Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

South Africa name seamers Dupavillon, Baartman for Pakistan test tour

ಕೇಪ್‌ಟೌನ್: ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಅಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಕ್ಕಾಗಿ 21 ಮಂದಿಯ ತಂಡ ಪ್ರಕಟಗೊಂಡಿದೆ. ಈ ತಿಂಗಳ ಕೊನೆಯಲ್ಲಿ ದಕ್ಷಿಣ ಆಫ್ರಿಕಾ-ಪಾಕಿಸ್ತಾನ ಮಧ್ಯೆ ಟೆಸ್ಟ್ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಇದು 14 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕ್‌ಗೆ ಪ್ರವಾಸ ಕೈಗೊಳ್ಳಲಿದೆ.

ಐಪಿಎಲ್ 2021: ಹರಾಜು, ಟೂರ್ನಿ ಆರಂಭದ ಸಂಭಾವ್ಯ ದಿನಾಂಕ ಪ್ರಕಟ

ಪಾಕಿಸ್ತಾನಕ್ಕೆ ದಕ್ಷಿಣ ಆಫ್ರಿಕಾದ ಪ್ರವಾಸ ಸರಣಿಯ ಪಂದ್ಯಗಳು ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿದೆ. ಜನವರಿ 26ರಿಂದ ಟೆಸ್ಟ್ ಸರಣಿ ನಡೆಯಲಿದೆ. ಟೆಸ್ಟ್ ಸರಣಿಗಾಗಿ ಪ್ರಕಟಿತ ದಕ್ಷಿಣ ಆಫ್ರಿಕಾ ತಂಡದಲ್ಲಿ ವೇಗಿ ಕಾಗಿಸೊ ರಬಾಡ, ಆಲ್ ರೌಂಡರ್ ಡ್ವೇನ್ ಟ್ರಿಟೋರಿಯಸ್, ಸ್ಪಿನ್ನರ್ ತಬ್ರೈಜ್ ಸಂಶಿ ಹೆಸರಿಸಲ್ಪಟ್ಟಿದ್ದಾರೆ.

ಮಂಗಳವಾರವಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ವಿಂಟನ್ ಡಿ ಕಾಕ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ 2-0ಯ ಜಯ ಗಳಿಸಿತ್ತು. ಜನವರಿ 15ರಂದು ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ ಪಾಕಿಸ್ತಾನಕ್ಕೆ ಹೊರಡಲಿದೆ. ಕರಾಚಿಯಲ್ಲಿ ತಂಡ ಕ್ವಾರಂಟೈನ್ ಪಾಲಿಸಲಿದೆ.

ಪಾಕ್ ವಿರುದ್ಧದ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ
ಕ್ವಿಂಟನ್ ಡಿ ಕಾಕ್ (ನಾಯಕ), ಟೆಂಬಾ ಬವುಮಾ, ಐಡೆನ್ ಮಾರ್ಕ್ರಾಮ್, ಫಾಫ್ ಡು ಪ್ಲೆಸಿಸ್, ಡೀನ್ ಎಲ್ಗರ್, ಕಾಗಿಸೊ ರಬಾಡಾ, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ರಾಸ್ಸಿ ವ್ಯಾನ್ ಡೆರ್ ಡುಸೆನ್, ಅನ್ರಿಕ್ ನಾರ್ಟ್ಜೆ, ವಿಯಾನ್ ಮುಲ್ಡರ್, ಲುಥೋ ಸಿಪಮ್ಲಾ ವೆರೆನ್ನೆ, ಸಾರೆಲ್ ಎರ್ವೀ, ಕೀಗನ್ ಪೀಟರ್ಸನ್, ತಬ್ರೈಜ್ ಶಮ್ಸಿ, ಜಾರ್ಜ್ ಲಿಂಡೆ, ಡ್ಯಾರಿನ್ ಡುಪಾವಿಲ್ಲನ್, ಒಟ್ನಿಯಲ್ ಬಾರ್ಟ್ಮನ್.

Story first published: Friday, January 8, 2021, 23:45 [IST]
Other articles published on Jan 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+