ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳಿರುವಾಗ ಯಾವುದು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಮುಂಬರುವ ವಿಶ್ವಕಪ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡ ಯಾವುದು ಎನ್ನುವ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಭಾರತದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಗೆಲ್ಲುವ ಅವಕಾಶ ಹೊಂದಿರುವ ಮೂರು ತಂಡಗಳನ್ನು ಹೆಸರಿದ್ದಾರೆ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಗೆಲ್ಲುವ ತಂಡಗಳ ಪೈಕಿ ಪಾಕಿಸ್ತಾನ ಕೂಡ ಒಂದು ಎಂದು ಹೇಳಿದ್ದಾರೆ ಶೋಯೆಬ್ ಅಖ್ತರ್.

ಭಾರತ, ಇಂಗ್ಲೆಂಡ್ ಪಾಕ್ ನೆಚ್ಚಿನ ತಂಡಗಳು ಎಂದ ಅಖ್ತರ್
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತ ಹಾಲಿ ಚಾಂಪಿಯನ್ ಇಂಗ್ಲೆಂಡ್ ಜೊತೆಗೆ ಪಾಕಿಸ್ತಾನ ಕೂಡ ನೆಚ್ಚಿನ ತಂಡ ಎಂದಿದ್ದಾರೆ ಶೋಯೆಬ್ ಅಖ್ತರ್. ಇದೇ ಸಂದರ್ಭದಲ್ಲಿ ಅವರು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಣೆಸಾಟದ ಪೈಪೋಟಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದು ವಿಶ್ವಕಪ್ ಟೂರ್ನಿಯ ಹೈಲೈಟ್ ಆಗಿರಲಿದೆ ಎಂದಿದ್ದಾರೆ ಸೋಯೆಬ್ ಅಖ್ತರ್.
"ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡುವಾಗ ಪಾಕಿಸ್ತಾನ ಅಂಡರ್‌ಡಾಗ್ಸ್ ಆಗಿರಲಿದೆ. ಈ ಟೂರ್ನಿಯಲ್ಲಿ ಈ ಎರಡು ತಣಡಗಳು ಮುಖಾಮುಖಿಯಾದಾಗ ವಿಶ್ವಕಪ್ ಕುರಿತಾಗಿ ಯಾರೂ ಮಾತನಾಡುವುದಿಲ್ಲ. ಅದು ಕೇವಲ ಭಾರತ vs ಪಾಕಿಸ್ತಾನ ಪಂದ್ಯ ಮಾತ್ರವೇ ಆಗಿರಲಿದೆ" ಎಂದಿದ್ದಾರೆ ಶೋಯೆಬ್ ಅಖ್ತರ್. ಇನ್ನು ಇದೇ ಸಂದರ್ಭದಲ್ಲಿ ಅವರು ಈ ವಿಶ್ವಕಪ್ ಟೂರ್ನಿ ಕಳೆದ 50-60 ವರ್ಷಗಳಲ್ಲಿಯೇ ಅತ್ಯುತ್ತಮವಾದ ವಿಶ್ವಕಪ್ ಟೂರ್ನಿಯಾಗಿರಲಿದೆ ಎಂದಿದ್ದಾರೆ ಅಖ್ತರ್.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಸದ್ಯ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿದೆ. ಈ ಟೂರ್ನಿಯ ಗ್ರೂಪ್ ಹಂತದಲ್ಲಿ ಈಗಾಗಲೇ ಮುಖಾಮುಖಿಯಾಗುದ್ದರೂ ಮಳೆಯ ಕಾರಣದಿಂದಾಗಿ ಪಂದ್ಯ ರದ್ದಾಗಿತ್ತು. ಇದೀಗ ಟೂರ್ನಿಯಲ್ಲಿ ಎರಡನೇ ಬಾರಿಗೆ ಸೂಪರ್ 4 ಹಂತದಲ್ಲಿ ಮುಖಾಮುಖಿಯಾಗುವ ಅವಕಾಶವಿದೆ. ಮುಂದಿನ ಭಾನುವಾರ ಈ ಪಂದ್ಯ ಆಯೋಜನೆಯಾಗಲಿದ್ದು ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.