ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಭಾರತ ಮತ್ತು ಪಾಕಿಸ್ತಾನ ತಂಡದ ಸ್ಟ್ರೆಂಥ್ ಮತ್ತು ವೀಕ್ನೆಸ್ ತಿಳಿಸಿದ ವಾಸಿಂ ಅಕ್ರಂ

India and pakistan

ಟಿ20 ವಿಶ್ವಕಪ್‌ಗೆ ಈಗಾಗಲೇ ಎಲ್ಲಾ ತಂಡಗಳು ಸಕಲ ರೀತಿಯಲ್ಲಿ ಸಜ್ಜಾಗಿವೆ. ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಮತ್ತು ಬಾಂಗ್ಲಾ ವಿರುದ್ಧ ತ್ರಿಕೋನ ಸರಣಿಯಲ್ಲಿ ಭಾಗಿಯಾಗಿದ್ದು, ಭಾರತ ಈಗಾಗಲೇ ಎರಡು ಅಭ್ಯಾಸ ಪಂದ್ಯಗಳನ್ನ ಮುಗಿಸಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ರೆ, ಎರಡನೇ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ರನ್ ಆಸ್ಟ್ರೇಲಿಯಾ ಜಯಿಸಿತು.

ಅಕ್ಟೋಬರ್ 16ರಿಂದ ಐಸಿಸಿ ಟಿ20 ವಿಶ್ವಕಪ್‌ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾದ 22ರಂದು ಪ್ರಧಾನ ಸುತ್ತು ಆರಂಭವಾಗಲಿದೆ. 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಮ್ಮ ಮೊದಲ ಲೀಗ್ ಪಂದ್ಯವನ್ನು ಆಡಲಿವೆ.

ಹೀಗಿರುವಾಗ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ವೀಕ್ನೆಸ್‌ಗಳನ್ನ ಪಾಕ್ ಮಾಜಿ ಆಟಗಾರ ಲೆಜೆಂಡರಿ ಬೌಲರ್ ವಾಸಿಂ ಅಕ್ರಂ ರಿವೀಲ್ ಮಾಡಿದ್ದಾರೆ.

ಭುವನೇಶ್ವರ್ ಕುಮಾರ್‌ಗೆ ವೇಗದ ಕೊರತೆ

ಭುವನೇಶ್ವರ್ ಕುಮಾರ್‌ಗೆ ವೇಗದ ಕೊರತೆ

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಹಿರಿಯ ಆಟಗಾರ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಕಷ್ಟಪಡುತ್ತಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ ಹೇಳಿದ್ದಾರೆ. ಅವರು ಬೇರೆ ಯಾರು ಅಲ್ಲ ಅನುಭವಿ ವೇಗಿ ಭುವನೇಶ್ವರ್ ಕುಮಾರ್.

ಇದೇ ವೇಳೆಯಲ್ಲಿ ಭಾರತ ಪಾಕಿಸ್ತಾನ ತಂಡದ ಶಕ್ತಿ ಮತ್ತು ದೌರ್ಬಲ್ಯದ ಬಗ್ಗೆ ವಾಸಿಂ ಅಕ್ರಂ ಹೇಳಿದ್ದಾರೆ. ಭಾರತ ತಂಡದ ಹಿರಿಯ ಆಟಗಾರ ಭುವನೇಶ್ವರ್ ಕುಮಾರ್ ಅವರು ಹೊಸ ಚೆಂಡನ್ನು ಚೆನ್ನಾಗಿ ಬಳಸಬಲ್ಲರು, ಆದ್ರೆ ಅವರಿಗೆ ವೇಗದ ಕೊರತೆಯಿದೆ ಎಂದು ಭುವಿ ಹೇಳಿದ್ದಾರೆ.

T20 World Cup 2022: ಎರಡನೇ ಅಭ್ಯಾಸ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು!

ಭುವಿ ಚೆಂಡು ಸ್ವಿಂಗ್ ಆಗದಿದ್ರೆ ದುಬಾರಿಯಾಗಬಲ್ಲರು!

ಭುವಿ ಚೆಂಡು ಸ್ವಿಂಗ್ ಆಗದಿದ್ರೆ ದುಬಾರಿಯಾಗಬಲ್ಲರು!

ಟೀಂ ಇಂಡಿಯಾದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಚೆಂಡು ಸ್ವಿಂಗ್ ಆಗದಿದ್ದರೆ, ಅವರು ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಕಷ್ಟಪಡುವುದು ಖಚಿತ. ಅವರು ಅತ್ಯುತ್ತಮ ಬೌಲರ್ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುತ್ತಾನೆ. ಯಾರ್ಕರ್ ಕೂಡ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ. ಆದರೆ ನೀವು ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಮಿಂಚಬೇಕೆಂದರೆ ವೇಗ ನಿಮಗೆ ಬಹಳ ಮುಖ್ಯ ಎಂದು ವಾಸಿಂ ಅಕ್ರಂ ಹೇಳಿದ್ದಾರೆ.

ಆಸ್ಟ್ರೇಲಿಯದ ಪಿಚ್ ಹೇಗೆ ಕೆಲಸ ಮಾಡುತ್ತದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಭಾರತದ ಬ್ಯಾಟಿಂಗ್ ತುಂಬಾ ಚೆನ್ನಾಗಿದೆ. ಆದ್ರೆ ಬುಮ್ರಾ ಇಲ್ಲದಿರುವುದು ದೊಡ್ಡ ಮೈನಸ್. ಬುಮ್ರಾ ಅವರ ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ.

ಮಹಿಳಾ ಏಷ್ಯಾಕಪ್‌ 2022: ಪಾಕ್‌ ವಿರುದ್ಧ 1ರನ್‌ನಿಂದ ಗೆದ್ದು ಫೈನಲ್ ತಲುಪಿದ ಶ್ರೀಲಂಕಾ ವನಿತೆಯರು

ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದಲ್ಲಿ ಹಿನ್ನಡೆ

ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದಲ್ಲಿ ಹಿನ್ನಡೆ

ಪಾಕಿಸ್ತಾನ ತಂಡಕ್ಕೆ ಮಧ್ಯಮ ಕ್ರಮಾಂಕವು ತುಂಬಾ ಕಷ್ಟಕರವಾಗಿದೆ ಎಂದು ವಾಸಿಂ ಅಕ್ರಂ ಹೇಳಿದ್ದಾರೆ. ಪಾಕ್ ತಂಡದ ಮಿಡಲ್‌ ಆರ್ಡರ್ ಬ್ಯಾಟರ್‌ಗಳು ಉತ್ತಮವಾಗಿ ಆಡಿದರೆ ಮಾತ್ರ ಆ ತಂಡ ಇತರ ತಂಡಗಳಿಗೆ ಸಿಂಹಸ್ವಪ್ನವಾಗಲಿದೆ. ಏಕೆಂದರೆ ಪಾಕಿಸ್ತಾನದ ಬೌಲಿಂಗ್ ಅತ್ಯಂತ ಬಲಿಷ್ಠವಾಗಿದೆ. ಹಾಗೆಯೇ ಪಾಕಿಸ್ತಾನ ತಂಡದ ಓಪನರ್ ಗಳು ವಿಶ್ವದ ಅತ್ಯುತ್ತಮ ಜೋಡಿ. ಮಧ್ಯಮ ಕ್ರಮಾಂಕ ಮಾತ್ರ ಸ್ವಲ್ಪ ಮಟ್ಟಿಗೆ ಆಡಿದರೆ ಪಾಕಿಸ್ತಾನಕ್ಕೂ ವಿಶ್ವಕಪ್ ಗೆಲ್ಲುವ ಅವಕಾಶವಿದೆ ಎಂದಿದ್ದಾರೆ.

Story first published: Thursday, October 13, 2022, 23:10 [IST]
Other articles published on Oct 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X