Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಲಕ್ಷಣ ಹೊಡೆತಕ್ಕೆ ಬಲಿಯಾದ ಶೋಯೆಬ್ ಮಲಿಕ್: ವೈರಲ್ ವಿಡಿಯೋ

Shoaib Malik makes a mess of stumps in bizarre hit-wicket dismissal - Watch

ನಾಟಿಂಗ್ಹ್ಯಾಮ್, ಮೇ 18: ಎದುರಾಳಿ ಔಟ್ ಮಾಡುವುದಕ್ಕೆ ಬದಲಾಗಿ ತಾನೇ ಔಟಾದ ಅಪರೂಪದ ಕ್ಷಣಕ್ಕೆ ಪಾಕಿಸ್ತಾನ ಬ್ಯಾಟ್ಸ್ಮನ್ ಶೋಯೆಬ್ ಮಲಿಕ್ ಕಾರಣರಾದರು. ನಾಟಿಂಗ್ಹ್ಯಾಮ್ ನಲ್ಲಿ ಶುಕ್ರವಾರ (ಮೇ 17) ನಡೆದ ಇಂಗ್ಲೆಂಡ್ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಮಲಿಕ್ ಹಿಟ್ ವಿಕೆಟ್‌ ಮೂಲಕ ಔಟಾದರು.

ಪಾಕ್‌ ಇನ್ನಿಂಗ್ಸ್‌ನ 47ನೇ ಓವರ್‌ನಲ್ಲಿ ಶೋಯೆಬ್ ಮಲಿಕ್ ಹೀಗೆ ಔಟ್ ಆಗಿ ನಿರ್ಗಮಿಸಿದ್ದು ಕಂಡುಬಂತು. ಇಂಗ್ಲೆಂಡ್ ಬೌಲರ್ ಮಾರ್ಕ್‌ವುಡ್ 46.4ನೇ ಓವರ್ ಎಸೆದಾಗ ಮಲಿಕ್ ಬ್ಯಾಟ್ ಬೀಸಿದರು. ಚೆಂಡಿಗೆ ಹೊಡೆಯುವ ತರಾತುರಿಯಲ್ಲಿ ಮಲಿಕ್ ವಿಕೆಟ್‌ಗೆ ಬ್ಯಾಟ್ ಬೀಸಿದರು. ವಿಕೆಟ್ ಎಗರಿತು; 41 ರನ್ ಬಾರಿಸಿದ್ದ ಮಲಿಕ್ ಪೆವಿಲಿಯನ್ ಕಡೆಗೆ ನಡೆದರು.

ಕ್ರಿಕೆಟ್‌ನಲ್ಲಿ ಹಿಟ್ ವಿಕೆಟ್ ಆಗೀಗ ನಡೆಯುತ್ತಿರುತ್ತದೆಯಾದರೂ ಇಂಥದ್ದು ನಡೆದಾಗೆಲ್ಲ ಸಾಮಾನ್ಯವಾಗಿ ಬ್ಯಾಟ್ಸ್ಮನ್‌ಗಳು ಸುದ್ದಿಯಾಗುತ್ತಾರೆ. ಕಾರಣ, ವಿಲಕ್ಷಣ ಹೊಡೆತಕ್ಕೆ ಪ್ರಯತ್ನಿಸಿ ತಾನಾಗಿಯೇ ವಿಕೆಟ್ ಉರುಳಿಸುವ ಅಪರೂಪದ ಕ್ಷಣವಿದು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ಬಾಬರ್ ಅಝಾಮ್ ಆಕರ್ಷಕ ಶತಕ (115 ರನ್) ದೊಂದಿಗೆ 340 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್, ಜೇಸನ್ ರಾಯ್ 114 ರನ್ ಕೊಡುಗೆಯೊಂದಿಗೆ 341 ರನ್ ಪೇರಿಸಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್, ಐದು ಪಂದ್ಯಗಳ ಏಕದಿನ ಸರಣಿಯನ್ನು 3-0ಯಿಂದ ಗೆದ್ದುಕೊಂಡಿದೆ.

Story first published: Saturday, May 18, 2019, 15:34 [IST]
Other articles published on May 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+