ಕೆಲ CSK ಬ್ಯಾಟ್ಸ್‌ಮನ್ಸ್ ತಮ್ಮ ಸ್ಥಾನವನ್ನ ಸರ್ಕಾರಿ ಕೆಲಸ ಅಂದುಕೊಂಡಿದ್ದಾರೆ: ವೀರೇಂದ್ರ ಸೆಹ್ವಾಗ್

ಟೀಮ್ ಇಂಡಿಯಾ ಮಾಜಿ ಓಪನರ್, ವೀರೇಂದ್ರ ಸೆಹ್ವಾಗ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಮೇಲೆ ಅಭಿಮಾನಿಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ರಂಜಿಸುವುದು ನಿಮಗೆಲ್ಲಾ ಗೊತ್ತೇ ಇದೆ.
ಟ್ವಿಟರ್‌ನಲ್ಲಿ ಸೇರಿದಂತೆ ಅನೇಕ ಕಡೆ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಕ್ರಿಕೆಟ್ ವಿಶ್ಲೇಷಣೆ ಮಾಡುವ ವೀರೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳ ಪ್ರದರ್ಶನವನ್ನ ನೋಡಿ ಕಾಲೆಳೆದಿದ್ದಾರೆ.
ಕೆಕೆಆರ್ ನೀಡಿದ 168 ರನ್‌ಗಳ ಬೆನ್ನಟ್ಟಿದ ಸಿಎಸ್‌ಕೆ ಪಂದ್ಯವನ್ನ ಬಹುತೇಕ ಗೆಲ್ಲುವ ಎಲ್ಲಾ ಅವಕಾಶವಿತ್ತು. ಶೇನ್ ವ್ಯಾಟ್ಸನ್ ಅವರ ಅರ್ಧಶತಕವು ಉತ್ತಮ ಬುನಾದಿಯನ್ನು ಹಾಕಿಕೊಟ್ಟಿತ್ತು. ಇನ್ನೇನು ಪಂದ್ಯ ಗೆದ್ದೇ ಬಿಟ್ಟೆವು ಎಂದು ಸಿಎಸ್‌ಕೆ ಪಾಳಯದಲ್ಲಿ ನಗು ಕಾಣುತ್ತಿತ್ತು.
ಆದರೆ ಕೊನೆಯ 10 ಒವರ್‌ಗಳಲ್ಲಿ ಪಂದ್ಯದ ದಿಕ್ಕೇ ಬದಲಾಯಿತು. ಸಿಎಸ್‌ಕೆ ಕೊನೆಯ 10 ಓವರ್‌ಗಳಲ್ಲಿ ಕೇವಲ 67 ರನ್‌ಗಳನ್ನು ಗಳಿಸಿತು, ಬ್ಯಾಟ್ಸ್‌ಮನ್‌ಗಳ ಸ್ಲೋ ಬ್ಯಾಟಿಂಗ್ ಕೇದಾರ್ ಜಾಧವ್ ಅವರ 12 ಎಸೆತಗಳ 7 ರನ್ಗಳು ತಂಡವನ್ನ ಒತ್ತಡಕ್ಕೆ ಸಿಲುಕಿಸಿತು. ಧೋನಿ 12 ಎಸೆತಗಳಲ್ಲಿ ಗಳಿಸಿದ್ದು 11ರನ್.
ಹೀಗಾಗಿ ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳನ್ನ ಪರೋಕ್ಷವಾಗಿ ಟೀಕಿಸಿರುವ ಸೆಹ್ವಾಗ್ ಕೆಲವು ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಥಾನವನ್ನು ಸರಕಾರದ ಕೆಲಸವೆಂದು ಭಾವಿಸುತ್ತಾರೆ, ಅಲ್ಲಿ ಅವರು ತಿಳಿದಿಲ್ಲದಿದ್ದರೂ ಸಹ ಪ್ರದರ್ಶನ ನೀಡುವುದಿಲ್ಲ, ಅವರು ಹೇಗಾದರೂ ತಮ್ಮ ಸಂಬಳವನ್ನು ಪಡೆಯುತ್ತಾರೆ ಎಂದು ಅವರಿಗೆ ತಿಳಿದಿದೆ ಎಂದು ಟೀಕಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications