SMAT 2022: 55 ಎಸೆತಗಳಲ್ಲಿ 126ರನ್ ಚಚ್ಚಿದ ಶುಭಮನ್ ಗಿಲ್, ಕರ್ನಾಟಕ ವಿರುದ್ಧ ಪಂಜಾಬ್‌ಗೆ ಗೆಲುವು

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ 9 ರನ್‌ಗಳ ರೋಚಕ ಗೆಲುವು ಸಾಧಿಸಿದ ಪಂಜಾಬ್ ಸೆಮಿಫೈನಲ್ ಪ್ರವೇಶಿಸಿದೆ. ಪ್ರಬಲ ಹೋರಾಟ ನಡೆಸಿದ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ಬರಿಗೈನಲ್ಲಿ ತವರಿಗೆ ವಾಪಸ್ಸಾಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕರ್ನಾಟಕ ತಂಡವು ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿತು. ಎರಡನೇ ಎಸೆತದಲ್ಲೇ ಓಪನರ್ ಅಭಿಷೇಕ್ ಶರ್ಮಾ ಲವನೀತ್ ಸಿಸೋಡಿಯಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಇದ್ರ ಬೆನ್ನಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಪ್ರಬಸಿಮ್ರಾನ್ ಕೂಡ ವಿಕೆಟ್ ಒಪ್ಪಿಸಿದ್ರ ಪರಿಣಾಮ ಕರ್ನಾಟಕ ಮೇಲುಗೈ ಸಾಧಿಸಿತು. ಆದ್ರೆ ನಂತರ ನಡೆದಿದ್ದೆಲ್ಲಾ ಶುಭಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ.
55 ಎಸೆತಗಳಲ್ಲಿ 126ರನ್ ಚಚ್ಚಿದ ಶುಭಮನ್ ಗಿಲ್
ಆರಂಭಿಕ ಎರಡು ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ತಂಡವನ್ನ ಮೇಲೆತ್ತಿದ ಕೀರ್ತಿ ಶುಭಮನ್ ಗಿಲ್‌ಗೆ ಸಲ್ಲುತ್ತದೆ. ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ ಶುಭಮನ್ ಗಿಲ್ 55 ಎಸೆತಗಳಲ್ಲಿ 126 ರನ್ ಸಿಡಿಸುವ ಮೂಲಕ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. 229.09 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಶುಭಮನ್ ಗಿಲ್ 49 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಲ್ಲದೆ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು.
ಶುಭಮನ್ ಗಿಲ್‌ಗೆ ಉತ್ತಮ ಸಾಥ್ ನೀಡಿದ ಅನ್ಮೋಲ್‌ಪ್ರೀತ್ ಸಿಂಗ್ 43 ಎಸೆತಗಳಲ್ಲಿ 59 ರನ್ ಸಿಡಿಸುವ ಮೂಲಕ ಉತ್ತಮ ಜೊತೆಯಾಟವಾಡಿದ್ರು. ಪರಿಣಾಮ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು. ಕರ್ನಾಟಕಕ್ಕೆ ಬೃಹತ್ ಗುರಿ ನೀಡಿತು.
ಟಿ20 ವಿಶ್ವಕಪ್: KL ರಾಹುಲ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ ರಾಹುಲ್ ದ್ರಾವಿಡ್

ಗುರಿ ಬೆನ್ನತ್ತುವಲ್ಲಿ ಕರ್ನಾಟಕದ ಟಾಪ್ ಆರ್ಡರ್ ವೈಫಲ್ಯ
226ರನ್ ಗುರಿ ಬೆನ್ನತ್ತಿದ ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್ ಸೇರಿದಂತೆ ಟಾಪ್ ಆರ್ಡರ್ ವೈಫಲ್ಯವು ತಂಡದ ಸೋಲಿನ ದವಡೆಗೆ ನೂಕಿತು. ಮಯಾಂಕ್ ಅಗರ್ವಾಲ್ 8, ರೋಹನ್ ಪಾಟೀಲ್ 2, ಲವನೀತ್ ಸಿಸೋಡಿಯಾ 6ರನ್‌ಗಳಿಸಿ ಔಟಾಗುವ ಮೂಲಕ ಕರ್ನಾಟಕದ ಕುಸಿತಕ್ಕೆ ಕಾರಣವಾದ್ರು.
ಆದ್ರೆ ಎಲ್‌ಆರ್ ಚೇತನ್ 33, ಮನೀಶ್ ಪಾಂಡೆ 29 ಎಸೆತಗಳಲ್ಲಿ 45, ಮನೋಜ್ ಬಂಡಾಜೆ 25ರನ್ ಜೊತೆಗೆ ಅಭಿನವ್ ಮನೋಹರ್ ಸ್ಫೋಟಕ ಬ್ಯಾಟಿಂಗ್ ವ್ಯರ್ಥವಾಯ್ತು. ಮನೋಹರ್ 29 ಎಸೆತಗಳಲ್ಲಿ ತಲಾ 5 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸುವ ಮೂಲಕ ಅಜೇಯ ಆಟವಾಡಿದ್ರೂ ತಂಡವು ಗುರಿ ತಲುಪಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಕೃಷ್ಣಪ್ಪ ಗೌತಮ್ 14 ಎಸೆತಗಳಲ್ಲಿ ಅಜೇಯ 30 ರನ್ ಸಿಡಿಸಿದ್ರು ಸಹ ಕರ್ನಾಟಕ 9ರನ್‌ಗಳಿಂದ ಸೋಲನ್ನ ಅನುಭವಿಸಿದೆ.
ಈ ಗೆಲುವಿನ ಮೂಲಕ ಪಂಜಾಬ್ ತಂಡವು ಸೆಮೀಸ್‌ಗೆ ಎಂಟ್ರಿಕೊಟ್ಟಿದ್ದು, ಕರ್ನಾಟಕ ಸೋತು ನಿರಾಸೆ ಮೂಡಿಸಿದೆ.
ಈ ತಂಡ ಟಿ20 ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆಯಲಿದೆ; ಭವಿಷ್ಯ ನುಡಿದ ಸೌರವ್ ಗಂಗೂಲಿ

ಉಭಯ ತಂಡಗಳ ಪ್ಲೇಯಿಂಗ್ 11
ಕರ್ನಾಟಕ: ಎಲ್ ಆರ್ ಚೇತನ್, ಮಯಾಂಕ್ ಅಗರ್ವಾಲ್ (ನಾಯಕ), ಲವನೀತ್ ಸಿಸೋಡಿಯಾ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಅಭಿನವ್ ಮನೋಹರ್, ಮನೋಜ್ ಬಂಡಾಜೆ, ಕೃಷ್ಣಪ್ಪ ಗೌತಮ್, ಜಗದೀಶ ಸುಚಿತ್, ವಿಜಯ್‌ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ವಾಸುಕಿ ಕೌಶಿಕ್
ಬೆಂಚ್: ಶ್ರೇಯಸ್ ಗೋಪಾಲ್, ಶರತ್ ಬಿಆರ್, ಮುರಳೀಧರ ವೆಂಕಟೇಶ್, ದೇವದತ್ ಪಡಿಕ್ಕಲ್, ರೋಹನ್ ಪಾಟೀಲ್
ಪಂಜಾಬ್: ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಸನ್ವಿರ್ ಸಿಂಗ್, ರಮಣದೀಪ್ ಸಿಂಗ್, ಮಂದೀಪ್ ಸಿಂಗ್ (ನಾಯಕ), ಅನ್ಮೋಲ್‌ಪ್ರೀತ್ ಸಿಂಗ್, ಹರ್ಪ್ರೀತ್ ಬ್ರಾರ್, ಮಯಾಂಕ್ ಮಾರ್ಕಾಂಡೆ, ಬಲ್ತೇಜ್ ಸಿಂಗ್, ಸಿದ್ದಾರ್ಥ್ ಕೌಲ್
ಬೆಂಚ್: ಅಶ್ವನಿ ಕುಮಾರ್, ಅನ್ಮೋಲ್ ಮಲ್ಹೋತ್ರಾ, ನೆಹಾಲ್ ವಧೇರಾ, ಪುಖ್ರಾಜ್ ಮಾನ್, ಗೌರವ್ ಚೌಧರಿ, ಗುರುಕೀರತ್ ಸಿಂಗ್ ಮಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications