತರ ಹೃದಯಕ್ಕೆ ತಾಕುವಂತಿದೆ. ಅಭಿಮಾನಿಗೆ ಉತ್ತರಿಸಿರುವ ಅಖ್ತರ್, 'ಅದೊಂದು ಯುಗದ ಹೆಸರು' ಎಂದು ಅರ್ಥಪೂರ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಖ್ತರ್ ಹೇಳಿದ್ದು ನಿಜವೇ. ಧೋನಿ ಅನ್ನೋದು ಒಂದು ಯುಗದ ಹೆಸರಿದ್ದಂತೆ. ಅಲ್ಲವೆ?

Story first published: Wednesday, January 6, 2021, 10:01 [IST]
Other articles published on Jan 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+