ಟೆಸ್ಟ್ ಕ್ರಿಕೆಟ್ ದಿಗ್ಗಜರ ಸಾಲಿಗೆ ವೇಗಿ ಡೇಲ್ ಸ್ಟೈನ್
ಢಾಕಾ, ಜುಲೈ 30: ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಅವರು ಗುರುವಾರ ಕ್ರಿಕೆಟ್ ರಂಗದ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಮೊದಲ ವಿಕೆಟ್ ಉದುರಿಸುತ್ತಿದ್ದಂತೆ 400 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಗೆ ಸ್ಟೈನ್ ಸೇರಿದರು.
ಬಾಂಗ್ಲಾದೇಶದ ಆರಂಭಿಕ ಆಟಗಾರ ಇಮ್ರುಲ್ ಕೇಯ್ಸ್, ಮೊಮಿನುಲ್ ಹಕ್ ಅವರು ಎರಡನೇ ವಿಕೆಟ್ ಗೆ ಉತ್ತಮ ಜೊತೆಯಾಟ ಪ್ರದರ್ಶಿಸಿದರು. [ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಬಿ ಡಿ ಸ್ಪೆಷಲ್ '100']
ತಮೀಮ್ ಇಕ್ಬಾಲ್ ಅವರ ವಿಕೆಟ್ ಪಡೆಯುತ್ತಿದ್ದಂತೆ 400ನೇ ವಿಕೆಟ್ ಪಡೆದ ಸಂಭ್ರಮಾಚರಣೆ ಮುಳುಗಿದರು. ಮಹಮುದ್ದುಲ್ಲಾ ವಿಕೆಟ್ ಕೂಡಾ ಪಡೆದರು. ಬಾಂಗ್ಲಾದೇಶ 75 ಓವರ್ ಗಳಲ್ಲಿ 217/5 ಸ್ಕೋರ್ ಮಾಡಿದೆ. ನಾಯಕ ಮುಫ್ಫಕೀರ್ ರಹೀಂ 65ರನ್ ಗಳಿಸಿ ಅಂತ್ಯಧಿಕ ಸ್ಕೋರರ್ ಎನಿಸಿದರು. [ಭಾರತ-ದಕ್ಷಿಣ ಆಫ್ರಿಕಾ ಸರಣಿ ದಿನಾಂಕಪಟ್ಟಿ ಪ್ರಕಟ]

ಇದಕ್ಕೂ ಮುನ್ನ ಷೇರ್ ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಷ್ಫಕೀರ್ ರಹೀಂ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಅಯ್ಕೆ ಮಾಡಿಕೊಂಡರು. 32 ವರ್ಷದ ಸ್ಟೈನ್ ಅವರು 400ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಎರಡನೇ ವೇಗಿಯಾಗಿದ್ದಾರೆ. ಶಾನ್ ಪೊಲ್ಲಾಕ್ ಅವರು 2008ರಲ್ಲಿ 421ವಿಕೆಟ್ ಪಡೆದುಕೊಂಡಿದ್ದರು. [ಹರಿಣಗಳ ಮೇಲೆ ಹರಿಹಾಯ್ದ ಬಾಂಗ್ಲಾ ಹುಲಿಗಳು]
ಒಟ್ಟಾರೆ 400 ಅಥವಾ ಅದಕ್ಕಿಂತ್ ಹೆಚ್ಚು ವಿಕೆಟ್ ಪಡೆದುಕೊಂಡ ಬೌಲರ್ ಗಳ ಪೈಕಿ ಸ್ಟೈನ್ 13ನೇ ಸ್ಥಾನದಲ್ಲಿದ್ದಾರೆ. 80 ಟೆಸ್ಟ್ ಕ್ರಿಕೆಟ್ ಆಡಿರುವ ಸ್ಟೈನ್ ಅವರು ಸಕ್ರಿಯವಾಗಿರುವ ಬೌಲರ್ ಗಳ ಪೈಕಿ ಮೂರನೆಯವರಾಗಿದ್ದಾರೆ. ಇಂಗ್ಲೆಂಡ್ ನ ವೇಗಿ ಜೇಮ್ಸ್ ಆಂಡರ್ಸನ್ ಹಾಗೂ ಭಾರತದ ಹರ್ಭಜನ್ ಸಿಂಗ್ ಅವರು ಉಳಿದಿಬ್ಬರಾಗಿದ್ದಾರೆ.
ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಚಿತ್ತಗಾಂಗ್ ನಲ್ಲಿ ಮಳೆಗೆ ಆಹುತಿಯಾಗಿತ್ತು. ಈ ಪಂದ್ಯ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಲು ಬಾಂಗ್ಲಾದೇಶ ಕಾದಿದೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications