ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ 'ಸುಲಭ' ಸೂತ್ರ ಬಿಚ್ಚಿಟ್ಟ ಶೋಯೆಬ್ ಅಖ್ತರ್

ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಕೇಂದ್ರ ಬಿಂದು ಅಂದರೆ ಅದು ವಿರಾಟ್ ಕೊಹ್ಲಿ. ಎಲ್ಲಾ ತಂಡಗಳು ಕೂಡ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಬಗ್ಗೆ ಹೆಚ್ಚಿನ ಗಮನ ಹರಿಸುತ್ತವೆ. ಫಾರ್ಮೆಟ್ ಯಾವುದೇ ಇರಲಿ ಕೊಹ್ಲಿ ಅಬ್ಬರಿಸುವುದರಲ್ಲಿ ವ್ಯತ್ಯಾಸವಾಗುವುದಿಲ್ಲ.
ಹೀಗಾಗಿ ಬೌಲರ್‌ಗಳ ಪಾಲಿಗೆ ಕೊಹ್ಲಿ ನಿಜಕ್ಕೂ ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಇಂತಾ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ವೇಗಿ ಶೋಯೇಬ್ ಅಖ್ತರ್ ಬೌಲರ್‌ಗಳಿಗೆ ಒಂದು ಸಲಹೆಯನ್ನು ನೀಡಿದ್ದಾರೆ. ಈ ಮೂಲಕ ಕೊಹ್ಲಿ ವಿಕೆಟನ್ನು ಸುಲಭವಾಗಿ ಪಡೆಯಬಹುದು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಕೊಹ್ಲಿ ವಿಕೆಟ್ ಪಡೆಯಲು ಅಖ್ತರ್ ಹೇಳಿದ ಫಾರ್ಮುಲಾ ಯಾವುದು ಮುಂದೆ ಓದಿ..

ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಅಖ್ತರ್
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹೇಗೆ ಔಟ್ ಮಾಡಬಹುದು ಎಂದು ಅಖ್ತರ್ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಬಂದಿದ್ದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಸುಲಭವಾಗಿ ಔಟ್ ಮಾಡಬಹುದು ಎಂದು ಅಖ್ತರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ನನ್ನಲ್ಲಿ ವಿರಾಟ್ ಔಟ್ ಮಾಡುವ ಸೂತ್ರವಿದೆ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ನನ್ನೊಂದು ಸೂತ್ರವಿದೆ, ಈ ಸೂತ್ರದ ಮೂಲಕ ವಿರಾಟ್ ಕೊಹ್ಲಿಯನ್ನು ಸುಲಭವಾಗಿ ಔಟ್ ಮಾಡಬಹುದು ಎಂದು ನಾನು ನಂಬುತ್ತೇನೆ ಎಂದು ಅಖ್ತರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಔಟ್ ಮಾಡುವ ತಂತ್ರ ಹೇಳಿದ ಅಖ್ತರ್
ನಾನು ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡೋದಾದರೆ ಆತನಿಗೆ ಕ್ರೀಸ್‌ನಿಂದ ಅಗಲಕ್ಕೆ ಪಿಚ್ ಬೀಳುವಂತೆ ಮಾಡುತ್ತೇನೆ, ಆ ಮೂಲಕ ಡ್ರೈವ್ ಮಾಡುವ ಪ್ರಯತ್ನ ಮಾಡಿ ವಿಕೆಟ್ ಪಡೆಯುತ್ತೇನೆ ಎಂದು ಶೋಯೆಬ್ ಅಖ್ತರ್ ಹೇಳಿಕೊಂಡಿದ್ದಾರೆ. ಕೊಹ್ಲಿಯನ್ನು ಔಟ್ ಮಾಡಲು ಇದೇ ಸೂತ್ರ ಎಂದು ಅಖ್ತರ್ ಹೇಳಿದ್ದಾರೆ.

ಆ ಸೂತ್ರ ಕೆಲಸ ಮಾಡದಿದ್ದರೆ..
ಇನ್ನೂ ಮುಂದುವರಿದು ಮಾತನಾಡಿದ ಶೋಯೆಬ್ ಅಖ್ತರ್ ಒಂದು ವೇಳೆ ನನ್ನ ಸೂತ್ರ ಕೆಲಸ ಮಾಡದಿದ್ದರೆ ನಾನು ಕೊಹ್ಲಿಗೆ 150 ಕಿ.ಮಿ ವೇಗದಲ್ಲಿ ಬೌಲಿಂಗ್ ಮಾಡುತ್ತೇನೆ ಆಗ ಕೊಹ್ಲಿ ಔಟ್ ಆಗೇ ಆಗುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಅಖ್ತರ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಾಧನೆ
ಅಖ್ತರ್ ತಮ್ಮ ವೃತ್ತಿಜೀವನದಲ್ಲಿ 46 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ ಅವರು 25.69 ಸರಾಸರಿಯಲ್ಲಿ 178 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನ ಪರ 163 ಏಕದಿನ ಪಂದ್ಯಗಳನ್ನು ಆಡಿರುವ ಅಖ್ತರ್ ಇದರಲ್ಲಿ 24.97 ಸರಾಸರಿಯಲ್ಲಿ 247 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications