ನನ್ನ ಟ್ವಿಟರ್ ಅಕೌಂಟ್‌ನಿಂದ ಅಶ್ಲೀಲ ವೀಡಿಯೋ ಲೈಕ್ ಮಾಡಿದ್ದಾರೆ: ಯೂನಿಸ್

ಲಾಹೋರ್, ಮೇ 28: ತನ್ನ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಅದರಿಂದ ಅಶ್ಲೀಲ ವೀಡಿಯೋವೊಂದಕ್ಕೆ ಲೈಕ್ ಮಾಡಲಾಗಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ವಾಕರ್ ಯೂನಿಸ್ ಆರೋಪಿಸಿದ್ದಾರೆ. ಶುಕ್ರವಾರ (ಮೇ 29) ಬೆಳಿಗ್ಗೆ ಹೀಗೆ ಆರೋಪಿಸಿರುವ ಯೂನಿಸ್ ತನ್ನ ಟ್ವಿಟರ್ ಅಕೌಂಟ್ ಡಿಲೀಟ್ ಮಾಡಲಿರುವುದಾಗಿ ಹೇಳಿಕೊಂಡಿದ್ದಾರೆ.
ಶುಕ್ರವಾರ ಟ್ವಿಟರ್ ವೀಡಿಯೋ ಮೂಲಕ ಕಾಣಿಸಿಕೊಂಡಿದ್ದ ವಾಕರ್ ಯೂನಿಸ್, ಹ್ಯಾಕರ್ ನನ್ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಅಶ್ಲೀಲ ವೀಡಿಯೋಗೆ ಲೈಕ್ ಕೊಟ್ಟಿದ್ದಾರೆ. ಹೀಗಾಗಿ ನಾನು ಇನ್ಮುಂದೆ ಸಾಮಾಜಿಕ ಜಾಲತಾಣದಿಂದ ದೂರ ಇರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಸುಮಾರು 7 ನಿಮಿಷಗಳ ಕಾಲಾವಧಿಯ ವೀಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಯೂನಿಸ್, ಆ ವೀಡಿಯೋದಲ್ಲಿ ಹ್ಯಾಕಿಂಗ್ ಘಟನೆಯ ಬಗ್ಗೆ ವಿವರಿಸಿದ್ದಾರೆ. ತನ್ನ ಸಾಮಾಜಿಕ ಜಾಲತಾಣ ಹ್ಯಾಕ್ ಆಗಿರೋದು ಇದೇ ಮೊದಲಲ್ಲ ಎಂದೂ ಯೂನಿಸ್ ತಿಳಿಸಿದ್ದಾರೆ.
'ಇವತ್ತು ಈ ವಿಚಾರ ಹೇಳಿಕೊಳ್ಳೋಕೆ ನಂಗೆ ತುಂಬಾ ಬೇಸರವಾಗುತ್ತಿದೆ. ನಾನಿವತ್ತು ಬೆಳಿಗ್ಗೆ ಎದ್ದಾಗ ಯಾರೋ ನನ್ನ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿ ಅದರಿಂದ ತೀರಾ ಕೆಳಮಟ್ಟದ ವೀಡಿಯೋಗೆ ಲೈಕ್ ಮಾಡಿದ್ದರು,' ಎಂದು ಟ್ವಿಟರ್ ವೀಡಿಯೋದಲ್ಲಿ ವಾಕರ್ ಯೂನಿಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications