Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ವಿಶ್ವಕಪ್‌ ವಿಜೇತ ಅರ್ಜುನ್ ರಣತುಂಗ ವಿರುದ್ಧ ಮಾನನಷ್ಟ ಮೊಕದ್ದಮೆ: 2 ಬಿಲಿಯನ್ ಹಣ ನೀಡುವಂತೆ SLC ಬೇಡಿಕೆ

Arjun Ranatunga

ಶ್ರೀಲಂಕಾದ ಮಾಜಿ ನಾಯಕ, ವಿಶ್ವಕಪ್ ವಿಜೇತ ಅರ್ಜುನ್ ರಣತುಂಗ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ ಕಾನೂನು ಸಮರ ಸಾರಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿಕೆ ಹಿನ್ನಲೆಯಲ್ಲಿ ಆತನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ಶ್ರೀಲಂಕಾ ಕ್ರಿಕೆಟ್‌ ಎಕ್ಸಿಕ್ಯೂಟಿವ್ ಕಮಿಟಿ ಹೇಳಿದೆ.

ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ಪೋರ್ಟ್ಸ್ ಕೌನ್ಸಿಲ್‌ನ ಅಧ್ಯಕ್ಷರಾಗಿ ನೇಮಕಗೊಂಡ ಅರ್ಜುನ್ ರಣತುಂಗ ಅವರಿಗೆ ಲೆಟರ್ಸ್ ಆಫ್ ಡಿಮ್ಯಾಂಡ್ (LOD) 2 ಶತಕೋಟಿ ರೂಪಾಯಿ ಕೇಳಿದ್ದೇವೆ ಎಂದು ಎಸ್‌ಎಲ್‌ಸಿ ಹೇಳಿಕೆಯಲ್ಲಿ ಘೋಷಿಸಿದೆ.

ರಾಷ್ಟ್ರೀಯ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷರಾಗಿರುವ ರಣತುಂಗ

ರಾಷ್ಟ್ರೀಯ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷರಾಗಿರುವ ರಣತುಂಗ

ಶ್ರೀಲಂಕಾದ ಮಾಜಿ ಸಂಸತ್ ಸದಸ್ಯ ಹಾಗೂ ವಿಶ್ವಕಪ್ ವಿಜೇತ ಅರ್ಜುನ್ ರಣತುಂಗ ರಾಷ್ಟ್ರೀಯ ಸ್ಪೋರ್ಟ್ಸ್ ಕೌನ್ಸಿಲ್ಸ್ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಆಯ್ಕೆಯಾದರು. 15 ಸದಸ್ಯರನ್ನೊಳಗೊಂಡ ಈ ಕಮಿಟಿಯನ್ನು ಕ್ರೀಡಾ ಮಂತ್ರಿ ರೋಷಣ್ ರಣಸಿಂಗೆ ಆಗಸ್ಟ್‌ 10ರಂದು ರಚಿಸಿದರು. ಆದ್ರೆ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಸುಮ್ಮನಿರದ ರಣತುಂಗ ಶ್ರೀಲಂಕಾ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ತಪ್ಪು ಮಾಹಿತಿಗಳನ್ನ ನೀಡಿದ್ದಾರೆ ಎಂಬುದು ಆರೋಪವಾಗಿದೆ.

ರಾಷ್ಟ್ರದ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಮಾಜಿ ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಂಡಳಿಯ ಸದಸ್ಯರು ನಿರ್ಗಮಿಸಿದರು. ಈ ಮಂಡಳಿಯನ್ನು ಹಿಂದೆ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ನೇತೃತ್ವ ವಹಿಸಿದ್ದರು. ಪರಿಷತ್ತಿನಲ್ಲಿ ಹಿಂದೆ 14 ಸದಸ್ಯರಿದ್ದರು.

ಜಿಂಬಾಬ್ವೆ ಸರಣಿಯಿಂದ ಹೊರಬಿದ್ದ ವಾಷಿಂಗ್ಟನ್ ಸುಂದರ್ ಬದಲು ಆರ್‌ಸಿಬಿ ಆಟಗಾರನಿಗೆ ಸ್ಥಾನ

ಅರ್ಜುನ್ ರಣತುಂಗ ವಿರುದ್ಧ ಮಾನನಷ್ಟ ಮೊಕದ್ದಮೆ

ಅರ್ಜುನ್ ರಣತುಂಗ ವಿರುದ್ಧ ಮಾನನಷ್ಟ ಮೊಕದ್ದಮೆ

ಶ್ರೀಲಂಕಾ ಕ್ರಿಕೆಟ್ ಅಸೋಸಿಯೇಷನ್ ನೀಡಿರುವ ಇತ್ತೀಚಿನ ಹೇಳಿಕೆಯಲ್ಲಿ ಅರ್ಜುನ್ ರಣತುಂಗ ತಪ್ಪು, ಅವಮಾನಕರ ಮತ್ತು ಅಗೌರವದ ಹೇಳಿಕೆಯನ್ನು ನೀಡಿದ್ದರು ಎಂಬುದು ಶ್ರೀಲಂಕಾ ಕ್ರಿಕೆಟ್‌ ಅಸೋಸಿಯೇಷನ್ ವಾದವಾಗಿದ್ದು, ಎಸ್‌ಎಲ್‌ಸಿ ಕಮಿಟಿಯು ಮಾಜಿ ವಿಶ್ವಕಪ್ ವಿಜೇತ ನಾಯಕ ಅರ್ಜುನ್ ರಣತುಂಗ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ.

ಎಸ್‌ಎಲ್‌ಸಿ ಹೇಳಿಕೆಯ ಪ್ರಕಾರ, ರಣತುಂಗಾ ಅವರು "ದುರುದ್ದೇಶಪೂರಿತ ಉದ್ದೇಶದಿಂದ ಮಾತನಾಡಿದ್ದಾರೆ, ಎಲ್‌ಎಸ್‌ಸಿಯ ಅಭಿಮಾನ ಮತ್ತು ಖ್ಯಾತಿಗೆ ಹಾನಿಯನ್ನುಂಟುಮಾಡಿದ್ದಾರೆ ಮತ್ತು ಶ್ರೀಲಂಕಾ ಕ್ರಿಕೆಟ್‌ನ ಕಾರ್ಯಕಾರಿ ಸಮಿತಿಯ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಸಾರ್ವಜನಿಕ ಕಾಮೆಂಟ್‌ಗಳನ್ನು ಮಾಡಿದ್ದಾರೆ." ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪಾಕ್ ವಿರುದ್ಧ ರೋಹಿತ್ ಗಳಿಸಿರುವ ಟಿ20 ರನ್ ಎಷ್ಟು? 30 ರನ್ ದಾಟಲಾಗದೇ ಪರದಾಟ!

2 ಬಿಲಿಯನ್ ರೂಪಾಯಿ ಮಾನನಷ್ಟ ಮೊಕದ್ದಮೆ

2 ಬಿಲಿಯನ್ ರೂಪಾಯಿ ಮಾನನಷ್ಟ ಮೊಕದ್ದಮೆ

ಅರ್ಜುನ್ ರಣತುಂಗ ಹೇಳಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಎಕ್ಸಿಕ್ಯೂಟಿವ್ ಕಮಿಟಿಯು 2 ಬಿಲಿಯನ್ ರೂಪಾಯಿ ಪರಿಹಾರ ನೀಡಬೇಕೆಂದು ಬೇಡಿಕೆಯಿಟ್ಟಿದೆ. ಭಾರತ ರೂಪಾಯಿಗಳಲ್ಲಿ ಸುಮಾರು 45 ಕೋಟಿ ರೂಪಾಯಿಯಷ್ಟು ಮಾನನಷ್ಟ ಪರಿಹಾರ ಕೇಳಲಾಗಿದೆ ಎಂದು ಶ್ರೀಲಂಕಾದ ಕ್ರಿಕೆಟ್‌ ಅಸೋಸಿಯೇಷನ್ ಅಧಿಕಾರಿಗಳು ತಿಳಿಸಿದ್ದಾರೆ.

Story first published: Tuesday, August 16, 2022, 16:53 [IST]
Other articles published on Aug 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+