Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತಕ್ಕೆ ಬೌಲಿಂಗ್ ಕೋಚ್ ಆಗಲು ರೆಡಿ: ಪಾಕ್ ವೇಗಿ ಶೋಯೆಬ್ ಅಖ್ತರ್

Shoaib Akhtar ready to take Indian bowling coaching job

ಕರಾಚಿ, ಮೇ 5: ಅವಕಾಶ ನೀಡಿದರೆ ನಾನು ಟೀಮ್ ಇಂಡಿಯಾಕ್ಕೆ ಬೌಲಿಂಗ್ ಕೋಚ್ ಆಗಲು ತಯಾರಿರುವುದಾಗಿ ಪಾಕಿಸ್ತಾನದ ಮಾಜಿ ಮಾರಕ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ. ನನ್ನ ಕೆಲಸ ಜ್ಞಾನವನ್ನು ಪಸರಿಸುವುದಾಗಿರುವುದರಿಂದ ಕೋಚಿಂಗ್ ಜಾಬ್‌ಗೆ ಆಫರ್ ಮಾಡಿದರೆ ನಾನದಕ್ಕೆ ಸಿದ್ಧವಿರುವುದಾಗಿ ಅಖ್ತರ್ ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ 'ಹಲೋ' ಜೊತೆ ಮಾತನಾಡಿದ ಶೋಯೆಬ್ ಅಖ್ತರ್ ತನ್ನ ಬಯಕೆ ತೋರಿಕೊಂಡರು. ಭವಿಷ್ಯದಲ್ಲಿ ಭಾರತದ ಬೌಲಿಂಗ್ ಕೋಚ್ ಆಗುವ ಅವಕಾಶ ದೊರೆತರೆ ಆಗುತ್ತೀರಾ ಎಂಬ ಪ್ರಶ್ನೆಗೆ ಶೋಯೆಬ್ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ.

'ಖಂಡಿತವಾಗಿಯೂ. ನನ್ನ ಕೆಲಸವೇ ಜ್ಞಾನವನ್ನು ಪಸರಿಸೋದು. ನಾನೇನು ಕಲಿತಿದ್ದೇನೋ ಅದನ್ನು ಇತರರಿಗೆ ಹಂಚಲು ಬಯಸುತ್ತೇನೆ,' ಎಂದು ಪ್ರತಿಕ್ರಿಯಿಸಿದ್ದಾರೆ. ವಿಶ್ವದ ವೇಗಿಗಳಲ್ಲಿ ಗುರುತಿಸಿಕೊಂಡಿದ್ದ ಅಖ್ತರ್, 46 ಟೆಸ್ಟ್ ಪಂದ್ಯಗಳಲ್ಲಿ 178, 163 ಏಕದಿನ ಪಂದ್ಯಗಳಲ್ಲಿ 247, 15 ಟಿ20ಐ ಪಂದ್ಯಗಳಲ್ಲಿ 19 ವಿಕೆಟ್ ದಾಖಲೆ ಹೊಂದಿದ್ದಾರೆ.

'ನಾನು ಹೆಚ್ಚು ಆಕ್ರಮಣಕಾರಿ, ವೇಗಿ ಮತ್ತು ಜಗತ್ತು ಹೆಚ್ಚು ಮಾತನಾಡುವ ಬೌಲರ್‌ಗಳನ್ನು ತಯಾರಿಸಬಲ್ಲೆ. ಈಗಿನ ಬ್ಯಾಟ್ಸ್‌ಮನ್‌ಗಳಿಗೆ ದಿಟ್ಟ ಬೌಲಿಂಗ್ ಮಾಡಬಲ್ಲ ಬೌಲರ್‌ಗಳನ್ನು ನಾನು ಸೃಷ್ಟಿಸಬಲ್ಲೆ. ನೀವು ಆ ಬೌಲರ್‌ಗಳ ಪ್ರದರ್ಶನವನ್ನು ಆನಂದಿಸುತ್ತೀರಿ ಕೂಡ,' ಎಂದು ಅಖ್ತರ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಲ್ಲೊಂದಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)ಗೆ ಬೌಲಿಂಗ್ ಕೋಚ್ ಆಗಲೂ ತನಗೆ ಆಸೆಯಿರುವುದಾಗಿ ಶೋಯೆಬ್ ಹೇಳಿಕೊಂಡಿದ್ದಾರೆ. ಅದ್ದೂರಿ ಟಿ20 ಲೀಗ್ ಆರಂಭಗೊಂಡಾಗ ಅಖ್ತರ್, ಕೆಕೆಆರ್ ಪರ ಆಡಿದ್ದರು.

Story first published: Tuesday, May 5, 2020, 9:26 [IST]
Other articles published on May 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+