For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಪಾಕಿಸ್ತಾನಕ್ಕಿಂತಲೂ ಅದ್ಭುತ ಕ್ರಿಕೆಟ್ ಆಡಿದೆ: ಶೋಯೆಬ್ ಮಲಿಕೆ ಹೇಳಿಕೆ

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಪಾಕಿಸ್ತಾನಕ್ಕಿಂತಲೂ ಅದ್ಭುತವಾದ ಕ್ರಿಕೆಟ್ ಆಡಿದೆ ಎಂದು ಸ್ವತಃ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್ ಅಭಿಪ್ರಾಯಪಟ್ಟಿದ್ದಾರೆ. ಅಫ್ಘಾನಿಸ್ತಾನ ತಂಡ ತನ್ನ ಕೊನೆಯ ಲೀಗ್ ಪಂದ್ಯವನ್ನು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಆಡಿತ್ತು. ಈ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಅಫ್ಘನ್ ಪಡೆ ಈ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಹೋರಾಟವನ್ನು ಅಧಿಕೃತವಾಗಿ ಅಂತ್ಯಗೊಳಿಸಿದ ಬಳಿಕ ಶೋಯೆಬ್ ಮಲಿಕ್ ಈ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಕ್ರೀಡಾ ವಾಹಿನಿ ಎ ಚಾನೆಲ್‌ನ ಸಂವಾದಲ್ಲಿ ಭಾಗಿಯಾಗಿದ್ದ ಶೋಯೆಬ್ ಮಲಿಕ್ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ನೀಡಿದ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಅಲ್ಲದೆ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕಿಂತಲೂ ಅದ್ಭುತವಾದ ಪ್ರದರ್ಶನವನ್ನು ಅಫ್ಘಾನಿಸ್ತಾನ ತಂಡ ನೀಡಿದೆ ಎಂದಿದ್ದಾರೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ತಲಾ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ತಂಡ ಕೊನೆಯ ಲೀಗ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಬೇಕಿದೆ.

Shoaib Malik praises Afghanistan and said played better cricket than Pakistan in World Cup 2023

"ಅಫ್ಘಾನಿಸ್ತಾನ ತಂಡ ನಮಗಿಂತಲೂ ಉತ್ತಮವಾದ ಕ್ರಿಕೆಟ್ ಆಡಿದೆ. ನನ್ನ ಅಫ್ರಪ್ರಾಯದ ಪ್ರಕಾರ ಈ ಬಾರಿಯ ವಿಶ್ವಕಪ್ ಟೂರ್ನಿಯ ಪ್ರದರ್ಶನವನ್ನು ಮಾತ್ರವೇ ಆಧಾರದಲ್ಲಿಟ್ಉ ನೋಡುವುದಾದರೆ ಅಫ್ಘಾನಿಸ್ತಾನ ತಂಡ ಖಂಡಿತವಾಗಿಯೂ ನಮಗಿಂತ ಅದ್ಭುತ ಆಟವನ್ನು ಆಡಿದೆ" ಎಂದಿದ್ದಾರೆ ಶೋಯೆಬ್ ಮಲಿಕ್.

ಇನ್ನು ಶೋಯೆಬ್ ಮಲಿಕ್ ಅವರ ಈ ಹೇಳಿಕೆಗೆ ಪಾಕಿಸ್ತಾನದ ದಿಗ್ಗಜ ವೇಗದ ಬೌಲರ್ ವಾಸಿಂ ಅಕ್ರಮ್ ಕೂಡ ಸಮ್ಮತಿ ಸೂಚಿಸಿದ್ದಾರೆ. "ಅಫ್ಘಾನಿಸ್ತಾನ ತಂಡ ಬಹಳ ಬಲಿಷ್ಠವಾಗಿ ಕಾಣಿಸುತ್ತಿದೆ. ಬಹಶಃ ಸತತ ಕ್ರಿಕೆಟ್‌ನಿಂದಾಗಿ ನಮ್ಮ ಹುಡುಗರು ದಣಿದಂತೆ ಭಾಸವಾಗುತ್ತಿದ್ದಾರೆ. ಅಫ್ಘಾನಿಸ್ತಾನ ತಂಡ ಪಾಕಿಸ್ತಾನಕ್ಕಿಂತ ಉತ್ತಮವಾಗಿ ಗೋಚರಿಸುತ್ತಿದೆ. ಅದರಲ್ಲಿ ಅನುಮಾನವೇ ಇಲ್ಲ" ಎಂದಿದ್ದಾರೆ ವಾಸಿಮ್ ಅಕ್ರಮ್.

ಪಾಕಿಸ್ತಾನದ ತಮಡ ಈ ಬಾರಿಯ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಅಫ್ಘಾನಿಸ್ತಾನ ತಂಡ ನೀಡಿದ ಪ್ರದರ್ಶನ ಕ್ರಿಕೆಟ್ ಲೋಕವನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ನಾಯಕ ಹಸ್ಮತುಲ್ಲಾ ಶಾಹಿದಿ ನೇತೃತ್ವದ ತಂಡ ಪ್ರಭಾವಶಾಲಿ ಪ್ರದರ್ಶನ ನೀಡಿದ್ದು ಪ್ರಮುಖ ತಂಡಗಳನ್ನು ಸುಲಭವಾಗಿ ಮಣಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದೆ.

Story first published: Saturday, November 11, 2023, 12:32 [IST]
Other articles published on Nov 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+