ಗಂಗೂಲಿ BCCI ಅಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸಲಿಲ್ಲ: N. ಶ್ರೀನಿವಾಸನ್ ಹೇಳಿಕೆಗೆ ತಿರುಗೇಟು ನೀಡಿದ ದಾದಾ

ಬಿಸಿಸಿಐ ಅಧ್ಯಕ್ಷ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರಾವಧಿ ಇದೇ ತಿಂಗಳಿಗೆ ಮುಕ್ತಾಯವಾಗಲಿರುವುದರಿಂದ ಬಿಸಿಸಿಐ ಚುನಾವಣಾ ಪ್ರಕ್ರಿಯೆ ಆರಂಭಿಸಿದೆ. ಮುಂಬರುವ ಅಕ್ಟೋಬರ್ 18 ರಂದು ಮುಂಬೈನಲ್ಲಿ ಬಿಸಿಸಿಐ ವಾರ್ಷಿಕ ಸಭೆ ನಡೆಯಲಿದೆ. ಅಂದೇ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳ ಚುನಾವಣೆಯೂ ನಡೆಯಲಿದೆ. ಜೊತೆಗೆ ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆ ಕೂಡ ನಡೆಯಲಿದೆ.
ಇದಕ್ಕೂ ಮುನ್ನ ಹಾಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದಕ್ಕೆ ಸೌರವ್ ಗಂಗೂಲಿ ವಿರುದ್ಧ ಟೀಕೆಗಳು ಹೆಚ್ಚಾಗಿದ್ದು, ಗಂಗೂಲಿ ಅವಧಿಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತಾಗಿ ಇದೀಗ ದಾದಾ ಪ್ರತೀಕಾರದ ದಾಳಿ ನಡೆಸಿದ್ದಾರೆ.

BCCI ಅಧ್ಯಕ್ಷ ಸ್ಥಾನದಿಂದ ನಿರ್ಗಮನಕ್ಕೆ ಎನ್.ಶ್ರೀನಿವಾಸನ್ ಒತ್ತಾಯ!
ಹೌದು, ಸೌರವ್ ಗಂಗೂಲಿ ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗುವ ಇಚ್ಚಿಸಿದ್ದರೂ ಸಹ ಅವಕಾಶ ದೊರೆಯದೆ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ನಡೆದ ಉನ್ನತ ಮಟ್ಟದ ಸಲಹಾ ಸಭೆಯಲ್ಲಿ ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನದಲ್ಲಿ ಉಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ ಬಿಸಿಸಿಐ ಮತ್ತು ಐಸಿಸಿ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಗಂಗೂಲಿ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಗಂಗೂಲಿ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅವರ ಕೆಲಸ ತೃಪ್ತಿದಾಯಕವಾಗಿಲ್ಲ ಎಂದು ಆರೋಪಿಸಲಾಗಿದೆ.
ಟಿ20 ವಿಶ್ವಕಪ್: ಭಾರತ ಮತ್ತು ಪಾಕಿಸ್ತಾನ ತಂಡದ ಸ್ಟ್ರೆಂಥ್ ಮತ್ತು ವೀಕ್ನೆಸ್ ತಿಳಿಸಿದ ವಾಸಿಂ ಅಕ್ರಂ

ಗಂಗೂಲಿ ವಿರುದ್ಧ ಶ್ರೀನಿವಾಸನ್ ಆರೋಪಕ್ಕೆ ಏನು ಕಾರಣ?
2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಬ್ರಿಜೇಶ್ ಪಟೇಲ್ ಅವರನ್ನು ಕರೆತರಲು ಶ್ರೀನಿವಾಸನ್ ಭಾರಿ ಪ್ರಯತ್ನ ನಡೆಸಿದ್ದರು ಎಂದು ಹೇಳಲಾಗುತ್ತಿದ್ದು, ಕೊನೆ ಕ್ಷಣದಲ್ಲಿ ಸೌರವ್ ಗಂಗೂಲಿ ಆ ಸ್ಥಾನಕ್ಕೇರಿದ್ದಾರೆ. ಹಾಗಾಗಿ ಗಂಗೂಲಿ ಮಾತಿಗೆ ಬೆಲೆ ಇದೆ ಎಂಬುದನ್ನು ಸಾಬೀತುಪಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಸೌರವ್ ಗಂಗೂಲಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೇಶದಲ್ಲಿ ಮಹಿಳಾ ಕ್ರಿಕೆಟ್ ಅನ್ನು ನಿಭಾಯಿಸಿದ ರೀತಿಗೆ ತೀವ್ರ ಟೀಕೆಗೆ ಗುರಿಯಾಗಿದ್ದರು. ಅವರ ಅಧಿಕಾರಾವಧಿಯು ಕೆಲವು ಅರ್ಹತೆಗಳು ಮತ್ತು ಕೆಲವು ನ್ಯೂನತೆಗಳಿಂದ ಗುರುತಿಸಲ್ಪಟ್ಟಿದೆ.
ಆದ್ರೆ ಗಂಗೂಲಿ ಮತ್ತು ಜೈ ಶಾ ಅವರ ಅವಧಿಯಲ್ಲಿ ಬಿಸಿಸಿಐ ಮುಂದಿನ 5 ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕುಗಳನ್ನು ದಾಖಲೆ ಮೊತ್ತದಲ್ಲಿ ಮಾರಾಟ ಮಾಡಿರುವುದು ಪ್ರಮುಖ ಹೈಲೈಟ್ ಆಗಿದೆ.
T20 World Cup 2022: ಅತಿ ಹೆಚ್ಚು ವಿಕೆಟ್ ಪಡೆಯಬಹುದಾದ ಐವರು ಬೌಲರ್ಗಳು ಇವರು

ಸೌರವ್ ಗಂಗೂಲಿ ಖಾರವಾದ ಪ್ರತಿಕ್ರಿಯೆ
ಈ ವೇಳೆ ಸೌರವ್ ಗಂಗೂಲಿ ಎನ್. ಶ್ರೀನಿವಾಸನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಬಿಸಿಸಿಐ ಅಧ್ಯಕ್ಷನಾಗಿ ಹಲವು ಮಹತ್ತರವಾದ ಕೆಲಸಗಳನ್ನು ಪೂರ್ಣಗೊಳಿಸಿದ್ದೇನೆ. ಕೊರೊನಾ ಸಮಯದಲ್ಲಿ ಐಪಿಎಲ್ ಯಶಸ್ವಿ ಆತಿಥ್ಯ, ಐಪಿಎಲ್ ಪ್ರಸಾರದಲ್ಲಿ ಭಾರಿ ಲಾಭ, ಮಹಿಳೆಯರಿಗೆ ಐಪಿಎಲ್ ಆಯೋಜನೆ, ಕಾಮನ್‌ವೆಲ್ತ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕ, ಅಂಡರ್ 19 ತಂಡ ವಿಶ್ವಕಪ್ ಗೆದ್ದಿದೆ. ಆಸ್ಟ್ರೇಲಿಯಾದಲ್ಲಿ ಭಾರತದ ಗೆಲುವು ಮುಂತಾದ ಸಾಧನೆಗಳನ್ನು ಅವರು ಪಟ್ಟಿ ಮಾಡಿದರು.
ಮಾತನ್ನು ಮುಂದುವರಿಸಿದ ಸೌರವ್ ಗಂಗೂಲಿ ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿರುವ ತೃಪ್ತಿ ಇದೆ ಎಂದಿದ್ದಾರೆ. ಯಾರೂ ಹಲವು ವರ್ಷಗಳ ಕಾಲ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಮತ್ತು ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಮೂಲಕ ಜೈ ಶಾ ಹಾಗೂ ಶ್ರೀನಿವಾಸನ್ ವಿರುದ್ಧ ಪರೋಕ್ಷವಾಗಿ ಸೆಡ್ಡು ಹೊಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications