ಭಾರತ vs ಶ್ರೀಲಂಕಾ: ಕೃನಾಲ್ ಪಾಂಡ್ಯಗೆ ಕೋವಿಡ್-19 ಸೋಂಕು

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ತಂಡದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ ವರದಿಯಾಗಿದೆ. ಶ್ರೀಲಂಕಾದಲ್ಲಿ ಏಕದಿನ ಸರಣಿ ಮುಗಿಸಿರುವ ಭಾರತ ಸದ್ಯ ಟಿ20ಐ ಸರಣಿ ಆಡುತ್ತಿದೆ.
ಮೂರು ಪಂದ್ಯಗಳ ಟಿ20ಐ ಸರಣೀಯಲ್ಲಿ ಒಂದು ಪಂದ್ಯ ಮುಗಿಸಿದೆ. ದ್ವಿತೀಯ ಪಂದ್ಯ ಜುಲೈ 27ರಂದು ನಡೆಯುವುದರಲ್ಲಿತ್ತು. ಆದರೆ ಕೃನಾಲ್ ಪಾಂಡ್ಯಗೆ ಸೋಂಕು ತಗುಲಿರುವುದರಿಂದ ಮಂಗಳವಾರ ನಡೆಯಲಿದ್ದ ದ್ವಿತೀಯ ಟಿ20ಐ ಪಂದ್ಯವನ್ನು ಮುಂದೂಡಲಾಗಿದೆ.
ಬಲ್ಲ ಮಾಹಿತಿಯ ಪ್ರಕಾರ ಜುಲೈ 27ರ ಮಂಗಳವಾರ ನಡೆಯಲಿದ್ದ ದ್ವಿತೀಯ ಟಿ20ಐ ಪಂದ್ಯ ಜುಲೈ 28ರ ಬುಧವಾರ ನಡೆಯಲಿದೆ. ತೃತೀಯ ಪಂದ್ಯ ಶುಕ್ರವಾರ ಅಂದರೆ ಜುಲೈ 30ರಂದು ನಡೆಯಲಿದೆ. ಇಂಗ್ಲೆಂಡ್‌ನಲ್ಲಿರುವ ಭಾರತೀಯ ತಂಡದಲ್ಲೂ ಕೋವಿಡ್ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದವು.
ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕೊರೊನಾ ಸೋಂಕು ಇದ್ದಿದ್ದರಿಂದ ಅವರನ್ನು ಕ್ವಾರಂಟೈನ್‌ಗೆ ಹಾಕಲಾಗಿತ್ತು. ಈಗ ಪಂತ್ ಚೇತರಿಸಿಕೊಂಡಿದ್ದಾರೆ. ಭಾರತ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications