Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ವೇಗಿಗಳು ಪಾಕಿಸ್ತಾನದ ಬೌಲರ್‌ಗಳಂತೆ ಆಕ್ರಮಣಕಾರಿ ಅಲ್ಲ: ಶೋಯೆಬ್ ಅಖ್ತರ್‌

Shoaib akhtar
ಪ್ರಾಣಿಗಳ ಮಾಂಸ ತಿಂದು ಸಿಂಹದಂತೆ ಬೇಟೆಯಾಡೋ ಪಾಕ್ ಬೌಲರ್ಸ್ ಹೆಚ್ಚು ಬಲಿಷ್ಟ | Oneindia Kannada

ಪಾಕಿಸ್ತಾನ ಮಾಜಿ ಕ್ರಿಕೆಟಿಗ ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಖ್ಯಾತಿಯ ಶೋಯೆಬ್ ಅಖ್ತರ್, ಭಾರತದ ವೇಗಿಗಳು ಪಾಕಿಸ್ತಾನದ ಬೌಲರ್‌ಗಳಂತೆ ಆಕ್ರಮಣಕಾರಿ ಅಲ್ಲ ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ವೇಗಿಗಳ ವಿಭಾಗವು ಉತ್ತಮವಾಗಿ ಚೇತರಿಸಿಕೊಂಡಿದ್ದರೂ, ಕೆಲವು ವಿಷಯಗಳಲ್ಲಿ ಅದು ಪಾಕಿಸ್ತಾನದ ವೇಗಿಗಳಿಗಿಂತ ತುಂಬಾ ಹಿಂದುಳಿದಿದೆ ಎಂದು ಅವರು ಹೇಳಿದರು.

ವೇಗದ ಬೌಲಿಂಗ್‌ನಲ್ಲಿ ಪಾಕಿಸ್ತಾನದ ವೇಗಿಗಳ ಪ್ರಾಬಲ್ಯದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಅವರೊಂದಿಗೆ ಮಾತನಾಡುವಾಗ ಅಖ್ತರ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಭಾರತೀಯರ ಅವಹೇಳನಕಾರಿ ಆಹಾರ ಪದ್ಧತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

''ಭಾರತೀಯ ವೇಗಿಗಳು ತಮ್ಮ ಆಹಾರ ಪದ್ಧತಿಯಿಂದಾಗಿ ದುರ್ಬಲರಾಗಿ ಕಾಣುತ್ತಾರೆ. ಇದೇ ಅವರಿಗೂ ಪಾಕ್ ವೇಗಿಗಳಿಗೂ ಇರುವ ವ್ಯತ್ಯಾಸ. ಪಾಕಿಸ್ತಾನದ ವೇಗಿಗಳ ಮುಖದಲ್ಲಿ ಕಾಣುವ ಆಕ್ರಮಣಶೀಲತೆ ಭಾರತದ ವೇಗದ ಬೌಲರ್‌ಗಳ ಮುಖದಲ್ಲಿ ಕಾಣುತ್ತಿಲ್ಲ. ಈ ವ್ಯತ್ಯಾಸವು ಕ್ರಿಕೆಟ್‌ನ ಆರಂಭಿಕ ದಿನಗಳ ಹಿಂದಿನದು. ಕಾರಣ ನಮ್ಮ ಆಹಾರ, ಹವಾಮಾನ ಆಗಿದೆ ಎಂದು ಹೇಳಿದರು. ಬೌಲಿಂಗ್ ಮಾಡುವಾಗ ಪಾಕ್ ಬೌಲರ್‌ಗಳು ಬೇರೆ ವಿಷಯಗಳ ಬಗ್ಗೆ ಯೋಚಿಸುವುದಿಲ್ಲ'' ಎಂದು ಅಖ್ತರ್ ಹೇಳಿದ್ದಾರೆ.

ಪಾಕ್‌ ವೇಗಿಗಳ ಆಹಾರ ಪದ್ಧತಿ ಮತ್ತು ತರಬೇತಿ ಅವರಿಗೆ ವೇಗವಾಗಿ ಬೌಲಿಂಗ್ ಮಾಡಲು ಬೇಕಾದ ಶಕ್ತಿಯನ್ನು ನೀಡುತ್ತದೆ. ಇದಲ್ಲದೆ, ಅವರು ಹೆಚ್ಚು ಮಾಂಸವನ್ನು ತಿನ್ನುತ್ತಾರೆ. ಅದರೊಂದಿಗೆ ನಾವು ದೃಢವಾಗಿರುತ್ತೇವೆ. ವೇಗದ ಬೌಲಿಂಗ್ ವಿಷಯಕ್ಕೆ ಬಂದರೆ ನಾವು ಸಿಂಹಗಳಂತೆ ಓಡುತ್ತೇವೆ. ಈ ಲಕ್ಷಣಗಳು ಪ್ರಸ್ತುತ ಪೀಳಿಗೆಯ ಪಾಕಿಸ್ತಾನದ ವೇಗಿಗಳಾದ ಶಾಹೀನ್ ಅಫ್ರಿದಿ ಮತ್ತು ಹಸನ್ ಅಲಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ ಎಂದು ಶೋಯೆಬ್ ಅಖ್ತರ್ ಹೇಳಿದರು.

ಸದ್ಯ ಭಾರತದ ವೇಗಿಗಳ ವಿಭಾಗ ಬಲಿಷ್ಠವಾಗಿದೆ. ಸ್ಪಿನ್ನರ್ ಗಳಿಂದಲೇ ಗೆಲ್ಲಲು ಸಾಧ್ಯ ಎಂಬ ಮಾತು ಸುಳ್ಳಾಗಿದೆ. ವಿಶ್ವದ ಅತ್ಯುತ್ತಮ ವೇಗದ ಬೌಲಿಂಗ್‌ನೊಂದಿಗೆ ಎದುರಾಳಿಗಳಿಗೆ ಚುಕ್ಕೆಗಳನ್ನು ತೋರಿಸುತ್ತದೆ. ಯುವ ಆಟಗಾರರೊಂದಿಗೆ ಬೆಂಚ್ ಸ್ಟ್ರೆಂತ್ ತುಂಬಾ ಬಲಿಷ್ಠವಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ ಮತ್ತು ಟಿ. ನಟರಾಜನ್ ಅವರಂತಹ ವೇಗಿಗಳೊಂದಿಗೆ ಭಾರತದ ವೇಗದ ವಿಭಾಗ ಬಲಿಷ್ಠವಾಗಿದೆ. ಭಾರತದ ವೇಗಿಗಳು ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್‌ನ ವೇಗಿಗಳಿಗಿಂತ ಹೆಚ್ಚು ಬಲಿಷ್ಠರಾಗಿದ್ದಾರೆ ಎಂದು ಅಖ್ತರ್ ಅಭಿಪ್ರಾಯ ಪಟ್ಟಿದ್ದಾರೆ.

Story first published: Monday, January 31, 2022, 20:41 [IST]
Other articles published on Jan 31, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+