ಪಾಕ್ ಮಂಡಳಿಗೆ ಬಿಸಿಸಿಐಯಿಂದ ಬರುವ ಹಣವೇ ಆಧಾರ!: ಪಿಸಿಬಿ ಪರಿಸ್ಥಿತಿ ಬಿಚ್ಚಿಟ್ಟ ಶೋಯೆಬ್ ಅಖ್ತರ್
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆನ್ ಅಖ್ತರ್ ಭಾರತ ತಂಡದ ಪರವಾಗಿ ಹೇಳಿಕೆಗಳನ್ನು ನೀಡುತ್ತಾ ಅಚ್ಚರಿ ಮೂಡಿಸಿದ್ದಾರೆ. ಇದೀಗ ಶೋಯೆಬ್ ಅಖ್ತರ್ ಅವರ ನೇರ ಮಾತೊಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡು ಮಾಡುವಂತಿದೆ. ಹೀಗಾಗಿ ಅಖ್ತರ್ ಆಡಿರುವ ಮಾತು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಮಂಡಳಿ ಎನ್ನುವದು ತಿಳಿದೇ ಇದೆ. ಭಾರತದ ಕ್ರಿಕೆಟ್ ಮಂಡಳಿಯ ಪ್ರಭಾವ ಎಷ್ಟು ಪ್ರಮಾಣದಲ್ಲಿ ಇದೆ ಎನ್ನುವುದನ್ನು ಹೇಳುವ ಸಂದರ್ಭದಲ್ಲಿ ಶೋಯೆಬ್ ಅಖ್ತರ್ ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೀಡುವ ಹಣವನ್ನು ನೆಚ್ಚಿಕೊಂಡಿದೆ ಎನ್ನುವುದನ್ನು ನೇರವಾಗಿ ಹೇಳಿದ್ದಾರೆ. ಇದರಿಂದಾಗಿ ಪಾಕ್ ಮಂಡಳಿ ಈಗ ಮುಜುಗರಕ್ಕೆ ಒಳಗಾಗುವಂತಾಗಿದೆ.

ಭಾರತದ ಪತ್ರಕರ್ತ ಬೋರಿಯಾ ಮಜುಂದಾರ್ ಅವರೊಂದಿಗೆ ಶೋಯೆಬ್ ಅಖ್ತರ್ ಸಂವಾದವೊಂದರಲ್ಲಿ ಭಾಗಿಯಾಗಿದ್ದರು. ಈ ಸಂವಾದದಲ್ಲಿ ವಿಶ್ವಕ್ರಿಕೆಟ್‌ನಲ್ಲಿ ಬಿಸಿಸಿಐ ಹೊಂದಿರುವ ಶಕ್ತಿ ಎಷ್ಟು ಎಂಬುದರ ಬಗ್ಗೆ ಕೇಳಲಾಗಿತ್ತು.ಈ ಸಂದರ್ಭದಲ್ಲಿ ಶೋಯೆಬ್ ಅಖ್ತರ್ ಬಿಸಿಸಿಐ ಆದಾಯದಿಂದ ಅನೇಕ ಕ್ರಿಕೆಟ್ ಮಂಡಳಿಗಳು ನೆರವು ಪಡೆಯುತ್ತಿದ್ದು ಸ್ವತಃ ಪಾಕಿಸ್ತಾನ ಕೂಡ ಅದನ್ನೇ ನೆಚ್ಚಿಕೊಂಡಿದೆ ಎನ್ನುವ ಅಂಶವನ್ನು ವಿವರಿಸಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿಯ ಲಾಭದಲಿ ಐಸಿಸಿ ಪಾಲು ಪಡೆಯುತ್ತದೆ ಹಾಗೂ ಅದನ್ನು ಉಳಿದ ಕ್ರಿಕೆಟ್ ಮಂಡಳಿಗಳಿಗೆ ಹಂಚುತ್ತದೆ. ಪಾಕಿಸ್ತಾನ ಕೂಡ ಐಸಿಸಿಯಿಂದ ನೆರವು ಪಡೆಯುತ್ತಿರುವ ರಾಷ್ಟ್ರಗಳ ಪೈಕಿ ಒಂದಾಗಿದ್ದು ಐಸಿಸಿಯಿಮದ ಬಂದ ನೆರವಿನ ಹಣವನ್ನು ಬಳಸಿಕೊಂಡು ದೇಶೀಯ ಕ್ರಿಕೆಟಿಗರ ಸಂಭಾವನೆಯನ್ನು ನೀಡುತ್ತದೆ ಎಂದು ಶೋಯೆನ್ ಅಖ್ತರ್ ಹೇಳಿಕೆ ನೀಡಿದ್ದಾರೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಜಾಗತಿಕ ಕ್ರಿಕೆಟ್ ಆಡಳಿತ ಮಂಡಳಿಯಾಗಿರುವ ಐಸಿಸಿ ಆದಾಯಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದೆ. ಪಾಕಿಸ್ತಾನ ಸೇರಿದಂತೆ ಹಲವು ಕ್ರಿಕೆಟ್ ಮಂಡಳಿಗಳು ಬಿಸಿಸಿಐನಿಂದ ನೆರವನ್ನು ಪಡೆಯುತ್ತಿದೆ. ಅವುಗಳ ಪೈಕಿ ಪಾಕಿಸ್ಥಾನ ಕೂಡ ಒಂದು ಎಂದಿದ್ದಾರೆ ಶೋಯೆಬ್ ಅಖ್ತರ್.
ಇನ್ನು ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ವೇಗಿ 2023ರ ಏಕದಿನ ವಿಶ್ವಕಪ್ ಸೂಪರ್‌ಹಿಟ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ವಿಶ್ವಕಪ್‌ನಿಂದ ಬಿಸಿಸಿಐ ಸಾಕಷ್ಟು ಹಣ ಗಳಿಸಲಿದೆ. ಈ ಮೂಲಕ ಬಿಸಿಸಿಐನ ಆರ್ಥಿಕ ಸ್ಥಿತಿ ಗಟ್ಟಿಯಾಗಲಿದೆ. ಭಾರತದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಸಾಕಷ್ಟು ರೋಚಕತೆಯಿಂದ ಕೂಡಿರುವ ನಿರೀಕ್ಷೆಯಿದೆ ಎಂದಿರುವ ಅವರು ಭಾರತ ಈ ವಿಶ್ವಕಪ್‌ನಿಂದ ಹೆಚ್ಚಿನ ಆದಾಯಗಳಿಸಲಿ ಎಂದು ತಾನು ಬಯಸುತ್ತೇನೆ ಎಂದಿದ್ದಾರೆ.
ಭಾರತ ಗಳಿಸುವ ಹಣದಿಂದ ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನ ಆಟಗಾರರು ಪಂದ್ಯದ ಸಂಭಾವನೆ ಪಡೆದು ತಮ್ಮ ಕುಟುಂಬಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಭಾರತದ ಗಳಿಸುವ ಲಾಭದಲ್ಲಿ ಐಸಿಸಿಯಿಂದ ಪಾಕಿಸ್ತಾನ ಕೂಡ ಪಾಲು ಪಡೆಯುತ್ತದೆ ಎನ್ನುವುದನ್ನು ನಾನು ಮುಜುಗರವಿಲ್ಲದೆ ಹೇಳುತ್ತೇನೆ ಎಂದಿದ್ದಾರೆ ಶೋಯೆಬ್ ಅಖ್ತರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications