India Vs Pakistan: ಸೋತ ನಂತರ ಕ್ಯಾತೆ ತೆಗೆದ ಪಾಕಿಸ್ತಾನ, ಅಂಪೈರ್ ಮೇಲೆ ಅಕ್ತರ್ ಆಕ್ರೋಶ
ಮೆಲ್ಬೋರ್ನ್ ಅಂಗಳದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಅಮೋಘ ಜಯ ದಾಖಲಸಿದೆ. ವಿರಾಟ್ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಭಾರತಕ್ಕೆ ಜಯ ತಂದುಕೊಟ್ಟಿದ್ದಾರೆ. 53 ಎಸೆತಗಳಲ್ಲಿ ಅಜೇಯ 83 ರನ್ ಗಳಿಸಿದ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಪಂದ್ಯದ ಗೆಲುವನ್ನು ದೀಪಾವಳಿಯ ಮೂಲಕ ಭಾರತ ಆಚರಿಸುತ್ತಿದ್ದರೆ, ಅತ್ತಕಡೆ ಪಾಕಿಸ್ತಾನ ಮಾತ್ರ ಉರಿದುಬೀಳುತ್ತಿದೆ. ಕೊನೆಯ ಓವರ್ ನಲ್ಲಿ ಮೊಹಮ್ಮದ್ ನವಾಜ್ ಎಸೆತವನ್ನು ಕೊಹ್ಲಿ ಬೌಂಡರಿ ಗೆರೆ ದಾಟಿಸುವ ಮೂಲಕ ಸಿಕ್ಸರ್ ಹೊಡೆದರು. ಬಾಲ್ ಹೈಟ್ ವಿಚಾರವಾಗಿ ಅಂಪೈರ್ ಅದನ್ನು ನೋಬಾಲ್ ಎಂದು ತೀರ್ಪು ನೀಡಿದರು, ಇದು ಪಾಕಿಸ್ತಾನದ ಆಟಗಾರರನ್ನು ಕೆರಳಿಸಿತು. ಮೈದಾನದಲ್ಲೇ ಆಟಗಾರರು ಅಂಪೈರ್ ಜೊತೆ ವಾದಕ್ಕೆ ಮುಂದಾದರು, ಆದರೂ ಅಂಪೈರ್ ಆಟಗಾರರಿಗೆ ಮನವರಿಕೆ ಮಾಡಿಕೊಟ್ಟರು.
ರೋಚಕವಾಗಿ ಮುಕ್ತಾಯವಾದ ಪಂದ್ಯದಲ್ಲಿ ಭಾರತ ಗೆದ್ದು ಸಂಭ್ರಮಿಸಿತು. ಆದರೆ, ಸೋತ ಪಾಕಿಸ್ತಾನದ ಅಭಿಮಾನಿಗಳು ಮತ್ತು ಕೆಲವು ಮಾಜಿ ಆಟಗಾರರು ಈಗ ಕ್ಯಾತೆ ತೆಗೆದಿದ್ದಾರೆ. ಅದು ನೋಬಾಲ್ ಆಗಿರಲಿಲ್ಲ, ಅಂಪೈರ್ ಮಾಡಿದ ತಪ್ಪಿನಿಂದ ಪಾಕಿಸ್ತಾನ ಸೋಲನ್ನಪ್ಪಿದೆ ಎಂದು ವಾದಿಸುತ್ತಿದ್ದಾರೆ.

ಶೋಯೆಬ್ ಅಕ್ತರ್ ಅಸಮಾಧಾನ
ನವಾಜ್ ಬೌಲಿಂಗ್‌ನಲ್ಲಿ ಚೆಂಡನ್ನು ಹೊಡೆದ ನಂತರ ವಿರಾಟ್ ಕೊಹ್ಲಿ ಅದನ್ನು ನೋ ಬಾಲ್ ನೀಡುವಂತೆ ಮನವಿ ಮಾಡಿದರು. ಅದನ್ನು ನೋಬಾಲ್‌ಗಾಗಿ ಪರಿಶೀಲನೆ ನಡೆಸುವಂತೆ ಕೇಳಿಕೊಂಡರು. ಅಂಪೈರ್‌ಗಳು ಅಂತಿಮವಾಗಿ ಎಸೆತವನ್ನು ಬ್ಯಾಟರ್‌ನ ಸೊಂಟದ ಮೇಲಿದೆ ಎಂದು ನಿರ್ಣಯಿಸಿದರು ಮತ್ತು ಅದನ್ನು ನೋ ಬಾಲ್ ಎಂದು ಕರೆದರು. ಇದು ಭಾರತಕ್ಕೆ ಸಹಾಯ ಮಾಡಿತು ಏಕೆಂದರೆ ಭಾರತಕ್ಕೆ ಫ್ರೀಹಿಟ್ ಸಿಕ್ಕಿತು.
ಅಂಪೈರ್ ನಿರ್ಧಾರದ ಬಗ್ಗೆ ಶೋಯೆಬ್ ಅಕ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. "ಅಂಪೈರ್ ಭಾಯಿಯೋ, ಇಂದು ರಾತ್ರಿಕ್ಕೆ ಊಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ" ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡುವ ಮೂಲಕ ಅಂಪೈರ್ ಗಳು ಭಾರತದ ಪರವಾಗಿ ತೀರ್ಪು ನೀಡಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
India Vs Pakistan: ವಿರಾಟ್ ಕೊಹ್ಲಿ ಅದ್ಭುತ ಆಟಕ್ಕೆ ಫಿದಾ ಆದ ಪತ್ನಿ ಅನುಷ್ಕಾ ಶರ್ಮಾ ಹೇಳಿದ್ದೇನು ಗೊತ್ತಾ?

