Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾವನಾತ್ಮಕ ಸಂದೇಶ ಬರೆದು ಟಿ10 ಲೀಗ್ ನಿಂದ ಹೊರನಡೆದ ಮಲ್ಲಿಕ್!

Shoaib Malik withdraws from T10 league; posts emotional message

ನವದೆಹಲಿ, ನವೆಂಬರ್ 13: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲ್ಲಿಕ್ ಅವರು ಮುಂಬರಲಿರುವ ಟಿ10 ಕ್ರಿಕೆಟ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಹೊರಡುವುದಕ್ಕೂ ಮುನ್ನ ಅಭಿಮಾನಿಗಳಿಗಾಗಿ ಟ್ವಿಟರ್ ನಲ್ಲಿ ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ.

ಕ್ರಿಕೆಟ್ ದಿಗ್ಗಜರನ್ನು ಒಳಗೊಂಡ ಟಿ10 ಟೂರ್ನಿ ಸಾಕಷ್ಟು ಕುತೂಹಲವನ್ನುಂಟು ಮಾಡಿದೆ. ಆದರೆ ಟೂರ್ನಿಯಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ. ಕಾರಣ ತಾನು ತನ್ನ ಪತ್ನಿ ಸಾನಿಯಾ ಮಿರ್ಜಾ ಮತ್ತು ನವಜಾತ ಶಿಶು ಇಝಾನ್ ಮಿರ್ಜಾ-ಮಲ್ಲಿಕ್ ಜೊತೆ ಕಳೆಯಲಿಚ್ಛಿಸಿರುವುದಾಗಿ ಹೇಳಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಟಿ20 ಮತ್ತು ಏಕದಿನ ಸರಣಿಯಲ್ಲಿ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಲ್ಲಿಕ್, ಕಳೆದ ತಿಂಗಳು ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ತಂಡದ ಮುಂಚೂಣಿಯ ಬ್ಯಾಟ್ಸ್ಮನ್ ಆಗಿ ಮಿಂಚಿದ್ದರು.

'ಟಿ10 ಟೂರ್ನಿಯಲ್ಲಿ ನಾನು ಪಂಜಾಬಿ ಲೆಜೆಂಡ್ಸ್ ತಂಡದ ಪರ ಆಡುತ್ತಿಲ್ಲ ಎಂಬುದನ್ನು ನಾನು ದ್ವಂದ್ವ ಭಾವದೊಂದಿಗೇ ತಿಳಿಸುತ್ತಿದ್ದೇನೆ. ನಾನು ಆಡಬೇಕೆಂದು ನನ್ನ ಮಡದಿಯೇ ಬಯಸಿದರೂ ಟೂರ್ಯಲ್ಲಿ ಆಡದಿರುವ ನಿರ್ಧರ ತೆಗೆದುಕೊಂಡಿದ್ದೇನೆ. ಈ ಕ್ಷಣ ನನ್ನ ಪತ್ನಿ ಮತ್ತು ಮಗುವಿನೊಂದಿಗೆ ಕಳೆಯುವುದೇ ನನಗೆ ಮುಖ್ಯ ಅನ್ನಿಸಿದೆ' ಎಂದು ಮಲ್ಲಿಕ್ ಟ್ವಿಟರ್ ನಲ್ಲಿ ಬರೆದಿದ್ದಾರೆ.

Story first published: Tuesday, November 13, 2018, 17:31 [IST]
Other articles published on Nov 13, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+