Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್‌ಗೆ ಏನಾದರೂ ಆಗಿದ್ದರೆ, ಭಾರತೀಯರು ನನ್ನನ್ನು ಜೀವಂತವಾಗಿ ಸುಡುತ್ತಿದ್ದರು: ಶೋಯೆಬ್‌ ಅಖ್ತರ್‌!

ಜೂನ್‌ 13 ಗುರುವಾರ, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ಪಂದ್ಯ ಎಂದರೆ ಸಾಕು ಉಭಯ ದೇಶಗಳು ಮಾತ್ರವಲ್ಲದೆ ವಿಶ್ವವೇ ಕುತೂಹಲದಿಂದ ಕಾಯುತ್ತಿದೆ. ಜೊತೆಗೆ ಎರಡು ತಂಡದ ಆಟಗಾರರು ಕೂಡ ತಮ್ಮ ದೇಶದ ಪರ ಮಿಂಚುವ ಆಸೆ ಹೊತ್ತು ಮೈದಾನಕ್ಕೆ ಬಂದಿರುತ್ತಾರೆ.

ಅಂದಿನಿಂದಲೂ ಪಾಕಿಸ್ತಾನ ವಿರುದ್ಧ ಟೀಮ್‌ ಇಂಡಿಯಾ ಅತಿಹೆಚ್ಚು ಪಂದ್ಯಗಳನ್ನು ಗೆದ್ದು ತನ್ನ ಪ್ರಾಬಲ್ಯವನ್ನು ಸಾಧಿಸಿದೆ. ಅಲ್ಲದೆ ಪಂದ್ಯ ನಡೆಯುವಾಗ ಕೂಡ ಉಭಯ ತಂಡಗಳ ಆಟಗಾರರ ಮಧ್ಯೆ ಸಣ್ಣ ಪುಟ್ಟ ಗಲಾಟೆಗಳು ಸಹಾ ನಡೆದಿರುವ ಸಾಕಷ್ಟು ಉದಾಹರಣೆಗಳಿಗೆವೆ.

Shoaib Akhtar talks about an incident with Sachin Tendulkar 17 years ago

ಇದರ ಜೊತೆಗೆ ಭಾರತ ಮತ್ತು ಪಾಕಿಸ್ತಾನ ಆಟಗಾರರು ಕ್ರಿಕೆಟ್‌ ಹೊರೆತುಪಡಿಸಿ ಮೈದಾನದಿಂದಾಚೆಗೂ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ದೃಶ್ಯಗಳು ವೈರಲ್‌ ಆಗಿವೆ.

ಟೀಮ್‌ ಇಂಡಿಯಾ ಮಾಸ್ಟರ್ ಬ್ಲಾಸ್ಟರ್ ಖ್ಯಾತಿ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಅಪಾಯಕಾರಿ ವೇಗದ ಬೌಲರ್ ಶೋಯೆಬ್ ಅಖ್ತರ್ ನಡುವೆ ಹಲವು ಬಾರಿ ಕಠಿಣ ಪೈಪೋಟಿ ಏರ್ಪಟಿದೆ. ಇದೀಗ ಸರಿಸುಮಾರು 17 ವರ್ಷಗಳ ಹಿಂದಿನ ಘಟನೆಯೊಂದನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೋಯೆಬ್‌ ಅಖ್ತರ್‌ ನೆನಪಿಸಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರಿಗೆ 2007 ರಲ್ಲಿ ಏನಾದರೂ ಆಗಿದ್ದರೆ ಭಾರತೀಯರು ನನ್ನನ್ನು ಜೀವಂತವಾಗಿ ಸುಡುತ್ತಿದ್ದರು ಎಂದು ಶೋಯೆಬ್ ಅಖ್ತರ್ ಒಮ್ಮೆ ಸ್ಪೋರ್ಟ್ಸ್‌ಕೀಡಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಪ್ರಶಸ್ತಿ ಸಮಾರಂಭವೊಂದರಲ್ಲಿ ಭಾರತ ಮತ್ತು ಪಾಕಿಸ್ತಾನದ ಆಟಗಾರರು ಒಟ್ಟಿಗೆ ಕುಳಿತಿದ್ದರು. ಆಗ ಆಖ್ತರ್‌ ತಮಾಷೆಗಾಗಿ ಸಚಿನ್ ಅವರನ್ನು ಎತ್ತಲು ಪ್ರಯತ್ನಿಸಿದ್ದರು. ಈ ವೇಳೆ ಸಚಿನ್‌ ಅಖ್ತರ್‌ ಅವರ ಕೈಯಿಂದ ಜಾರಿ ಕೆಳಗೆ ಬಿದ್ದಿದ್ದರು ಈ ಘಟನೆ ಬಗ್ಗೆ ಸ್ವತಃ ಅಖ್ತರ್ ತಿಳಿಸಿದ್ದರು.

"ನಾನು ತಮಾಷೆಗೆ ಸಚಿನ್ ತೆಂಡೂಲ್ಕರ್ ಅವರನ್ನು ಮೇಲೆತ್ತಲು ಪ್ರಯತ್ನಿಸಿದೆ, ಆದರೆ ಅವರು ನನ್ನ ಕೈಯಿಂದ ಜಾರಿ ಕಳೆಗೆ ಬಿದ್ದರು. ಆದರೆ ತುಂಬಾ ಕೆಟ್ಟ ರೀತಿಯಲ್ಲಿ ಅಲ್ಲ" ಎಂದು ಸಂದರ್ಶನದಲ್ಲಿ ಅಖ್ತರ್ ಹೇಳಿದ್ದರು.

ಸಚಿನ್ ತೆಂಡೂಲ್ಕರ್ ಒಂದು ವೇಳೆ ಗಾಯಗೊಂಡಿದ್ದರೆ ನನಗೆ ಮತ್ತೆ ಭಾರತಕ್ಕೆ ವೀಸಾ ಸಿಗುತ್ತಿರಲಿಲ್ಲ ಎಂದು ನಾನು ಭಾವಿಸಿದೆ. ಭಾರತೀಯರು ಎಂದಿಗೂ ನನ್ನನ್ನು ತಮ್ಮ ದೇಶಕ್ಕೆ ಆಹ್ವಾನಿಸುತ್ತಿರಲಿಲ್ಲ. ಜೊತೆಗೆ ಜೀವಂತವಾಗಿ ಸುಟ್ಟು ಹಾಕುತ್ತಿದ್ದರು.

ಪಾಕಿಸ್ತಾನದ ನಂತರ ನನಗೆ ಹೆಚ್ಚು ಪ್ರೀತಿ ಸಿಗುವ ದೇಶ ಭಾರತ. ನಾನು ಭಾರತಕ್ಕೆ ಭೇಟಿ ನೀಡಿದಾಗಲೆಲ್ಲಾ ನನ್ನೊಂದಿಗೆ ಒಳ್ಳೆಯ ನೆನಪುಗಳನ್ನು ತಂದಿದ್ದೇನೆ ಎಂದು ಶೋಯೆಬ್ ಅಖ್ತರ್ ಅಂದಿನ ಘಟನೆ ಬಗ್ಗೆ ಮಾಹಿತಿ ತಿಳಿಸಿದ್ದರು.

ಸಚಿನ್ ಅವರ ಕ್ರಿಕೆಟ್‌ ವೃತ್ತಿಜೀವನದ ಅವಧಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಏಕದಿನದಲ್ಲಿ 18,426 ರನ್ ಮತ್ತು ಟೆಸ್ಟ್‌ನಲ್ಲಿ 15,921 ರನ್ ಗಳಿಸಿದ್ದಾರೆ. ಸಚಿನ್ ಎಲ್ಲಾ ಮಾದರಿ ಕ್ರಿಕೆಟ್‌ಅನ್ನು ಒಳಗೊಂಡಂತೆ 100 ಅಂತರಾಷ್ಟ್ರೀಯ ಶತಕಗಳನ್ನು ಹೊಡೆದಿದ್ದಾರೆ.

ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 24 ಫೆಬ್ರವರಿ 2010 ರಂದು, ಸಚಿನ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ದ್ವಿಶತಕವನ್ನು ಗಳಿಸಿದ್ದರು.

Story first published: Thursday, June 13, 2024, 15:00 [IST]
Other articles published on Jun 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+