ರೋಚಕವಾಗಿ ಗೆಲುವು ಸಾಧಿಸಿದ ಟೀಂ ಇಂಡಿಯಾ
ಕೊನೆಯ ಮೂರು ಓವರ್‌ಗಳಲ್ಲಿ ಭಾರತಕ್ಕೆ ಗೆಲ್ಲಲು 48 ರನ್‌ಗಳ ಅಗತ್ಯವಿತ್ತು. ವಿರಾಟ್ ಕೊಹ್ಲಿ ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ ಮೂರು ಬೌಂಡರಿ ಹೊಡೆಯುವ ಮೂಲಕ ಸಮೀಕರಣವನ್ನು 12 ಎಸೆತಗಳಲ್ಲಿ 31 ರನ್‌ಗಳಿಗೆ ಇಳಿಸಿದರು. ನಂತರ ಅವರು ಹ್ಯಾರಿಸ್ ರೌಫ್ ಅವರ 19 ನೇ ಓವರ್‌ನ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್‌ಗಳಿಗೆ ಹೊಡೆದರು, ಕೊನೆಯ ಓವರ್‌ನಲ್ಲಿ ಭಾರತಕ್ಕೆ 16 ರನ್ ಅಗತ್ಯವಿತ್ತು.
ಕೊಹ್ಲಿ ಮೊದಲ ಎರಡು ಎಸೆತಗಳಲ್ಲಿ ಸ್ಟ್ರೈಕ್‌ನಲ್ಲಿ ಇರಲಿಲ್ಲ ಮತ್ತು ಮೂರನೇ ಎಸೆತದಲ್ಲಿ ಕೇವಲ ಎರಡು ರನ್ ಗಳಿಸುವಲ್ಲಿ ಯಶಸ್ವಿಯಾದರು. ಕೊನೆಯ 3 ಎಸೆತಗಳಲ್ಲಿ 13 ರನ್ ಅಗತ್ಯವಿದ್ದಾಗ, ಎಡಗೈ ಸ್ಪಿನ್ನರ್ ಮೊಹಮ್ಮದ್ ನವಾಜ್ ಹೆಚ್ಚಿನ ಫುಲ್ ಟಾಸ್ ಬೌಲ್ ಮಾಡಿದರು, ಅದನ್ನು ಕೊಹ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರು.
ವಿರಾಟ್ ಕೊಹ್ಲಿ ಭಾನುವಾರದಂದು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು.

ಪಾಕ್ ಅಭಿಮಾನಿಗಳ ಕಿರಿಕ್
ಇನ್ನು ಪಂದ್ಯ ಸೋಲುತ್ತಿದ್ದಂತೆ ಪಾಕಿಸ್ತಾನದ ಅಭಿಮಾನಿಗಳು ಅಂಪೈರ್ ಗಳ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮೋಸದ ಗೆಲುವು ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಅದು, ನೋ ಬಾಲ್ ಆಗಿರಲಿಲ್ಲ, ಒಂದು ವೇಳೆ ನೋ ಬಾಲ್ ಎಂದು ಅಂಪೈರ್ ತೀರ್ಪು ಕೊಡದೇ ಇದ್ದರೆ ಪಾಕಿಸ್ತಾನವೇ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.
ಆದರೆ, ಭಾರತದ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಶಾನ್ ಹೊಡೆದ ಚೆಂಡು ನೇರವಾಗಿ ಸ್ಪೈಡರ್ ಕ್ಯಾಮೆರಾಗೆ ತಗುಲಿತು ಇದರಿಂದ ಭಾರತಕ್ಕೆ ಕ್ಯಾಚ್ ಕೈ ತಪ್ಪಿತು. ಈ ಬಗ್ಗೆ ಪಾಕಿಸ್ತಾನದ ಅಭಿಮಾನಿಗಳು ಮಾತ್ರ ಯಾವ ಮಾತನ್ನೂ ಆಡುತ್ತಿಲ್ಲ. ಅಂಪೈರ್ ಗಳು ತೀರ್ಮಾನ ನೀಡಿದ ಮೇಲೆ ಅದು ಅಂತಿಮ ಎಂದು ಭಾರತದ ಅಭಿಮಾನಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications