ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಿಂಬಾಬ್ವೆ ಸರಣಿಯಿಂದ ಹೊರಬಿದ್ದ ವಾಷಿಂಗ್ಟನ್ ಸುಂದರ್ ಬದಲು ಆರ್‌ಸಿಬಿ ಆಟಗಾರನಿಗೆ ಸ್ಥಾನ

IND vs ZIM: RCBs Shahbaz Ahmed selected as replacement for Washington Sundar in Zimbabwe tour

ಇತ್ತೀಚಿಗಷ್ಟೆ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡು ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಸರಣಿಗಳಲ್ಲಿಯೂ ಸಹ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಇದೇ ತಿಂಗಳ ಅಂತಿಮ ವಾರದಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗುತ್ತಿದೆ. ಒಂದೆಡೆ ಕೆಲ ಆಟಗಾರರು ಮುಂಬರುವ ಏಷ್ಯಾಕಪ್ ಟೂರ್ನಿಗಾಗಿ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಏಷ್ಯಾಕಪ್ ಟೂರ್ನಿಗೂ ಮುನ್ನ ಆಯೋಜನೆಯಾಗಿರುವ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸುವಲ್ಲಿ ಕೆಲ ಆಟಗಾರರು ನಿರತರಾಗಿದ್ದಾರೆ.

ಪಾಕ್ ವಿರುದ್ಧ ರೋಹಿತ್ ಗಳಿಸಿರುವ ಟಿ20 ರನ್ ಎಷ್ಟು? 30 ರನ್ ದಾಟಲಾಗದೇ ಪರದಾಟ!ಪಾಕ್ ವಿರುದ್ಧ ರೋಹಿತ್ ಗಳಿಸಿರುವ ಟಿ20 ರನ್ ಎಷ್ಟು? 30 ರನ್ ದಾಟಲಾಗದೇ ಪರದಾಟ!

ಹೌದು, ಇದೇ ತಿಂಗಳ 18ರಿಂದ 22ರವರೆಗೆ ಭಾರತ ಮತ್ತು ಜಿಂಬಾಬ್ವೆ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದ್ದು, ಕೆಎಲ್ ರಾಹುಲ್ ನಾಯಕತ್ವದಡಿಯಲ್ಲಿ ಕಣಕ್ಕಿಳಿಯುವ ಟೀಮ್ ಇಂಡಿಯಾ ಈಗಾಗಲೇ ಜಿಂಬಾಬ್ವೆ ತಲುಪಿ ಅಭ್ಯಾಸ ಆರಂಭಿಸಿದೆ. ಇನ್ನು ಈ ಪ್ರವಾಸಕ್ಕೆ ಆಯ್ಕೆಯಾಗಿದ್ದ ವಾಷಿಂಗ್ಟನ್ ಸುಂದರ್ ರಾಯಲ್ ಲಂಡನ್ ಟೂರ್ನಿಯಲ್ಲಿ ಲ್ಯಾಂಕಶೈರ್ ಪರ ಆಡುವಾಗ ಭುಜದ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ವಾಷಿಂಗ್ಟನ್ ಸುಂದರ್‌ ಜಿಂಬಾಬ್ವೆ ಸರಣಿಯಲ್ಲಿ ಅವಕಾಶ ಕಳೆದುಕೊಂಡು ಹೊರಬಿದ್ದಿದ್ದರು. ಇದೀಗ ವಾಷಿಂಗ್ಟನ್ ಸುಂದರ್ ಬದಲಿ ಆಟಗಾರನನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ಸುಂದರ್ ಬದಲು ಆರ್‌ಸಿಬಿ ಆಟಗಾರ

ಸುಂದರ್ ಬದಲು ಆರ್‌ಸಿಬಿ ಆಟಗಾರ

2020ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದು ಮಿಂಚಿದ್ದ ಶಹಬಾಜ್ ಅಹ್ಮದ್ ಅವರನ್ನು ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ಬದಲು ತಂಡಕ್ಕೆ ನೇಮಕ ಮಾಡಲಾಗಿದೆ. ಈ ಮೂಲಕ ಶಬಾಜ್ ಅಹ್ಮದ್ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. 27 ವರ್ಷದ ಶಬಾಜ್ ಅಹ್ಮದ್ ಎಡಗೈ ಆಲ್‌ರೌಂಡರ್ ಆಟಗಾರನಾಗಿದ್ದು, ಬೆಂಗಾಲ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದಾರೆ.

ಅಹ್ಮದ್ ಅಂಕಿಅಂಶ

ಅಹ್ಮದ್ ಅಂಕಿಅಂಶ

ಇನ್ನು 2020ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಶಹಬಾಜ್ ಅಹ್ಮದ್ ಅಂದಿನಿಂದ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೇ ಆಡುತ್ತಿದ್ದು, 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2 ಪಂದ್ಯಗಳಲ್ಲಿ, 2021ರ ಆವೃತ್ತಿಯಲ್ಲಿ 11 ಪಂದ್ಯಗಳು ಹಾಗೂ 2022ರ ಐಪಿಎಲ್‌ನಲ್ಲಿ 16 ಪಂದ್ಯಗಳನ್ನಾಡುವ ಅವಕಾಶ ಪಡೆದಿದ್ದಾರೆ. ಇನ್ನು ಒಟ್ಟಾರೆ 29 ಐಪಿಎಲ್ ಪಂದ್ಯಗಳನ್ನಾಡಿ 19 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಶಹಬಾಜ್ ಅಹ್ಮದ್ 279 ರನ್ ಕಲೆಹಾಕಿದ್ದಾರೆ ಹಾಗೂ 22 ಇನ್ನಿಂಗ್ಸ್‌ನಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಹ್ಮದ್ ಸೇರ್ಪಡೆ ನಂತರ ಟೀಮ್ ಇಂಡಿಯಾ ಹೀಗಿದೆ

ಅಹ್ಮದ್ ಸೇರ್ಪಡೆ ನಂತರ ಟೀಮ್ ಇಂಡಿಯಾ ಹೀಗಿದೆ

ಶಬಾಜ್ ಅಹ್ಮದ್ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾದ ನಂತರ ಟೀಮ್ ಇಂಡಿಯಾ ಸ್ಕ್ವಾಡ್ ಹೀಗಿದೆ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ , ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಶಹಬಾಜ್ ಅಹ್ಮದ್.

ಭಾರತ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿಯ ವೇಳಾಪಟ್ಟಿ

ಆಗಸ್ಟ್ 18- ಜಿಂಬಾಬ್ವೆ vs ಭಾರತ, 1ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - 12:45 PM

ಆಗಸ್ಟ್ 20- ಜಿಂಬಾಬ್ವೆ vs ಭಾರತ, 2ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - 12:45 PM

ಆಗಸ್ಟ್ 22- ಜಿಂಬಾಬ್ವೆ vs ಭಾರತ, 3ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - 12:45 PM

Story first published: Tuesday, August 16, 2022, 15:35 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X