For Quick Alerts
ALLOW NOTIFICATIONS  
For Daily Alerts
 

2023ರ ವಿಶ್ವಕಪ್‌ನ ಭಾರತ ತಂಡದಲ್ಲಿ ಈತನಿರಬೇಕು; ಭಾರತದ ಮಾಜಿ ಆರಂಭಿಕ ಬ್ಯಾಟರ್

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ರನ್ ಗಳಿಸಲು ಪರದಾಡುತ್ತಿದ್ದು, ಟೆಸ್ಟ್ ಹಾಗೂ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಫಾರ್ಮ್‌ ಕೊರತೆ ಎದುರಿಸಿದರು.

ಶುಭ್ಮನ್ ಗಿಲ್ ಟೆಸ್ಟ್ ಸರಣಿಯಲ್ಲಿ ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ 6, 10 ಮತ್ತು ಅಜೇಯ 29 ರನ್ ಮತ್ತು ಮೊದಲ ಏಕದಿನ ಪಂದ್ಯದಲ್ಲಿ ಇನ್ನಿಂಗ್ಸ್ ತೆರೆದು ಕೇವಲ 7 ರನ್ ಗಳಿಸಿದರು.

ಭಾರತೀಯ ಕ್ರಿಕೆಟ್‌ನಲ್ಲಿ ಇದು ಯಾವಾಗಲೂ ಸಂಭವಿಸಿದಂತೆ ಸಣ್ಣ ಕುಸಿತ ಅನುಭವಿಸುತ್ತಿದ್ದಾರೆ. ಇದೇ ವೇಳೆ ಕ್ರಿಕೆಟ್ ವಿಮರ್ಶಕರು ಟೀಕೆ ಮಾಡಲು ಅವಕಾಶ ಒದಗಿಸಿಕೊಟ್ಟಿದ್ದಾರೆ.

shubman-gill-to-play-in-indias-world-cup-2023

ಒಂದು ವೇಳೆ ಎರಡನೇ ಪಂದ್ಯದಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದರೆ ಶುಭ್ಮನ್ ಗಿಲ್ ಅವರ ಸ್ಥಾನಕ್ಕೆ ಕುಂದು ತರಲಿದೆ. ಅಲ್ಲದೆ, ಅವರು ಟಿ20 ತಂಡದ ಭಾಗವಾಗಿದ್ದಾರೆ ಮತ್ತು ಹೀಗಾಗಿ 2ನೇ ಏಕದಿನ ಪಂದ್ಯದಲ್ಲಿ ಪುಟಿದೇಳಲು ಎದುರು ನೋಡುತ್ತಿದ್ದಾರೆ.

ವೆಸ್ಟ್ ಇಂಡೀಸ್‌ನಲ್ಲಿ ಶುಭ್ಮನ್ ಗಿಲ್ ವೈಫಲ್ಯದ ಬಗ್ಗೆ ತುಂಬಾ ಬೇಗ ಮಾತನಾಡುತ್ತಿದ್ದೇವೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಅಭಿನವ್ ಮುಕುಂದ್ ಅಭಿಪ್ರಾಯಪಟ್ಟಿದ್ದಾರೆ ಮತ್ತು ಟೀಕಾಕಾರರು ಸ್ವರೂಪಗಳನ್ನು ಬೆರೆಸದಂತೆ ಒತ್ತಾಯಿಸಿದ್ದಾರೆ.

ಶುಭ್ಮನ್ ಗಿಲ್ ಭಾರತ ಏಕದಿನ ತಂಡದ ಅಗ್ರ ಆಟಗಾರ ಮತ್ತು ಭಾರತದ ಐಸಿಸಿ ಏಕದಿನ ವಿಶ್ವಕಪ್ ತಂಡದಲ್ಲಿಯೂ ಕಾಣಿಸಿಕೊಳ್ಳಬೇಕು ಎಂದು ತಮಿಳುನಾಡು ಮೂಲಕ ಮಾಜಿ ಆಟಗಾರ ಅಭಿನವ್ ಮುಕುಂದ್ ಹೇಳಿದರು.

"ಶುಭ್ಮನ್ ಗಿಲ್ ಅವರ ವೈಫಲ್ಯದ ಬಗ್ಗೆ ತುಂಬಾ ಮಾತನಾಡಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಆತ ಕಳೆದ ಎರಡು ವರ್ಷಗಳಿಂದ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ವೀಕ್ಷಕರಾಗಿ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಯಾಗಿ ಸ್ವರೂಪಗಳನ್ನು ಗೊಂದಲಗೊಳಿಸದಿರುವುದು ಮುಖ್ಯವಾಗಿದೆ," ಎಂದರು.

ನಾವು ಯಾವಾಗಲೂ ಕ್ರಿಕೆಟ್ ಸ್ವರೂಪಗಳನ್ನು ಮಿಶ್ರಣ ಮಾಡಲು ಒಲವು ತೋರುತ್ತೇವೆ. ನಾವು ಕೆಲವು ಫಾರ್ಮ್ಯಾಟ್‌ಗಳಿಗೆ ಸಂಬಂಧಿಸಿದ ಫಾರ್ಮ್ ಸಂಯೋಜಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ಕೇವಲ ಟೆಸ್ಟ್ ಸ್ವರೂಪವನ್ನು ಗಮನಿಸುತ್ತೇವೆ ಎಂದು ತಿಳಿಸಿದರು.

"ಶುಭ್ಮನ್ ಗಿಲ್ ಭಾರತ ತಂಡದ ಅಗ್ರ ಆಟಗಾರ ಮತ್ತು ಆತ ವಿಶ್ವಕಪ್‌ ತಂಡದಲ್ಲಿ ಆಡಬೇಕು ಎಂದು ನಾನು ಭಾವಿಸುತ್ತೇನೆ. ಆತನ ಫಾರ್ಮ್ ಕುಸಿದಿದೆ ಎಂದು ನಾನು ಭಾವಿಸುವುದಿಲ್ಲ. ಮತ್ತೆ ಫಾರ್ಮ್‌ಗೆ ಮರಳುತ್ತಾರೆ ಎಂದು ನನಗೆ ಖಾತ್ರಿಯಿದೆ," ಎಂದು ಜಿಯೋಸಿನಿಮಾ ವೀಕ್ಷಕ ವಿವರಣೆಗಾರ ಅಭಿನವ್ ಮುಕುಂದ್ ಹೇಳಿದ್ದಾರೆ.

ಮತ್ತೊಬ್ಬ ಜಿಯೋಸಿನಿಮಾ ವಿವರಣೆಗಾರ ನಿಖಿಲ್ ಚೋಪ್ರಾ ಮಾತನಾಡಿ, ಭಾರತ ತಂಡ 2ನೇ ಏಕದಿನ ಪಂದ್ಯಕ್ಕಾಗಿ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

"ಅಕ್ಷರ್ ಪಟೇಲ್ ಮತ್ತು ಯುಜ್ವೇಂದ್ರ ಚಹಾಲ್ ಇಬ್ಬರೂ ಹೊರಗುಳಿದಿರುವುದರಿಂದ, ಸ್ಪಿನ್ ವಿಭಾಗದಲ್ಲಿ ಮಾತ್ರ ಬದಲಾವಣೆ ಸಂಭವಿಸಬಹುದು ಎಂದು ನಾನು ಭಾವಿಸುತ್ತೇನೆ," ಎಂದರು.

ರವೀಂದ್ರ ಜಡೇಜಾ ಮೊದಲ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದು ಉತ್ತಮ ಪ್ರದರ್ಶನ ನೀಡಿದರು ಮತ್ತು ಅಜೇಯ 16 ರನ್ ಗಳಿಸಿದರು.

Story first published: Saturday, July 29, 2023, 18:16 [IST]
Other articles published on Jul 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+