ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ವೇಳೆ ಟೀಮ್ ಇಂಡಿಯಾವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಕಸಿದುಕೊಂಡ ಬಿಸಿಸಿಐ, ಶುಭಮನ್ ಗಿಲ್ ಅವರಿಗೆ ಪಟ್ಟ ಕಟ್ಟಿದೆ. 26 ವರ್ಷದ ಶುಭಮನ್ ಗಿಲ್ ಏಕದಿನ ಫಾರ್ಮೆಟ್ ನೂತನ ಮುಂದಾಳು ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಟೀಮ್ ಇಂಡಿಯಾವನ್ನು ಏಕದಿನ ಫಾರ್ಮೆಟ್‌ನಲ್ಲಿ ಮುನ್ನಡೆಸಿದ ನಾಯಕ ಗಿಲ್ ಆಗುತ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದಕ್ಕೆ ಉತ್ತರ ಇಲ್ಲಿದೆ.
ಭಾರತ ತಂಡವನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಅಳೆದು ತೂಗಿ ಪ್ರಕಟಿಸಲಾಗಿದೆ. ಈ ವೇಳೆ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಿದ್ದಾರೆ. ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಆಯ್ಕೆ ಎಂದು ಅಭಿಮಾನಿಗಳು ಸಹ ಸಮಾಧಾನ ಪಟ್ಟಿದ್ದಾರೆ. ಶುಭಮನ್ ಗಿಲ ಈಗಾಗಲೇ ಭಾರತ ತಂಡವನ್ನು ಟೆಸ್ಟ್ ಸರಣಿಯಲ್ಲಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಈಗ ಏಕದಿನ ಫಾರ್ಮೆಟ್‌ಗೂ ಇವರೇ ತಂಡದ ಮುಂದಾಳು ಎಂದು ಬಿಸಿಸಿಐ ಘೋಷಣೆ ಮಾಡಿದೆ. ಹಾಗಿದ್ದರೆ ಭಾರತ ತಂಡವನ್ನು ಚಿಕ್ಕ ವಯಸ್ಸಿನಲ್ಲಿ ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಟೀಮ್ ಇಂಡಿಯಾವನ್ನು ಚಿಕ್ಕ ವಯಸ್ಸಿನಲ್ಲಿ ಮುನ್ನಡೆಸಿದ ಕಿರ್ತಿ ಸ್ಟಾರ್ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಇವರು ಏಕದಿನ ಫಾರ್ಮೆಟ್‌ನಲ್ಲಿ 23 ವರ್ಷ 126 ದಿನ ಇದ್ದಾಗ 1996ರಲ್ಲಿ ತಂಡವನ್ನು ಮುನ್ನಡೆಸಿದ್ದರು. ಇವರು ಭಾರತ ತಂಡವನ್ನು ಏಕದಿನ ಫಾರ್ಮೆ ಟ್‌ನಲ್ಲಿ ಚಿಕ್ಕ ವಯಸ್ಸಿನಲ್ಲಿ ತಂಡವನ್ನು ಮುನ್ನಡೆಸಿದ ಹಿರಿಮೆ ಹೊಂದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಹೆಸರು ಸುರೇಶ್ ರೈನಾ. ಇವರು 2010ರಲ್ಲಿ ತಮ್ಮ 23 ವಯಸ್ಸು 182 ದಿನಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಪಟ್ಟಿಯಲ್ಲಿ ದಿಗ್ಗಜ ನಾಯಕ ಕಪಿಲ್ ದೇವ್ ಅವರಿಗೆ ಮೂರನೇ ಸ್ಥಾನ. ಇವರು 23 ವರ್ಷ 249 ದಿನಗಳಲ್ಲಿ ಅಮೃತ್‌ಸರ್‌ನಲ್ಲಿ ಶ್ರೀಲಂಕಾ ವಿರುದ್ಧ ತಂಡವನ್ನು ಮುನ್ನಡೆಸಿದ್ದರು.
ಟೀಮ್ ಇಂಡಿಯಾ ನಾಯಕತ್ವ ಚಿಕ್ಕ ವಯಸ್ಸಿನಲ್ಲಿ ಪಡೆದ ಸಾಧನೆ ವೀರೇಂದ್ರ ಸೆಹ್ವಾಗ್ ಅವರಿಗೂ ಸಲ್ಲುತ್ತದೆ. ಇವರು ಡಾಕಾದಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ತಮ್ಮ 24 ವಯಸ್ಸು 178 ದಿನಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಟೀಮ್ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಇನ್ನೊಂದು ಹೆಸರು ವಿರಾಟ್ ಕೊಹ್ಲಿ. ಇವರು ಸಹ ತಂಡವನ್ನು ತಮ್ಮ 24ವರ್ಷ 239 ದಿನದಲ್ಲಿ ಶ್ರೀಲಂಕಾ ವಿರುದ್ಧ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎದ್ದು ಕಾಣುವ ಇನ್ನೊಂದು ಹೆಸರು ರವಿ ಶಾಸ್ತ್ರಿ ಇವರು 24 ವರ್ಷ 245 ದಿನಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ಈ ಎಲ್ಲ ಆಟಗಾರರ ವಯಸ್ಸು ನೋಡಿದಾಗ ಶುಭಮನ್ ಗಿಲ್‌ಗೆ 26 ವರ್ಷದ ಮೇಲೆ ಆಗಿದೆ. ಹೀಗಾಗಿ ಇವರು ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇನ್ನು ವಿಶ್ವದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ತಂಡವನ್ನು ಮುನ್ನಡೆಸಿದ ಅಫ್ಘಾನಿಸ್ತಾನದ ರಶೀದ್ ಖಾನ್ ಅವರಿಗೆ ಸಲ್ಲುತ್ತದೆ.