'ಕೊಹ್ಲಿ ಬದಲು ರೋಹಿತ್ ನಾಯಕನಾಗಬೇಕೆ?' ಪ್ರಶ್ನೆಗೆ ಉತ್ತರಿಸಿದ ಅಖ್ತರ್

ಇಸ್ಲಮಾಬಾದ್, ಆಗಸ್ಟ್ 1: ಟೀಮ್ ಇಂಡಿಯಾದ ನಾಯಕತ್ವದಲ್ಲಿ ಬದಲಾವಣೆಯಾಗಬೇಕು, ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಳ್ಳಬೇಕು ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬಂದಿದ್ದವು. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ಬಳಿಕ ಈ ವಿಚಾರ ಹೆಚ್ಚು ಸುದ್ದಿಯಾಗಿತ್ತು.
ಇದೇ ಪ್ರಶ್ನೆಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರಲ್ಲಿ ಕೇಳಿದಾಗ ಅಖ್ತರ್ ಬದಲಾವಣೆಯ ಅಗತ್ಯವಿಲ್ಲ ಎಂದಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಅವರೇ ಮುಂದುವರೆಯಲಿ ಎಂಬ ನೇರ ಅಭಿಪ್ರಾಯವನ್ನು ಅಖ್ತರ್ ವ್ಯಕ್ತಪಡಿಸಿದ್ದಾರೆ.
ಟ್ವಿಟರ್‌ನಲ್ಲಿ ಅಕೀಲ್ ರಾಜ ಎಂಬವರು, ಕೊಹ್ಲಿ ಬದಲು ಟೀಮ್ ಇಂಡಿಯಾ ನಾಯಕನ ಸ್ಥಾನಕ್ಕೆ ರೋಹಿತ್ ಶರ್ಮಾ ಅವರನ್ನು ತರಬೇಕಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಅಖ್ತರ್ 'ಅಗತ್ಯವಿಲ್ಲ,' ಎಂದು ಎರಡೇ ಪದಗಳಲ್ಲಿ ಉತ್ತರಿಸಿದ್ದಾರೆ.
ಶಾನ್ ಎಂಬವರು, ಕೊಹ್ಲಿ ಅಥವಾ ರೋಹಿತ್ ಇವರಲ್ಲಿ ಯಾರು ಬೇಕು ಎಂದು ಪ್ರಶ್ನಿಸಿದ್ದಕ್ಕೆ ಅಖ್ತರ್, 'ಕೊಹ್ಲಿ,' ಎಂದು ಪ್ರತಿಕ್ರಿಯಿಸಿದ್ದಾರೆ. ರೋಹಿತ್-ಕೊಹ್ಲಿ ಇಬ್ಬರೂ ಶ್ರೇಷ್ಠ ಆಟಗಾರರೆ. ಇಬ್ಬರೂ ಇತರ ದೇಶೀಯ ಆಟಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಬ್ಬರೂ ಸರಳತೆಗೆ ಗುರುತಿಸಿಕೊಂಡ ಆಟಗಾರರು. ಹೀಗಾಗಿ ಅಖ್ತರ್‌ಗೆ ಈಗಿನ ನಾಯಕ ಕೊಹ್ಲಿಯನ್ನು ಬಿಟ್ಟುಕೊಡುವ ಮನಸಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications