Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SMAT 2022: ಸೌರಾಷ್ಟ್ರ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಮುಂಬೈ

Mumbai vs Saurashtra

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ನಾಲ್ಕನೇ ಕ್ವಾರ್ಟರ್ ಫೈನಲ್‌ನಲ್ಲಿ ಸೌರಾಷ್ಟ್ರ ವಿರುದ್ಧ ಮುಂಬೈ ಗೆದ್ದು ಬೀಗಿದೆ. ಸೌರಾಷ್ಟ್ರ ನೀಡಿದ್ದ 167ರನ್ ಗುರಿ ಬೆನ್ನತ್ತುವಲ್ಲಿ ಯಶಸ್ವಿಯಾದ ಮುಂಬೈ ತಂಡವು ಎರಡು ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೌರಾಷ್ಟ್ರ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಮೊದಲಿಗೆ ಚೇತೇಶ್ವರ್ ಪೂಜಾರ 12ರನ್‌ಗೆ ವಿಕೆಟ್‌ ಒಪ್ಪಿಸಿದ್ರೆ, ಹಾರ್ವಿಕ್‌ ದೇಸಾಯಿ 23ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಸಮ್ಯತ್ ವ್ಯಾಸ್ 14ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ರು. ಉತ್ತಮವಾಗೇ ಆಡ್ತಿದ್ದ ಜಾಕ್ಸನ್ 31ರನ್‌ಗೆ ಔಟಾದರು.

ಹೀಗೆ ಒಂದೆಡೆ ವಿಕೆಟ್ ಉರುಳಿದ್ರೆ ಕೆಳಕ್ರಮಾಂಕದಲ್ಲಿ ಅಬ್ಬರಿಸಿದ ಪ್ರೇರಕ್ ಮಂಕಂಡ್ 25 ಎಸೆತಗಳಲ್ಲಿ 61ರನ್ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ದಾಖಲಿಸಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166ರನ್ ಕಲೆಹಾಕಿತು.

167ರನ್ ಗುರಿ ಬೆನ್ನತ್ತಿದ ಮುಂಬೈ ತಂಡದ ಆರಂಭವು ಉತ್ತಮವಾಗಿರ್ಲಿಲ್ಲ. ಪೃಥ್ವಿ ಶಾ ಕೇವಲ 2ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ಅಜಿಂಕ್ಯ ರಹಾನೆ 22 ಎಸೆತಗಳಲ್ಲಿ 21ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಯಶಸ್ವಿ ಜೈಸ್ವಾಲ್ ಆಟ 13ರನ್‌ಗೆ ಕೊನೆಗೊಂಡಿತು.

ಆದ್ರೆ ನಾಲ್ಕನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಸಾಯಿರಾಜ್ ಪಾಟಿಲ್ ಅರ್ಧಶತಕದ ಜೊತೆಯಾಟದ ಮೂಲಕ ತಂಡಕ್ಕೆ ಆಧಾರವಾದ್ರು. ಸಾಯಿರಾಜ್ 31ರನ್‌ಗೆ ಔಟಾದ್ರೆ, ಶ್ರೇಯಸ್ ಅಯ್ಯರ್ 40ರನ್‌ಗೆ ಇನ್ನಿಂಗ್ಸ್ ಕೊನೆಗೊಳಿಸಿದ್ರು. ಸರ್ಫರಾಜ್ ಖಾನ್ ಗೋಲ್ಡನ್ ಡಕೌಟ್ ಆಗಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು. ಆದ್ರೆ ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ಶಿವಂ ದುಬೆ ಯಶಸ್ವಿಯಾದ್ರು.

ತನ್ನ ಐಪಿಎಲ್ ಅನುಭವವನ್ನು ಧಾರೆಯೆರೆದ ಶಿವಂ ದುಬೆ 13 ಎಸೆತಗಳಲ್ಲಿ ಅಜೇಯ 25 ರನ್ ಕಲೆಹಾಕುವ ಮೂಲಕ ಮಿಂಚಿದರು. ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆ ಮುಂಬೈ 2 ವಿಕೆಟ್‌ಗಳ ಗೆಲುವು ಸಾಧಿಸಿತು.

ಈ ಗೆಲುವಿನ ಮೂಲಕ ಸೆಮಿಫೈನಲ್‌ ಪ್ರವೇಶಿಸಿರುವ ಮುಂಬೈ ಎರಡನೇ ಸೆಮಿಫೈನಲ್‌ನಲ್ಲಿ ವಿದರ್ಭ ತಂಡವನ್ನು ಎದುರಿಸಲಿದ್ದಾರೆ. ಈ ಪಂದ್ಯ ನವೆಂಬರ್ 3ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನ ಮೊದಲ ಸೆಮಿಫೈನಲ್‌ನಲ್ಲಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಕಾದಾಟ ನಡೆಸಲಿವೆ.

ಮುಂಬೈ ಮತ್ತು ಸೌರಾಷ್ಟ್ರ ತಂಡದ ಪ್ಲೇಯಿಂಗ್ 11
ಮುಂಬೈ: ಪೃಥ್ವಿ ಶಾ, ಅಜಿಂಕ್ಯ ರಹಾನೆ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ಸರ್ಫರಾಜ್ ಖಾನ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಅಮನ್ ಹಕೀಮ್ ಖಾನ್, ಮೋಹಿತ್ ಅವಸ್ತಿ

ಸೌರಾಷ್ಟ್ರ: ಹಾರ್ವಿಕ್ ದೇಸಾಯಿ, ಚೇತೇಶ್ವರ ಪೂಜಾರ, ಸಮರ್ಥ ವ್ಯಾಸ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಜಯದೇವ್ ಉನದ್ಕತ್ (ನಾಯಕ), ಜಯ್ ಗೋಹಿಲ್, ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕರಿಯಾ, ಕುಶಾಂಗ್ ಪಟೇಲ್

Story first published: Tuesday, November 1, 2022, 21:44 [IST]
Other articles published on Nov 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+